ಸುದ್ದಿಗಳು

ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಜಗ್ಗೇಶ್

ಬೆಂಗಳೂರು, ಮಾ.18:

ನಿನ್ನೆಯಷ್ಟೇ ಸ್ಯಾಂಡಲ್ ವುಡ್ ನ ನವರಸ ನಾಯಕ ಜಗ್ಗೇಶ್ ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಜನ್ಮದಿನದ ವಿಶೇಷವಾಗಿ ಕುಟುಂಬ ಸಮೇತ ಶ್ರೀ ರಾಯರ ಸನ್ನಿಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡು ಬಂದಿದ್ದರು. ಇದೀಗ ತಮ್ಮ ಹುಟ್ಟುಹಬ್ಬವನ್ನು ಕುಟುಂಬದವರ ಜೊತೆ ಆಚರಿಸಿಕೊಂಡಿದ್ದಾರೆ.

ಹೌದು, ಜಗ್ಗೇಶ್ ತಮ್ಮ ಜನ್ಮದಿನದ ಸಂಭ್ರಮವನ್ನು ಕುಟುಂಬದವರ ಜೊತೆ ಆಚರಣೆ ಮಾಡಿಕೊಂಡಿದ್ದಾರೆ. ಈ ಖುಷಿಯ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಮ್  ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಹುಟ್ಟುಹಬ್ಬದ ಪ್ರಯುಕ್ತ ನನ್ನ ಸಣ್ಣ ಕುಟುಂಬದ ಜೊತೆ ನಾನು ಕಳೆದ ಅಮೂಲ್ಯ ಕ್ಷಣ. ಭಾವನಾತ್ಮಕವಾಗಿ ಬಂಧು ಮಿತ್ರ ಜೊತೆ ನಗುತ ಬಾಳುವವನೆ ನಿಜವಾದ ಶ್ರೀಮಂತ. ಈ ಶ್ರೀಮಂತಿಕೆ ದಯಪಾಲಿಸಿದ ರಾಯರಿಗೆ ಕೋಟಿವಂದನೆ ಎಂದಿದ್ದಾರೆ.

ಜಗ್ಗೇಶ್ ಹಲವಾರು ಸಿನಿಮಾಗಳ ಮೂಲಕ ಆಗಿನಿಂದ ಇಲ್ಲಿಯವರೆಗೂ ಅದೇ ಚಾರ್ಮ್ ನಲ್ಲಿ ಮುಂದುವರೆಸಿಕೊಂಡು ಬಂದ ನಟ. ಈಗಾಗಲೇ ಹಲವಾರು ಸಿನಿಮಾಗಳ ಮೂಲಕ ಜನಮನ ಗೆದ್ದ ಇವರು ಸಿನಿಮಾಗಳ ಜೊತೆ ಜೊತೆಗೆ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ.  ಸದ್ಯ ‘ತೋತಾಪುರಿ’ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ‘ಪ್ರೀಮಿಯರ್ ಪದ್ಮಿನಿ’ ಚಿತ್ರವೂ ಕೂಡ ತೆರೆಯ ಮೇಲೆ ಬರಲಿದೆ.

ಶಿವಣ್ಣನ ಮನೆಗೆ ಬಂತು ಹೊಸ ಅತಿಥಿ

#balkaninews #jaggesh #jaggeshbirthday #sandalwood #birthdaycelebration

Tags