ಸುದ್ದಿಗಳು

ಆಕಸ್ಮಿಕವಾಗಿ ‘ಗಂಧದ ಗುಡಿ’ ಸಿನಿಮಾ ನೋಡಿ ಭಾವುಕರಾದ ಜಗ್ಗೇಶ್

ಕಲಾವಿದ ದೈಹಿಕವಾಗಿ ಸತ್ತರೂ ಜನರ ಮಾನಸದಲ್ಲಿ ಉಳಿಯುವ ಚಿರಂಜೀವಿ

ಬೆಂಗಳೂರು.ಮೇ.22: ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಕನ್ನಡದ ಫಿಲ್ಮ್ ಸ್ಟಾರ್ ಗಳಲ್ಲಿ ನವರಸ ನಾಯಕ ಜಗ್ಗೇಶ್ ಕೂಡ ಒಬ್ಬರು.

ರಾಜಕೀಯ, ಸಿನೆಮಾ, ಸಮಾಜದ ಆಗು ಹೋಗುಗಳ ಬಗ್ಗೆ , ಕೆಲವೊಮ್ಮೆ ತಮ್ಮದೇ ಜೀವನದ ನೆನಪುಗಳನ್ನು ಟ್ವಿಟ್ಟರ್, ಫೇಸ್ಬುಕ್ ಹಾಗೂ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವುದರ ಮೂಲಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಾರೆ ಜಗ್ಗೇಶ್.

ಮೊನ್ನೆಯಷ್ಟೇ ಜಗ್ಗೇಶ್ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಗಂಧದ ಗುಡಿ’ ಚಿತ್ರವನ್ನು ಆಕಸ್ಮಿಕವಾಗಿ ನೋಡಿ, ಭಾವುಕರಾಗಿದ್ದಾರೆ. ಏಕೆಂದರೆ, ಡಾ. ರಾಜ್ ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಒಟ್ಟಿಗೆ ಅಭಿನಯಿಸಿದ ಮೊದಲ ಮತ್ತು ಕೊನೆಯ ಚಿತ್ರವಿದು. ಹೀಗಾಗಿ ಕೆಲವು ನೆನಪುಗಳನ್ನು ಮಾಡಿಕೊಂಡಿದ್ದಾರೆ.

Related image

ಹೌದು, 1973ರಲ್ಲಿ ತೆರೆಕಂಡಿದ್ದ ‘ಗಂಧದ ಗುಡಿ’ ಚಿತ್ರವನ್ನು ವಿಜಯ್ ನಿರ್ದೇಶನ ಮಾಡಿದ್ದರು. ಅರಣ್ಯ ಅಧಿಕಾರಿಯಾಗಿ ಅಣ್ಣಾವ್ರು ನಟಿಸಿದ್ದು, ಖಳನಾಯಕನಾಗಿ ವಿಷ್ಣುವರ್ಧನ್ ಕಾಣಿಸಿಕೊಂಡಿದ್ದರು.

ಇನ್ನು ವಿಶೇಷ ಅಂದ್ರೆ ಈ ಚಿತ್ರದಲ್ಲಿ ರಾಜ್ ಮತ್ತು ವಿಷ್ಣು ಅಣ್ಣ-ತಮ್ಮನಾಗಿ ಅಭಿನಯಿಸಿದ್ದರು. ಆದರೆ, ಈ ಚಿತ್ರದ ಕ್ಲೈಮ್ಯಾಕ್ಸ್ ವೇಳೆ ನಡೆದ ಗಂಭೀರ ಘಟನೆಯಿಂದಾಗಿ ಈ ಇಬ್ಬರು ಕಲಾವಿದರು ಮುಂದೇ ಯಾವ ಸಿನಿಮಾದಲ್ಲಿಯೂ ನಟಿಸುವ ಅವಕಾಶಗಳೇ ಬರಲಿಲ್ಲ. ಇಂತಹ ಸೂಪರ್ ಹಿಟ್ ಚಿತ್ರವನ್ನು ಜಗ್ಗೇಶ್ ನೋಡಿ, ತಮ್ಮ ಮನದಾಳದ ಅನಿಸಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

”ಆಕಸ್ಮಿಕ ಡಿಡಿ. ಅಲ್ಲಿ ಗಂಧದಗುಡಿ ಚಿತ್ರದ ಕ್ಲೈಮಾಕ್ಸ್ ನ ಈ ದೃಶ್ಯ ಕಣ್ಣಿಗೆ ಬಿತ್ತು..ಭಾವುಕನಾದೆ…ಕಾರಣ ಕಲಾವಿದ ದೈಹಿಕವಾಗಿ ಸತ್ತರೂ ಜನರ ಮಾನಸದಲ್ಲಿ ಉಳಿಯುವ ಚಿರಂಜೀವಿ ಎಂದು..ವಿಶ್ವದಲ್ಲಿ ಬೇರೆ ಯಾರಿಗುಂಟು ಈ ಸೌಭಾಗ್ಯ ಅಲ್ಲವೆ..ನಾನು ಕಂಡ ಈ ದೃಶ್ಯದ ಪಾತ್ರದಾರಿಗಳು ರಾಜಣ್ಣ ವಿಷ್ಣು ಸಾರ್ ಆಧಿವಾನಿ ಲಕ್ಷ್ಮೀಬಾಯ್ ಅಮ್ಮ ಮಕ್ಕಳಾಗಿ ಸಾವಿನಲ್ಲಿ ಒಂದಾಗುವ ಅಮೋಜ್ಞ ಅಭಿನಯ ನೀಡಿದ್ದರು… ಈಗ ಈ ಮೂವರು ವಿಧಿವಶರು ದೈಹಿಕವಾಗಿ..ಮಾನಸಿಕವಾಗಿ ಜೀವಂತರು ತೆರೆಯಮೇಲೆ..’

ನಿಜಾ, ವಿಶ್ವದಲ್ಲಿ ಎಲ್ಲರಿಗೂ ಸಾವುಂಟು, ಆದರೆ ಕಲೆಯಲ್ಲಿ ಸಂತೋಷ ಪಡಿಸುವ ಕಲಾವಿದರಿಗೆ ಸಾವಿಲ್ಲ. ಇದಲ್ಲವೇ ಜನ್ಮಾಂತರ ಪುಣ್ಯ. ಕಲಾವಿಶಾರಧೆ ಧನ್ಯೋಸ್ಮಿ..

ತನ್ನ ಮೊದಲ ನಿರ್ದೇಶನದ “ಸಲಗ” ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ ಮಾಡಿಸಿದ ದುನಿಯಾ ವಿಜಯ್

#jaggesh, #watched, #gandhadagudi, #movie, #balkaninews #filmnews, #rajkumar, #vishnuvardhan, #kannadasuddigalu

Tags