ಸುದ್ದಿಗಳು

ಖಡಕ್ ಲುಕ್ ನಲ್ಲಿ ಅಬ್ಬರಿಸಿದ ನವರಸನಾಯಕ ಜಗ್ಗೇಶ್….!!!

ಜನಮೆಚ್ಚುಗೆ ಗಳಿಸುತ್ತಿರುವ ‘8 ಎಂ ಎಂ’ ಮಾಸ್ ಟ್ರೈಲರ್…!!

ವರಮಹಾಕ್ಷ್ಮಿ ಹಬ್ಬದ ಪ್ರಯುಕ್ತ ಬಿಡುಗಡೆಯಾದ ‘8 ಎಮ್ಎಮ್’ ಚಿತ್ರದ ಟ್ರೈಲರ್ ಗೆ ನೋಡುಗರಿಂದ ಬಾರೀ ಮೆಚ್ಚುಗೆ ಗಳಿಸಿದೆ. ಸದ್ಯ ಈ ಟ್ರೈಲರ್ ಯ್ಯೂಟ್ಯೂಬ್ ನಲ್ಲಿ ದಾಖಲೆ ಸೃಷ್ಟಿಸುತ್ತಿದೆ.

ಬೆಂಗಳೂರು, ಆ. 25: ಇಲ್ಲಿಯವರೆಗೂ ಹೆಚ್ಚಾಗಿ ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನವರಸ ನಾಯಕ ಜಗ್ಗೇಶ್ ರವರು ಇದೀಗ ಗಂಭೀರ ಪಾತ್ರವನ್ನು ಮಾಡುತ್ತಿದ್ದಾರೆ. ‘8ಎಮ್ಎಮ್’ ಎಂಬ ಹೆಸರಿನ ಚಿತ್ರದಲ್ಲಿ ಅವರು ತಮ್ಮ ನೋಟವನ್ನು ಬದಲಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಖಳನಟನ ಛಾಯೆಯಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಟ್ರೈಲರ್

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಈ ಚಿತ್ರದ ಟ್ರೈಲರ್ ಯ್ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುತ್ತಿದೆ. ‘8ಎಂಎಂ’… ಬುಲೆಟ್ ಅಂತಾ ಅಡಿಬರಹ ಇಟ್ಟುಕೊಂಡು ಬರುತ್ತಿರುವ ಈ ಚಿತ್ರದ ಟ್ರೈಲರ್ ನಲ್ಲಿ ಕೆಲವು ಕಡೆ ಪಿಸ್ತೂಲ್ ತೋರಿಸಿದ್ದಾರೆ. ಈ ಹಿಂದೆ ‘ನಿಜ’ ಚಿತ್ರದಲ್ಲಿಯೂ ಖಡಕ್ ಲುಕ್ ನಲ್ಲಿ ಅಬ್ಬರಿಸಿದ್ದರು. ಚಿತ್ರಕ್ಕಾಗಿ ಸಖತ್ ವರ್ಕ್ ಔಟ್ ಮಾಡಿರುವ ಜಗ್ಗೇಶ್ ಅವರು ದೇಹವನ್ನು ಚೆನ್ನಾಗಿ ದಂಡಿಸಿ ಫಿಟ್ ಆಗಿರೋ ಜಗ್ಗೇಶ್ ತಂದೆಯ ಪಾತ್ರ ಮಾಡಿದ್ದಾರೆ.

ಚಿತ್ರದ ಕಥೆ

ವಯಸ್ಸಾದ ಕಾಲದಲ್ಲಿ ಹಣವಿಲ್ಲದಾಗ ಏನೆಲ್ಲಾ ಪರಿಸ್ಥಿತಿಯನ್ನ ಒಬ್ಬ ತಂದೆಯು ಹೇಗೆ ಎದುರಿಸುತ್ತಾನೆ ಅನ್ನುವುದು ಚಿತ್ರದ ಕಥೆಯಾಗಿದ್ದು, ಈ ಚಿತ್ರವನ್ನು ಹರಿಕೃಷ್ಣ ಎನ್ನುವವರು ನಿರ್ದೇಶಿಸುತ್ತಿದ್ದು, ನಾರಾಯಣ ಸ್ವಾಮಿ ,ಪ್ರದೀಪ್ ಮತ್ತು ಸಲೀಮ್ ಶಾ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಜಗ್ಗೇಶ್ ನೆಗೆಟಿವ್ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಇವರೊಂದಿಗೆ ರಾಕ್ಲೈನ್ ವೆಂಕಟೇಶ್, ವಸಿಷ್ಟ ಸಿಂಹ್ ಮತ್ತು ಮಯೂರಿ ಸೇರಿದಂತೆ ಇತರರು ಅಭಿನಯಿಸಿದ್ದಾರೆ.

ಸ್ವಮೇಕ್ ಕಥೆ

“ಈ `8 ಎಂಎಂ’ ಚಿತ್ರವು ಇತ್ತೀಚೆಗೆ ತಮಿಳಿನಲ್ಲಿ ಬಿಡುಗಡೆಯಾಗಿದ್ದ `8 ತೊಟ್ಟಕ್ಕಲ್’ ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿತ್ತು. ಆದೆ ಈ ಚಿತ್ರವು ತಮಿಳಿನ ರಿಮೇಕ್ ಅಲ್ಲಾ, ಬದಲಾಗಿ ಹಲವು ದಶಕಗಳ ಹಿಂದೆ ಬಂದ ಜಪಾನಿ ಚಿತ್ರ `ಸ್ಟ್ರೇ ಡಾಗ್ಸ್’ ಈ ಚಿತ್ರಕ್ಕೆ ಸ್ಫೂರ್ತಿ” ಎಂದು ನಟ ಜಗ್ಗೇಶ್ ಹೇಳಿದ್ದಾರೆ.

Tags