ಸುದ್ದಿಗಳು

‘ಮೈ ಭಿ ಚೌಕಿದಾರ್’ ಆದ ನವರಸ ನಾಯಕ ಜಗ್ಗೇಶ್

ಟ್ವಿಟರ್ ಖಾತೆಯಲ್ಲಿ ಹೆಸರು ಬದಲಾಯಿಸಿಕೊಂಡ ನವರಸ ನಾಯಕ

ಬೆಂಗಳೂರು.ಮಾ.24: ಸ್ಯಾಂಡಲ್ ವುಡ್ ನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುವ ನಟರಲ್ಲಿ ನವರಸ ನಾಯಕ ಜಗ್ಗೇಶ್ ಕೂಡಾ ಹೌದು. ಅವರು ಫೇಸ್ಬುಕ್ ಗಿಂತ ಹೆಚ್ಚಾಗಿ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿಆ್ಯಕ್ಟಿವ್ ಆಗಿರುತ್ತಾರೆ. ಏನೇ ಆದರೂ ಅಥವಾ ಯಾವುದಾದರೂ ವಿಷಯದ ಬಗ್ಗೆ ಮಾತನಾಡಬೇಕೆಂದರೆ ತಮ್ಮ ಟ್ವೀಟರ್ ಹಾಗೂ ಇನ್ಸ್ಟಾಗ್ರಾಮ್ ಮೂಲಕವೇ ಅವರ ಅಭಿಮಾನಿಗಳಿಗೆ ತಿಳಿಸುತ್ತಾರೆ.

ಇಷ್ಟು ದಿನಗಳ ಕಾಲ ಜಗ್ಗೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ರಾಯರ ಫೋಟೋವೊಂದನ್ನು ಹಾಕಿಕೊಂಡಿದ್ದರು. ಆದರೆ, ಇದೀಗ ಪ್ರೊಪೈಲ್ ಫೋಟೋ ಬದಲಾಯಿಸಿಕೊಂಡು, ಮೈ ಭಿ ಚೌಕಿದಾರ್’ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

ಕಾಂಗ್ರೆಸ್ ತಮಗೆ ಚೌಕಿದಾರ್ ಎಂದು ಜರಿದಿದ್ದುದನ್ನೇ ತಿರುಗು ಬಾಣವಾಗಿ ಉಪಯೋಗಿಸಿದ್ದ ಮೋದಿ, ಮೈ ಭೀ ಚೌಕಿದಾರ್ ಅಭಿಯಾನದ ಯಶಸ್ಸಿನ ಬಳಿಕ ತಮ್ಮ ಟ್ವಿಟರ್ ಖಾತೆ ಹೆಸರನ್ನು ಸಹ ‘ಚೌಕಿದಾರ್ ನರೇಂದ್ರ ಮೋದಿ’ ಎಂದು ಬದಲಾಯಿಸಿಕೊಂಡಿದ್ದರು.

ಪ್ರಧಾನಿಯನ್ನೇ ಅನುಸರಿಸಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಾವು ಕೂಡ ಚೌಕಿದಾರ್ ಅಮಿತ್ ಶಾ ಎಂದು ಬದಲಾಯಿಸಿಕೊಂಡಿದ್ದಾರೆ. ಬಳಿಕ ಪಿಯೂಷ್ ಗೋಯಲ್, ಜೆ ಪಿ ನಡ್ಡಾ, ಮೀನಾಕ್ಷಿ ಲೇಖಿ, ರವಿಶಂಕರ್ ಪ್ರಸಾದ್ ಸೇರಿದಂತೆ ಪಕ್ಷದ ಅನೇಕ ನಾಯಕರು ಸಹ ತಮ್ಮ ಟ್ವಿಟರ್ ಖಾತೆ ಹೆಸರಿಗೆ ಚೌಕಿದಾರ್ ಎಂದು ಸೇರಿಸಿಕೊಂಡಿದ್ದು ಗೊತ್ತೇ ಇದೆ.

ಹೌದು, ನಿಮ್ಮ ಕಾವಲುಗಾರ ದೃಢವಾಗಿ ನಿಂತಿದ್ದಾನೆ ಮತ್ತು ದೇಶದ ಸೇವೆ ಮಾಡುತ್ತಿದ್ದಾನೆ ಎಂಬ ಟ್ವೀಟ್ ಮೂಲಕ ಪ್ರಧಾನಿ ಮೋದಿ ಮೈ ಭಿ ಚೌಕಿದಾರ್ ಅಭಿಯಾನ ಆರಂಭಿಸಿದ ಒಂದು ದಿನದ ಬಳಿಕ ಟ್ವಿಟರ್ ಖಾತೆ ಹೆಸರು ಬದಲಾವಣೆ ಪರ್ವ ಆರಂಭವಾಯಿತು.

ಇದೀಗ ನವರಸ ನಾಯಕ ಜಗ್ಗೇಶ್ ಸಹ ‘ಮೈ ಭಿ ಚೌಕಿದಾರ್’ ಆಗಿದ್ದಾರೆ. ಈಗಲೂ ಇದೇ ಹೆಸರಿನಲ್ಲಿಯೇ ಇದ್ದಾರೆ. ಈ ಮೂಲಕ ಅವರು ಸಹ ಮೈ ಭಿ ಚೌಕಿದಾರ್’ ಆಗಿದ್ದಾರೆ.

ಆತ್ಮಹತ್ಯೆ ಬಗ್ಗೆ ಮಾತನಾಡಿದ ನಟ ಉದಯ್ ಚೋಪ್ರಾ

#jaggesh, #mybichowkidara, #balkaninews #filmnews, #kannadasuddigalu

Tags