ಸುದ್ದಿಗಳು

1993 ರಲ್ಲಿಯೇ RAP ಸಾಂಗ್ ನಲ್ಲಿ ನರ್ತಿಸಿದ್ದ ಜಗ್ಗೇಶ್…!!!

26 ವರ್ಷದ ಹಿಂದೆ ನನ್ನ ಪ್ರಯತ್ನ ಮೆಲುಕು ಹಾಕಿದಾಗ ಪಶ್ಚಾತ್ತಾಪವಾಯಿತು ಎಂದ ಜಗ್ಗೇಶ್

ಬೆಂಗಳೂರು.ಮೇ.22: ಎಲ್ಲರಿಗೂ ತಿಳಿದಿರುವಂತೆ ಈಗೀಗ ಎಲ್ಲೆಡೆ RAP ಸಾಂಗ್ ಗಳದ್ದೇ ಸದ್ದು. ವಿಶೇಷವೆಂದರೆ, 26 ವರ್ಷಗಳ ಹಿಂದೆಯೇ ಅವರು RAP ಹಾಡಿಗೆ ನರ್ತಿಸಿದ್ದರು. ಈ ವಿಷಯವನ್ನು ಸ್ವತಃ ಜಗ್ಗೇಶ್ ಹೇಳಿಕೊಂಡಿದ್ದಾರೆ.

‘1993ರಲ್ಲಿ ನಾನು ನನ್ನ ಚಿತ್ರದಲ್ಲಿ ಹಾಡಿಸಿ ನಟಿಸಿದ Rapsong ಅಂದು ನನಗೆ Rap ಎಂದು ಗೊತ್ತಿರಲಿಲ್ಲಾ! ಬದಲಾಗಿ ವಿಭಿನ್ನ ಶೈಲಿ ಯತ್ನಿಸಬೇಕು ಅಂದುಕೊಂಡೆ.. 26ವರ್ಷದ ನಂತರ ಅಂದರೆ ಇಂದು Youtube ನಲ್ಲಿ Rap ಮಾಡಿದವರೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸೂಪರ್ ಸ್ಟಾರ್..

Image result for jaggesh

ಇನ್ನು 26 ವರ್ಷದ ಹಿಂದೆ ನನ್ನ ಪ್ರಯತ್ನ, ಮೆಲುಕು ಹಾಕಿದಾಗ ನನ್ನ ಬಗ್ಗೆ ನನಗೆ ಪಶ್ಚಾತ್ತಾಪವಾಯಿತು. ಕಾರಣ ನನ್ನ ಕಾಲದಲ್ಲಿ ಅದೇ ಗಿಡಮರ ಸುತ್ತಿ ಕಬ್ಬನ್ ಪಾರ್ಕ್ ಲಾಲ್ ಬಾಗ್ ನಂದಿಬೆಟ್ಟ ಅದೆ ಕಣ್ಣೀರು ಕಥೆ 6ಫೈಟು 5ಹಾಡು ಜಮಾನ.. ಆಗ ಬಂದ ನಾನು ಎಲ್ಲಾ ಹೊಸ ನಿರ್ದೇಶಕರ ಸಂಗಡ ನನ್ನ ಸ್ವಂತ ಸಂಸ್ಥೆ ಅಡಿ 29ಚಿತ್ರ ನಟಿಸಿ ನಿರ್ಮಿಸಿ ತಲೆ ಎತ್ತಿ ರಾಯರು ಕನ್ನಡಿಗರ ಆಶೀರ್ವಾದದಿಂದ ನಿಂತು ಬಿಟ್ಟೆ..

ಇದಕ್ಕೆ ನನ್ನ ಧನ್ಯವಾದ ನನ್ನ ಹಿರಿಯ ಭಾವ ಶ್ರೀನಿವಾಶ್ ರಿಗೆ ಅರ್ಪಣೆ.. ಕಾರಣ ಅಂದು ಅವರು ಜಗ್ಗಿ ನಿಮ್ಮಲ್ಲಿ ಅಗಾದವಾದ ಪ್ರತಿಭೆ ಇದೆ ಬಳಸಿಕೊಳ್ಳದಿದ್ದರೆ ನಿಮ್ಮ ಕಲಾಬದುಕು.. ಪೋಷಕ ಪಾತ್ರಕ್ಕೆ ಸೀಮಿತ ಮಾಡಿಬಿಡುತ್ತಾರೆ ಎಂದು ಸಾಲಮಾಡಿ 10ಲಕ್ಷ ತಂದು ವ್ಯೆಯಿಸಿ ನನ್ನ ಕಲಾ ಬದುಕಿಗೆ ದಾರಿದೀಪವಾದರು…

ಯಶಸ್ಸು ಬಂದಮೇಲೆ ಅನುಮಾನಿಸಿದವರು ನನ್ನ ಬಳಸಿಕೊಂಡರು..ಪಾಪ 63ದಾಟಿದ ಭಾವ ದುಬಾಯ್ ನಲ್ಲಿ ಮಗಳ ಜೊತೆ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ! ಇಂದಿನ Rappersಗಳೆ ಹೇಗಿತ್ತು 30ವರ್ಷದ ಹಿಂದಿನ ನನ್ನ ತಾಕತ್ತು..ನನ್ನ ಬದುಕಿನ ಒಂದು ಬಾಗದ ಅಮರ ಈ ಹಳೆ ನೆನಪು..’ ಎಂದು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಹಾಗೆಯೇ ಹಾಡೊಂದು ಶೇರ್ ಮಾಡಿದ್ದಾರೆ.

ಹೀಗೆ ಜಗ್ಗೇಶ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದು, ರಾಜಕೀಯ, ಸಿನಿಮಾ, ಸಮಾಜದ ಆಗು ಹೋಗುಗಳ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಾರೆ.

ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ: ಮೋಡಿ ಮಾಡುವ ‘ಐ ಲವ್ ಯೂ’ ಸಾಂಗ್

#jaggesh, #rap, #song, #old , #memories, #balkani #news #filmnews, #kannadasuddigalu

Tags