ಸುದ್ದಿಗಳು

ನವರಸನಾಯಕನ ಜನುಮದಿನಕ್ಕೆ ಸರ್ ಪ್ರೈಸ್ ಗಿಫ್ಟ್ ನೀಡಿದ ಶ್ರುತಿ ನಾಯ್ಡು

ನಾಳೆ ನವರಸ ನಾಯಕ ಜಗ್ಗೇಶ್ ಗೆ ಹುಟ್ಟು ಹಬ್ಬದ ಸಂಭ್ರಮ.

ಬೆಂಗಳೂರು, ಮಾ.16:

ಜಗ್ಗೇಶ್‌ ಹುಟ್ಟು ಹಬ್ಬಕ್ಕೆ ಸರ್‌ ಪ್ರೈಸ್‌ ಗಿಫ್ಟ್‌ ಕೊಡಲು ಶ್ರುತಿ ನಾಯ್ಡು  ಮುಂದಾಗಿದ್ದಾರೆ. ಹೌದು, ಜಗ್ಗೇಶ್ ಅಭಿನಯದ ‘ಪ್ರಿಮಿಯರ್‌ ಪದ್ಮಿನಿ’ ಟ್ರೇಲರ್‌ ಬಿಡುಗಡೆ ಮಾಡುವ ಮೂಲಕ ಜಗ್ಗೇಶ್ ಅವರಿಗೆ ಸರ್ ಪ್ರೈಸ್ ಗಿಫ್ಟ್ ನೀಡುತ್ತಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ದೇಶಕಿ ಶ್ರುತಿ ನಾಯ್ಡು.

‘ಪ್ರಿಮಿಯರ್‌ ಪದ್ಮಿನಿ’ ಸಿನಿಮಾದಲ್ಲಿ ಜಗ್ಗೇಶ್‌ ಅವರು ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೆ ಅವರ ಪಾತ್ರಗಳ ಫೋಟೋಗಳನ್ನೂ ಮಾತ್ರ ರಿಲೀಸ್‌ ಮಾಡಿದ್ದೇವೆ. ಅದರ ಹೊರತಾಗಿ ಪಾತ್ರಕ್ಕಿರುವ ಆಳ, ವಿಸ್ತಾರವನ್ನೂ ಹೇಳಿರಲಿಲ್ಲ. ಇದೀಗ ಮೊದಲ ಬಾರಿಗೆ ‘ಪ್ರೀಮಿಯರ್ ಪದ್ಮಿನಿ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗುತ್ತಿದೆ. ಮುಖ್ಯವಾದ ಸಂಗತಿಯೆಂದರೆ ರೊಮ್ಯಾಂಟಿಕ್‌ ಕಾನ್ಸೆಪ್ಟ್‌ ಇಟ್ಟುಕೊಂಡು ಟ್ರೇಲರ್‌ ರೆಡಿ ಮಾಡಿದ್ದೇವೆ. ಜಗ್ಗೇಶ್‌ ಅವರ ಹುಟ್ಟು ಹಬ್ಬಕ್ಕೆ ಇದು ನಮ್ಮ ಚಿತ್ರತಂಡದ ಪರವಾಗಿ ನಮ್ಮ ಉಡುಗೊರೆ” ಎನ್ನುತ್ತಾರೆ ಶ್ರುತಿ ನಾಯ್ಡು.

“ರವಿವಾರ ದಿನ ಟ್ರೇಲರ್‌ ರಿಲೀಸ್‌ ಆಗುತ್ತಿದೆ. ರೊಮ್ಯಾಂಟಿಕ್‌ ಅಂದಾಕ್ಷಣ ವೀಕ್ಷಕರ ಮನದಲ್ಲಿ ನೂರಾರು ಕಲ್ಪನೆಗಳು ಮೂಡಿಯೇ ಮೂಡುತ್ತದೆ. ಟ್ರೇಲರ್‌ ನೋಡಿದ ಬಳಿಕವೇ ಪ್ರೇಕ್ಷಕರಿಗೆ ಅದರ ಬಗ್ಗೆ ತಿಳಿಯಲಿ” ಎನ್ನುತ್ತಾರೆ ಶ್ರುತಿ.

ನವರಸ ನಾಯಕ ಈ ಚಿತ್ರದಲ್ಲಿ ಡ್ರೈವರ್ ಆಗಿ ಕಾಣಿಸಿಕೊಂಡಿದ್ದರೂ ಅದು ಕೇವಲ ಸಾಧಾರಣ ಪಾತ್ರವಲ್ಲ. ಬದಲಿಗೆ ಅದ್ಭುತ ಹಿನ್ನೆಲೆಯುಳ್ಳ ಪಾತ್ರವೂ ಹೌದು.  ಬದುಕಿನ ನಾನಾ ಮಜಲುಗಳನ್ನು ಈ ಪಾತ್ರದ ಮೂಲಕ ಅಭಿವ್ಯಕ್ತಪಡಿಸಲು ನಿರ್ದೇಶಕ ರಮೇಶ್‌ ಇಂದಿರಾ ಪ್ರಯತ್ನಿಸಿದ್ದಾರೆ.

“ನಿಮ್ಮ ಜೀವನವನ್ನು ಪ್ರಪಂಚಕ್ಕೆ ಸಾಬೀತುಪಡಿಸುವುದರಲ್ಲಿ ಸಮಯ ಕಳೆಯ ಬೇಡಿ”!!

#jaggesh #shruthinaidu #balkaninews #PremierPadmini #kannadamovies #jaggeshbirthday

Tags