ಸುದ್ದಿಗಳು

ಟ್ಯಾಗ್ ಮಾಡುವವರಿಗೆ ಜಗ್ಗೇಶ್ ವಾರ್ನಿಂಗ್!!

ಬೆಂಗಳೂರು,ಮೇ.19 : ನಟ ಜಗ್ಗೇಶ್ ಬೇರೆ ಬೇರೆ ವಿಚಾರ ಟ್ಯಾಗ್ ಮಾಡುವವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಸಾಮಾಜಿಕ ಜಾಲತಾಣದ ಮುಂದುವರೆದಂತೆ ಸಾಕಷ್ಟು ಬದಲಾವಣೆಗಳು ಆಗಿವೆ. ಪ್ರತಿನಿತ್ಯ ಇದನ್ನು ನೋಡುತ್ತಲೇ ಇದ್ದೇವೆ. ಇನ್ನು ಬೇರೆ ಯಾರದ್ದೋ ವಿಚಾರಗಳನ್ನು ಮತ್ಯಾರಿಗೋ ಟ್ಯಾಗ್ ಮಾಡುವ ಪರಿ ಇಂದಿಗೂ ಹೊಸತೇನಲ್ಲ. ಇನ್ನು ಸೆಲಿಬ್ರಿಟಿಗಳನ್ನು ಫಾಲೋ ಮಾಡೋವ್ರಂತೂ ಬೇರೆ ಬೇರೆ ವಿಚಾರಗಳನ್ನು ಟ್ಯಾಗ್ ಮಾಡೋದು ಕಾಮನ್ ಆಗಿ ಬಿಟ್ಟಿದೆ. ಈ ವಿಚಾರವಾಗಿ ನಟ ಜಗ್ಗೇಶ್ ಟ್ವಿಟ್ಟರ್ ನಲ್ಲಿ ವಾರ್ನಿಂಗ್ ಮಾಡಿದ್ದಾರೆ.

Image result for jaggesh

ಟ್ವೀಟ್ಟರ್ ಮೂಲಕ ವಾರ್ನಿಂಗ್

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ನಟ ಜಗ್ಗೇಶ್,

“ನಾನು ನನ್ನ ಅಭಿಮಾನಿಗಳು ಚಿತ್ರರಂಗದ ಅಭಿಪ್ರಾಯ ವಿಚಾರ ವಿನಿಮಯಕ್ಕೆ

ಸೇತುವೆ ಈ ನನ್ನ ಟ್ವೀಟ್ಟರ್ ಖಾತೆ. ಇಲ್ಲಿ ಅನಾವಶ್ಯಕ ಕಂಡವರ ವಿಚಾರ ಟ್ಯಾಗ್ ಮಾಡಿ ಪ್ರಚಾರಕ್ಕೆ ಯತ್ನಿಸುವುದು ನಾನು ಸಹಿಸೋಲ್ಲಾ. ವಿನಂತಿ. ಮುಂದುವರೆದರೆ ಅವರ ನಾನು ಬ್ಲಾಕ್ ಮಾಡುವೆ. ಪರರ ಸಂತೋಷ ಬಯಸುವ ನನ್ನ ಶ್ರೇಷ್ಟವಾಗಿ ಬಳಸಿಕೊಳ್ಳಿ. ಪ್ರೀತಿಗೆ ಗೌರವಿಸುವಿರಿ ಎಂದು ಭಾವಿಸುವೆ ಎಂದು ಹೇಳಿದ್ದಾರೆ.

ಇಲ್ಲಿಗೆ ನಿಲ್ಲುತ್ತಾ ಟ್ಯಾಗ್ ಮಾಡೋದು.

ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ನಟ ಜಗ್ಗೇಶ್, ಅಭಿಮಾನಿಗಳ ಜೊತೆ ಮಾತುಕತೆಯಲ್ಲಿ ಇದ್ದೇ ಇರುತ್ತಾರೆ. ಸದ್ಯ ಈ ನಟ ಟ್ಯಾಗ್ ಮಾಡೋವ್ರಿಂದ ಬೇಸತ್ತು ಇದೀಗ ಈ ರೀತಿ ಮಾಡಬೇಡಿ ಎಂದು ಹೇಳಿದ್ದಾರೆ. ಸದ್ಯ ನಟನ ಮಾತಿಗೆ ಬೆಲೆ ಕೊಟ್ಟು ಟ್ಯಾಗ್ ಮಾಡೋದನ್ನು ನಿಲ್ಲಿಸುತ್ತಾರಾ ಕಾದು ನೋಡಬೇಕು

‘ಗಿಮಿಕ್’’ಸಿನಿಮಾ ಟ್ರೇಲರ್ ಲಾಂಚ್!!

#jaggesh #jaggeshtweet #jaggeshmovies #sandalwood

Tags