ಸುದ್ದಿಗಳು

ಆಕಸ್ಮಿಕವಾಗಿ ಸಿಕ್ಕ ಅಪರೂಪದ ಫೋಟೋವನ್ನು ಹಂಚಿಕೊಂಡು ಜಗ್ಗೇಶ್

ಸಾಮಾನ್ಯರಂತೆ ಸಿನಿಮಾ ಕಲಾವಿದರೂ ಸಹ ಇಂದು ಸಾಮಾಜಿಕ ಜಾಲತಾಣವನ್ನು ಬಳಸುತ್ತಾರೆ. ಅವರಲ್ಲಿ ನಟ ಜಗ್ಗೇಶ್ ರವರು ತಮ್ಮ ಸಿನಿಮಾ ಪಯಣ ಸೇರಿದಂತೆ ವಯಕ್ತಿಕ ವಿಷಯಗಳ ಕುರಿತಂತೆ ಹಂಚಿಕೊಂಡು ಅಭಿಮಾನಿಗಳೊಂದಿಗೆ ಬೆರೆಯುತ್ತಾರೆ.

ಅಂದ ಹಾಗೆ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಸತತ ನಾಲ್ಕು ದಶಕಗಳಿಂದ ವಿವಿಧ ರೀತಿಯ ಪಾತ್ರಗಳನ್ನು ಮಾಡುತ್ತಾ ಬಂದಿದ್ದಾರೆ. ಖಳನಟ, ಹಾಸ್ಯ ನಟ, ಪೋಷಕ ನಟ, ನಾಯಕ ನಟರಾಗಿ ನಿರ್ಮಾಪಕರಾಗಿ, ಹಿನ್ನೆಲೆ ಗಾಯಕರಾಗಿ ಮತ್ತು ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ.


ಇವರೀಗ ಒಂದು ಅಪರೂಪದ ಎರಡು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಇಂದು ಆಕಸ್ಮಿಕವಾಗಿ ಸಿಕ್ಕ ಈ ಅಪರೂಪದ ಚಿತ್ರ..ನೋಡುತ್ತ ಭಾವುಕನಾದೆ!ಇರುವವರೆಗು ಪ್ರೀತಿಸಿ ಪ್ರೀತಿ ಹಂಚಿ ಬಾಳಬೇಕು.. ಉಸಿರು ನಿಂತ ಮೇಲೆ ನಾವ್ಯಾರೋ ನಾವೆಲ್ಲೋ! ಬಾಚಿತಬ್ಬಿದ ಆತ್ಮೀಯನ ಆತ್ಮ ಈಗ ಎಲ್ಲೋ? ಬಲ್ಲವರಾರು ಜಗದನಿಯಮ…’ ಎಂದು ಬರೆದುಕೊಂಡಿದ್ದಾರೆ.

ಇನ್ನೊಂದು ಫೋಟೋದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ರಿಗೆ ಸಿಹಿಮುತ್ತನ್ನು ನೀಡುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಜಗ್ಗೇಶ್ ರೊಂದಿಗೆ ಜಯಮಾಲಾ, ಯಶ್, ದೊಡ್ಡಣ್ಣ, ರಾಕ್ಲೈನ್ ವೆಂಕಟೇಶ್, ಪ್ರಕಾಶ್ ರೈ, ಚಿರು ಸರ್ಜಾ, ತರುಣ್, ಪ್ರಜ್ವಲ್, ರಮೇಶ್, ಸಾಧುಕೋಕಿಲ ಸೇರಿದಂತೆ ಅನೇಕರು ಇಲ್ಲಿದ್ದಾರೆ.

ನಿಶ್ಚಿತಾರ್ಥ ಅಥವಾ ಮದುವೆ ಉಂಗುರವನ್ನು ಹೀಗೂ ಆಯ್ಕೆ ಮಾಡಿಕೊಳ್ಳಬಹುದು: ನೀವೂ ಟ್ರೈ ಮಾಡಿ

#jaggesh, #memeories, #balkaninews #filmnews, #kannadasuddigalu

Tags