ಸುದ್ದಿಗಳು

ಬೇಸಿಗೆ ಶುರುವಾಗಿದೆ, ಹೀಗಾಗಿ ಪ್ರಾಣಿ ಪಕ್ಷಿಗಳ ದಣಿವಾರಿಸಿದ ಜಗ್ಗೇಶ್

ದಯಮಾಡಿ ತಾವು ನೀರನ್ನು ಇಂದೇ ಇಡಿ.. ಪ್ರಾರ್ಥನೆ..

ಬೆಂಗಳೂರು.ಮಾ.16: ಸ್ಯಾಂಡಲ್ ವುಡ್ ನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುವ ನಟರಲ್ಲಿ ನವರಸ ನಾಯಕ ಜಗ್ಗೇಶ್ ಕೂಡಾ ಹೌದು. ಅವರು ಫೇಸ್ಬುಕ್ ಗಿಂತ ಹೆಚ್ಚಾಗಿ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿಆ್ಯಕ್ಟಿವ್ ಆಗಿರುತ್ತಾರೆ. ಏನೇ ಆದರೂ ಅಥವಾ ಯಾವುದಾದರೂ ವಿಷಯದ ಬಗ್ಗೆ ಮಾತನಾಡಬೇಕೆಂದರೆ ತಮ್ಮ ಟ್ವೀಟರ್ ಹಾಗೂ ಇನ್ಸ್ಟಾಗ್ರಾಮ್ ಮೂಲಕವೇ ಅವರ ಅಭಿಮಾನಿಗಳಿಗೆ ತಿಳಿಸುತ್ತಾರೆ.

ಈಗ ಬೇಸಿಗೆಕಾಲ ಶುರುವಾಗಿದೆ, ಹೀಗಾಗಿ ಅಭಿಮಾನಿಗಳಿಗೆ ಅವರು ಪ್ರಾಣಿ ಪಕ್ಷಿಗಳ ಪರವಾಗಿ ವಿನಂತಿಸಿಕೊಂಡಿದ್ದಾರೆ. ಹೇಳಿ ಕೇಳಿ ಇದು ಮಾರ್ಚ್ ತಿಂಗಳು, ಸಿಕ್ಕಾಪಟ್ಟೆ ಬಿಸಿಲು ಶುರುವಾಗಿದೆ. ಮನೆಯಿಂದ ಹೊರಗಡೆ ಕಾಲು ಇಡುವ ಆಗಿಲ್ಲ, ಸೂರ್ಯ ತನ್ನ ಪ್ರತಾಪ ತೋರುತ್ತಾನೆ. ಬಿಸಿಲಿಗೆ ಆಯಾಸ, ಬಾಯರಿಕೆ ಹೆಚ್ಚೆ ಆಗುತ್ತದೆ. ಅದಕ್ಕೆ ನಾವುಗಳೇ ಪದೇ ಪದೇ ನೀರು ಕುಡಿದು ಸಮಾಧಾನ ಮಾಡಿಕೊಳ್ಳುತ್ತೇವೆ. ಆದರೆ ಪ್ರಾಣಿ-ಪಕ್ಷಿಗಳ ಕಥೆಯನ್ನು ಕೇಳುವವರು ಯಾರು..???

ಅದರಲ್ಲೂ ಬೆಂಗಳೂರಿನಂತ ಸಿಟಿಯಲ್ಲಿ ಪ್ರಾಣಿ-ಪಕ್ಷಿಗಳ ಪಾಡನ್ನು ಕೇಳುವವರೇ ಇಲ್ಲ. ಹೀಗಾಗಿ ನಟ ಜಗ್ಗೇಶ್ ತಮಗೆ ಎಷ್ಟಾಗುತ್ತದೆಯೋ ಅಷ್ಟು ಸಹಾಯ ಮಾಡುತ್ತಿದ್ದಾರೆ. ತಮ್ಮ ಮನೆಯ ಮುಂದೆ, ಮನೆಯ ಮೇಲೆ ಪಾತ್ರೆಗಳಲ್ಲಿ ನೀರು ಇಟ್ಟು ಪ್ರಾಣಿ, ಪಕ್ಷಿಗಳ ದಣಿವಾರಿಸಿದ್ದಾರೆ.

 

View this post on Instagram

 

ಕಾಣದ ದೇವರಿಗೆ ಇಡುವ ನೈವೇದ್ಯಕ್ಕಿಂತ ಬಡಪಾಯಿ ಪಕ್ಷಿಗಳಿಗೆ ಹಾಗು ನೀರು ಹರಸಿ ಬರುವ ನಾಯಿಗಳಿಗೆ ಇಡುವ ನೀರೆ ಶ್ರೇಷ್ಟಪೂಜೆ.. ನನ್ನ ಮನೆಯಮೇಲೆ ಪಕ್ಷಿಗೆ..ಮನೆಯಮುಂದೆ ಮಡಕೆಯಲ್ಲಿ ಬೀದಿನಾಯಿಗಳಿಗೆ ನೀರಿಡುವೆ.. ಪಾಪಿ ಮನುಷ್ಯರು ಈ ಮಡಕೆಯು ಕದ್ದುಹೋಗುತ್ತಾರೆ! ನನ್ನ ಮನೆಯ ಅಕ್ಕಪಕ್ಕದ ವಿಧ್ಯಾವಂತರು bloody dogs comes in packs fr water ಅಂತ ಮಡಿಕೆ ಎಸೆಯುತ್ತಾರೆ! ಕೆಲವರಿಗೆ ಉಗಿದು ಓಡಿಸಿದ್ದು ಉಂಟು! ದಯಮಾಡಿ ತಾವು ನೀರನ್ನು ಇಂದೆ ಇಡಿ.. ಪ್ರಾರ್ಥನೆ..

A post shared by Jaggesh Shivalingappa (@actor_jaggesh) on

ಇನ್ನು ಈ ಬಗ್ಗೆ ಜಗ್ಗೇಶ್ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ, “ಕಾಣದ ದೇವರಿಗೆ ಇಡುವ ನೈವೇದ್ಯಕ್ಕಿಂತ ಬಡಪಾಯಿ ಪಕ್ಷಿಗಳಿಗೆ ಹಾಗೂ ನೀರು ಹರಸಿ ಬರುವ ನಾಯಿಗಳಿಗೆ ಇಡುವ ನೀರೆ ಶ್ರೇಷ್ಟ ಪೂಜೆ. ನನ್ನ ಮನೆಯ ಮೇಲೆ ಪಕ್ಷಿಗೆ, ಮನೆಯ ಮುಂದೆ ಮಡಕೆಯಲ್ಲಿ ಬೀದಿ ನಾಯಿಗಳಿಗೆ ನೀರಿಡುವೆ.” ಎಂದಿದ್ದಾರೆ. ಈ ಮೂಲಕ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

“ನಿಮ್ಮ ಜೀವನವನ್ನು ಪ್ರಪಂಚಕ್ಕೆ ಸಾಬೀತುಪಡಿಸುವುದರಲ್ಲಿ ಸಮಯ ಕಳೆಯ ಬೇಡಿ”!!

#jaggesh, #tweetaboutbirds #filmnews, #kannadasuddigalu

Tags