ಸುದ್ದಿಗಳು

ಡಿಜಿಟಲ್ ಪೇಮೆಂಟ್ ಮೂಲಕ ಜಗ್ಗೇಶ್ ಬಕ್ರಾ..?

ಬೆಂಗಳೂರು, ಫೆ.14:

ಸಾಮಾನ್ಯವಾಗಿ ಆನ್‌ ಲೈನ್ ನಲ್ಲಿ ಹಣ ಕಳೆದುಕೊಂಡವನ್ನು ನೋಡಿದ್ದೇವೆ. ಅಷ್ಟೆ ಅಲ್ಲ ಡಿಜಿಟಲ್ ಪೇಮೆಂಟ್ ಮೂಲಕವೂ ಹಣವನ್ನು ಕಳೆದುಕೊಂಡವರನ್ನು ನೋಡಿದ್ದೇವೆ. ಸೆಲಿಬ್ರಿಟಿಗಳ ವಿಚಾರಕ್ಕೆ ಬಂದರೆ ಈ ಘಟನೆಗಳಾಗೋದು ಕೊಂಚ ಕಡಿಮೆಯೇ. ಆದರೆ ಇದೀಗ ನಟ ಜಗ್ಗೇಶ್ ಡಿಜಿಟಲ್ ಪೇಮೆಂಟ್ ಮೂಲಕ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ  ನಟ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಜಗ್ಗೇಶ್‌ ಗೆ ಡಿಜಿಟಲ್ ಉಂಡೆ ನಾಮ

ಹೌದು, ಇತ್ತೀಚೆಗೆ ನಟ ಜಗ್ಗೇಶ್ ಪೆಟ್ರೋಲ್ ಬಂಕ್ ನಲ್ಲಿ ತಮ್ಮ ವಾಹನಕ್ಕೆ ಪೆಟ್ರೋಲ್ ತುಂಬಿಸಿದ್ದಾರೆ. ಈ ವೇಳೆ ಡಿಜಿಟಲ್ ಪೇಮೆಂಟ್ ಮೂಲಕ ಹಣ ಪಾವತಿ ಮಾಡಿದ್ದಾರೆ. ಈ ವೇಳೆ ಈ ನಟನ ಅಕೌಂಟ್ ನಿಂದ ಮೂರು ಬಾರಿ ಹಣ ಕಟ್ ಆಗಿದೆ. ಈ ಮೆಸೇಜ್ ಕೂಡ ಬಂದಿದೆ. ಆದರೆ ಮಿಸ್ ಆಗಿ ಮೂರು ಬಾರಿ ಕಟ್ ಆಗಿರುವುದು ನಂತರ ಅರಿವಿಗೆ ಬಂದಿದೆ.

ಎಚ್ಚರವಾಗಿರಿ ಎಂದ ಜಗ್ಗೇಶ್

ಇನ್ನು ಈ ಬಗ್ಗೆ ಟ್ವಿಟ್ ಮಾಡಿರುವ ನಟ ಜಗ್ಗೇಶ್, ಒಂದು ಬಾರಿ ಡೀಸಲ್ ಹಾಕಿ ನನ್ನ ಕ್ರೆಡಿಟ್ ಕಾರ್ಡ್‌ನಿಂದ ಮೂರು ಬಾರಿ ಪೆಟ್ರೋಲ್ ಬಂಕ್‌ಗೆ ಹಣ ವರ್ಗಾವಣೆ ಆಗಿದೆ. ಕಾರ್ಡಿನ ಬಳಕೆಯ ಅರಿವು ನನಗಿದೆ. ಓಕೆ, ಬ್ಯಾಂಕ್ ಗೆ ದೂರು ನೀಡಿ ಹಣ ಪಡೆಯುವೆ. ಆದರೆ ಅರಿವಿಲ್ಲದ ಸಾಮಾನ್ಯರ ಪಾಡೇನು. ಎಚ್ಚರವಾಗಿರಿ ಮಹನಿಯರೇ ಎಂದು ಟ್ವಿಟ್ ಮಾಡಿದ್ದಾರೆ.

#jaggesh #jaggeshmovies #jaggeshhits #jaggeshtwitter #balkaninews

Tags

Related Articles