ಸುದ್ದಿಗಳು

ಉಪ್ಪಿಯೊಂದಿಗೆ ಮನಸ್ತಾಪ: ಈ ಬಗ್ಗೆ ಜಗ್ಗೇಶ್ ಹೇಳಿದ್ದೇನು..?

ಸಾಮಾನ್ಯವಾಗಿ ಅದು ಯಾವುದೇ ಕ್ಷೇತ್ರವಿರಲಿ ಎಲ್ಲಿ ಸ್ನೇಹ, ಪೈಪೋಟಿ, ತಕರಾರು ಇದ್ದೇ ಇರುತ್ತವೆ. ಆದರೆ ಅದೇನೆ ಮನಸ್ತಾಪವಿದ್ದರೂ ಕಾಲ ಎಂಬ ಔಷಧಿ ಎಲ್ಲವನ್ನೂ ಮರೆ ಮಾಚುವುದಂತೂ ಖಂಡಿತ. ಇಂಥಹುದೇ ಒಂದು ಮನಸ್ತಾಪವು ನಟರಾದ ಉಪೇಂದ್ರ ಮತ್ತು ಜಗ್ಗೇಶ್ ಅವರುಗಳಲ್ಲಿದೆ ಎಂಬ ಮಾತುಗಳು ಬಹಳ ದಿನಗಳಿಂದ ಕೇಳಿ ಬರುತ್ತಲೇ ಇತ್ತು.

ಇನ್ನು ‘ಉಪ್ಪಿ-2’ ಸಿನಿಮಾ ತೆರೆಗೆ ಬಂದಾಗ ಅದರ ಹಾಡಿನ ಸಾಲುಗಳ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿ, ಕೀಳು ಮನಸ್ತಿತಿ ಅಭಿರುಚಿ ಎಂದಿದ್ದರು. ಈ ಎಲ್ಲಾ ಮನಸ್ತಾಪಗಳಿಗೆ ಯಾವುದೇ ಕುರುಹುಗಳಿಲ್ಲದಿದ್ದರೂ ಸಹ ಕೆಲವರು ಇದು ನಿಜವೆಂದು ಬಿಂಬಿಸಿದ್ದರು. ವಿಶೇಷವೆಂದರೆ ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಅವಾರ್ಡ್ ಸಮಾರಂಭದ ಮೇಲೆ ಈ ಇಬ್ಬರು ಕಲಾವಿದರು ಕಾಣಿಸಿಕೊಂಡು, ಎಲ್ಲಾ ವಿವಾದಗಳಿಗೆ ಬ್ರೇಕ್ ನೀಡಿದ್ದಾರೆ.

ಈ ಕುರಿತು ಜಗ್ಗೇಶ್ ಸಹ ಟ್ವೀಟ್ ಮಾಡಿದ್ದು, ‘ಬಹಳ ವರ್ಷಗಳ ನಂತರ ನಾನು, ಉಪೇಂದ್ರ ಒಂದೇ ವೇದಿಕೆಯಲ್ಲಿ ಆತ್ಮೀಯ ಸಮ್ಮಿಲನ! ನಮ್ಮಿಬ್ಬರಿಗೆ ಮನಸ್ಥಾಪವಿದೆ ಎಂದು ಬಿಂಬಿಸಲಾಗಿತ್ತು! ಅದು ಸುಳ್ಳು ನಾವಿಬ್ಬರು ಒಂದೆ ಶಾರದೆ ತಾಯಿ ಮಕ್ಕಳೆಂದು ನಿರೂಪಿಸಿದೆವು ಕಲಾಬಂಧುಗಳು ನನ್ನ ಒಡಹುಟ್ಟಿದವರಂತೆ’ ಎಂದು ಬರೆದುಕೊಂಡಿದ್ದಾರೆ. ಅದೇ ರೀತಿ ಉಪೇಂದ್ರ ಸಹ. ನನಗೆ ಕಾಶೀನಾಥ್ ಹೇಗೋ ಅದೇ ರೀತಿ ಜಗ್ಗೇಶ್ ಸಹ ಹೌದು’ ಎಂದಿದ್ದಾರೆ.

ದಿಗಂತ್ ಈಗ ‘ಮಾರಿಗೋಲ್ಡ್’

#Jaggesh #JaggeshTweet  #JaggeshAndUpendra #KannadaSuddigalu

Tags