ಸುದ್ದಿಗಳು

ರಕ್ಷಿತ್ ಶೆಟ್ಟಿ ಕುರಿತಂತೆ ಜಗ್ಗೇಶ್ ಹೀಗೇಕೆ ಮಾತನಾಡಿದರು..!?!

ಟ್ವಿಟ್ ಮಾಡಿರುವ ಜಗ್ಗೇಶ್

ಬೆಂಗಳೂರು, ಅ.06: ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಗೆ ನಿನ್ನೆ ರಾತ್ರಿ ನಟ ರಕ್ಷಿತ್ ಶೆಟ್ಟಿ ಕುರಿತಂತೆ ನೆನಪಾಗಿದೆ. ಕೂಡಲೇ ಅವರ ಬಗ್ಗೆ ಟ್ವಿಟ್ ಮಾಡಿದ್ದಾರೆ. ಜೊತೆಗೆ ಅವರೊಂದಿಗೆ ನಟಿಸಿದ್ದ ‘ವಾಸ್ತು ಪ್ರಕಾರ’ ಚಿತ್ರವನ್ನು ನೆನಪಿಸಿಕೊಂಡಿದ್ದಾರೆ.

ಸಜ್ಜನಿಕೆಯ ವ್ಯಕ್ತಿ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯ ವ್ಯಕ್ತಿತ್ವ ಗುಣಗಾನವನ್ನು ಜಗ್ಗೇಶ್ ಮಾಡಿದ್ದಾರೆ. ಜೊತೆಗೊಂದು ಸಮಾಧಾನದ ಮಾತುಗಳು ಮತ್ತು ಬುದ್ದಿವಾದವನ್ನೂ ಹೇಳುತ್ತಾ ಟ್ವಿಟ್ ಮಾಡಿದ್ದಾರೆ.

‘ನಾನುಕಂಡ ಅದ್ಭುತ ಸಜ್ಜನಿಕೆಯ ಕಲಾಬಂಧು. ಸದಾ ಸಿನಿಮಾಗಾಗಿ ತುಡಿಯುವ ಕಲಾತಪಸ್ವಿ. ಇವನಿಗೆ ದೇವರ ದಯೆಯಿಂದ ಇನ್ನು ಎತ್ತರದ ದಿನಗಳು ಕಾದಿದೆ ಎಂದು ನನ್ನ ಮನ ಹೇಳಿತು. ನಮ್ಮ ಯಶಸ್ಸು ಕಬಳಿಸಿ ಮೇಲೇರಲು ಅನೇಕರು ಮುಖವಾಡ ಹಾಕಿ ಬರುತ್ತಾರೆ. ಇದು ಪ್ರಾಪಂಚಿಕ ವಾಮಮಾರ್ಗ ತಂತ್ರ! ಇಂಥವರನ್ನ ನಗುತ್ತ ಪಕ್ಕತಳ್ಳುವ ಕಲೆ ಕರಗತವಾಗಲಿ ಮುಂದೆ’! ಎಂದು ಜಗ್ಗೇಶ್ ಟ್ವಿಟ್ ನಲ್ಲಿ ಬರೆದುಕೊಂಡಿದ್ದಾರೆ’.

ರಶ್ಮಿಕಾ ಬಗ್ಗೆನಾ..??

ಜಗ್ಗೇಶ್ ತಮ್ಮ ಟ್ವಿಟ್​ನಲ್ಲಿ ‘ನಮ್ಮ ಯಶಸ್ಸು ಕಬಳಿಸಿ ಮೇಲೇರಲು ಅನೇಕರು ಮುಖವಾಡ ಹಾಕಿ ಬರುತ್ತಾರೆ’ ಎಂದು ಹೇಳಿದ್ದಾರೆ. ಈ ಮಾತು ಬಹುಶಃ ರಶ್ಮಿಕಾ ಮಂದಣ್ಣಕುರಿತಾಗಿ ಹೀಗೆ ಹೇಳಿರಬಹುದೇ ಎಂಬ ಅನುಮಾನಗಳು ಮೂಡಿಸುತ್ತಿವೆ. ಅಂದಹಾಗೆ ಇವರಿಬ್ಬರೂ ‘ವಾಸ್ತು ಪ್ರಕಾರ’ ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಿದ್ದರು. ಈ ಚಿತ್ರವು ತಕ್ಕಮಟ್ಟಿಗೆ ಹಿಟ್ ಆಗಿತ್ತು.

Tags

Related Articles