ಸುದ್ದಿಗಳು

ಪುನೀತ್ ಹಾಗೂ ಜಗ್ಗೇಶ್ ಬರ್ತಡೇಗೆ ಶುಭ ಹಾರೈಸಿದ ದರ್ಶನ್

ಇಂದು ಸ್ಯಾಂಡಲ್ ವುಡ್ ಇಬ್ಬರು ನಟರ ಬರ್ತಡೇ

ಬೆಂಗಳೂರು.ಮಾ.17: ಇಂದು ಚಂದನವನದ ಇಬ್ಬರು ಸ್ಟಾರ್ ನಟರಾದ ನವರಸ ನಾಯಕ ಜಗ್ಗೇಶ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮದಿನ. ಅಭಿಮಾನಿಗಳೊಂದಿಗೆ ಸಿನಿಮಾ ಮಂದಿಯರು ಸಹ ಅವರುಗಳಿಗೆ ಶುಭ ಹಾರೈಸಿದ್ದಾರೆ. ಅವರಂತೆಯೇ ನಟ ಡಿ-ಬಾಸ್ ದರ್ಶನ್ ಕೂಡಾ ವಿಶ್ ಮಾಡಿದ್ದಾರೆ.

‘ಹುಟ್ಟುಹಬ್ಬದ ಶುಭಾಶಯಗಳು ಪುನೀತ್, ಚೀಯರ್ಸ್ ’ ಎಂದು ಪುನೀತ್ ಗೆ ವಿಶ್ ಮಾಡಿ ‘ಹುಟ್ಟುಹಬ್ಬದ ಶುಭಾಶಯಗಳು ಜಗ್ಗಣ್ಣ, ಸದಾ ಕಾಲ ನಗುತ್ತಿರಿ, ಎಲ್ಲರನ್ನೂ ನಗಿಸುತ್ತಿರಿ ’ ಎಂದು ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಇನ್ನು ಹಿಂದೆ ದರ್ಶನ್ ಹುಟ್ಟುಹಬ್ಬಕ್ಕೆ ಪುನೀತ್ ಹಾಗೂ ಜಗ್ಗೇಶ್ ಸಹ ವಿಶ್ ಮಾಡಿದ್ದರು. ಇವರ ಬಾಂಧವ್ಯದ ಬಗ್ಗೆ ಹೇಳುವುದಾದರೆ ದರ್ಶನ್ ಸಿನಿಮಾಗಳಿಗೆ ಪುನೀತ್ ಬಂದು ಕ್ಲ್ಯಾಪ್ ಮಾಡಿದ್ದಾರೆ. ಹಾಗೆಯೇ ‘ಅರಸು’ ಚಿತ್ರದಲ್ಲೂ ಪುಟ್ಟ ಪಾತ್ರ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಹಾಗೆಯೇ ಜಗ್ಗೇಶ್ ರೊಂದಿಗೆ ‘ಅಗ್ರಜ’ ಚಿತ್ರದಲ್ಲಿ ದರ್ಶನ್ ನಟಿಸಿದ್ದರು. ಇದಾದ ಬಳಿಕ ‘ಪ್ರೀಮಿಯರ್ ಪದ್ಮಿನಿ’ ಚಿತ್ರ ಟ್ರೈಲರ್ ಅನ್ನು ರಿಲೀಸ್ ಮಾಡಿದ್ದರು. ಹೀಗಾಗಿ ಈ ಮೂವರ ಸ್ನೇಹ ಬಾಂದವ್ಯ ಹೀಗೆಯೇ ಮುಂದುವರೆದಿದ್ದು, ಅದು ಹೀಗೆಯೇ ಇರಲಿ. ಇನ್ನು ಈ ಮೂವರು ಒಟ್ಟಿಗೆ ನಟಿಸಲಿ ಎಂಬುದು ಅಭಿಮಾನಿಗಳ ಆಸೆಯಾಗಿದೆ. ಅದು ಆದಷ್ಟು ಬೇಗನೇ ಈಡೇರಲಿ.

ನಟಿ ರಾಗಿಣಿಗಾಗಿ ಹಳೆ-ಹೊಸ ಗೆಳೆಯರಿಂದ ಮಾರಾಮಾರಿ..!!!

#jaggesh, #punitrajkumar, #birthday, #balkaninews

Tags