ಸುದ್ದಿಗಳು

ನಟ ಜಗ್ಗೇಶ್ ಅವರ ಚಿಕ್ಕಪ್ಪ ನಿಧನ

ಕನ್ನಡದ ನಟ ನವರಸ ನಾಯಕ ಜಗ್ಗೇಶ್ ಅವರ ತಂದೆಯ ಕೊನೆಯ ಸಹೋದರ (ಚಿಕ್ಕಪ್ಪ) ಅವರು ನಿನ್ನೆ ಇಹಲೋಕ ತ್ಯಜಿಸಿದ್ದಾರೆ.

ಈ ಬಗ್ಗೆ ಜಗ್ಗೇಶ್ ಅವರು ‘ಸಾವು ಹೀಗು ಬರುತ್ತದೆಯೇ ? ನಮ್ಮ ಚಿಕ್ಕಪ್ಪನ ಮದುವೆ ಕಂಡಿದ್ದೆ, ಆಗ ನನಗೆ ನಾನು 10 ವರ್ಷ. ಇಂದು ವಿದಾಯ ಹೇಳಿ ಬಂದೆ, ನಾಳೆಗಳನ್ನು ಬಲ್ಲವರು ಯಾರು..!’ ಎಂದು ಭಾವುಕತೆಯ ಟ್ವಿಟ್ ಮಾಡಿದ್ದಾರೆ.

ಅವರ ಚಿಕ್ಕಪ್ಪ, ಕೊಟ್ಟಿಗೆಯಲ್ಲಿದ್ದ ಕರುವನ್ನು ನೋಡಲು ಹೋಗಿದ್ದ ವೇಳೆ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.

 

Tags

Related Articles