ಸುದ್ದಿಗಳು

ಅಣ್ಣನ ಪ್ರೇಮಪತ್ರವನ್ನು ಅತ್ತಿಗೆಗೆ ತಲುಪಿಸಿದ ಕೋಮಲ್

ತಮ್ಮ ಹಿಂದಿನ ಪ್ರೇಮಕಥೆಯನ್ನು ನೆನಪಿಸಿಕೊಂಡ ನವರಸ ನಾಯಕ

ಈಗಿನ ಕಾಲದಂತೆ ಆಗ ಯಾವುದೇ ಸಾಮಾಜಿಕ ಜಾಲತಾಣ, ಮೋಬೈಲ್ ಫೋನ್ ಗಳು ಇರಲಿಲ್ಲ. ಆಗ ಎಲ್ಲದಕ್ಕೂ ಪತ್ರಗಳಿಗೆ ಅವಲಂಭಿಸಬೇಕಾಗಿರುತ್ತಿತ್ತು.

ಬೆಂಗಳೂರು, ಆ.30: ಸಹೋದರರಾದ ನವರಸ ನಾಯಕ ಜಗ್ಗೇಶ್ ಹಾಗೂ ಕೋಮಲ್, ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಎಲ್ಲರನ್ನೂ ರಂಜಿಸುತ್ತಾ, ನಗಿಸುತ್ತಾ ಬಂದಿದ್ದಾರೆ. ಇವರು ಬರೀ ಸಹೋದರರಲ್ಲಾ, ಒಳ್ಳೆಯ ಗೆಳೆಯರು ಎಂದು ಚಿತ್ರರಂಗದವರು ಹೇಳುತ್ತಾರೆ. ಈ ಬಗ್ಗೆ ಸ್ವತಃ ಜಗ್ಗೇಶ್ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಟೋವೊಂದನ್ನು ಹಾಕುವ ಮೂಲಕ ತಮ್ಮ ಪ್ರೇಮಕಥೆಯನ್ನು ನೆನಪಿಸಿಕೊಂಡಿದ್ದಾರೆ.

ಅಣ್ಣನ ಪ್ರೇಮಪತ್ರ

“1984ರಲ್ಲಿ ನನ್ನ ಪ್ರೇಮಪತ್ರ ಪರಿಮಳಗೆ ತಲುಪಿಸುವಾಗ ಕೋಮಲ್ ಹೀಗಿದ್ದ.. ಅಮರ ಹಳೆ ನೆನಪು.” ಅಂತ ನಟ ಜಗ್ಗೇಶ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಕಪ್ಪು ಬಿಳುಪು ಫೋಟೋವೊಂದನ್ನು ಹಾಕಿದ್ದು, ಅದರಲ್ಲಿ ಜಗ್ಗೇಶ್,ಕೋಮಲ್ ಎದುರು ಬದುರು ನಿಂತು ನಗುತ್ತಿದ್ದಾರೆ.

ತಾನು ಬರೆದಿರುವ ಪ್ರೇಮಪತ್ರವನ್ನು ಪರಿಮಳಾ ಅವರಿಗೆ ತಲುಪಿಸು ಪ್ಲೀಸ್ ಅಂತಾ ಜಗ್ಗೇಶ್ ಅವರು ವಿನಂತಿ ಮಾಡಿಕೊಳ್ಳುತ್ತದ್ದಾರೆ. ಅವರ ಪರದಾಟ ಕಂಡು ಕೋಮಲ್ ನಗುತ್ತಿದ್ದಾರೆ. ಈಗಿನ ಕಾಲದಂತೆ ಆಗ ಯಾವುದೇ ಸಾಮಾಜಿಕ ಜಾಲತಾಣ, ಮೋಬೈಲ್ ಫೋನ್ ಗಳು ಇರಲಿಲ್ಲ. ಆಗ ಎಲ್ಲದಕ್ಕೂ ಪತ್ರಗಳಿಗೆ ಅವಲಂಭಿಸಬೇಕಾಗಿರುತ್ತಿತ್ತು.

ಪ್ರೇಮಕ್ಕೆ ಸೇತುವೆಯಾಗಿದ್ದ ಕೋಮಲ್

ತಮ್ಮ ಪ್ರೇಮಕಥೆಯ ಬಗ್ಗೆ ನಟ ಜಗ್ಗೇಶ್ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ. ಪತ್ನಿ ಪರಿಮಳಾರನ್ನು ಪ್ರೀತಿಸಿದ್ದು, ಅದಕ್ಕಾಗಿ ಜೈಲಿಗೆ ಹೋಗಿದ್ದು, ನಂತರ ಓಡಿ ಹೋಗಿ ದ್ದು, ಕೋರ್ಟಿನಲ್ಲಿ ವಾದ ಮಂಡಿಸಿ, ಮದುವೆಯಾಗಿದ್ದು.. ಹೀಗೆ ಇವರಿಬ್ಬರ ನಡುವೆ, ಇಲ್ಲಿ ತಮ್ಮ ಕೋಮಲ್ ಪ್ರೇಮಪತ್ರ ತಲುಪಿಸುವವನಾಗಿದ್ದರು. ಹೀಗೆ ಹಲವು ಸಮಸ್ಯೆ, ಸಂಕಷ್ಟಗಳನ್ನ ಎದುರಿಸಿ ಈ ಜೋಡಿ 1984 ರಲ್ಲಿ ಮದುವೆಯಾದರು.

Tags