ಸುದ್ದಿಗಳು

ಧ್ವಜಾರೋಹಣ ಕೇವಲ ಶಾಲಾ ಬಾಲಕರ ಹಕ್ಕೇನು..??

ಬೆಂಗಳೂರು, ಆ. 10: ಬಾಲ್ಕನಿ ನ್ಯೂಸ್ ವತಿಯಿಂದ  ಈ ಬಾರಿಯ ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮಕ್ಕೆ ನಮ್ಮ ಓದುಗರಿಗೆ ದೇಶಭಕ್ತಿಯ ನಿಜ ಹೂರಣ ಬಡಿಸಲು ಇದೊಂದು ಕಿರುಚಿತ್ರದ ಸಾರ ಸಮರ್ಪಿಸುತ್ತಿದ್ದೇವೆ.

ಸುತ್ತಮುತ್ತಲೂ ಶಾಲಾ ಬಾಲಕರು ಅವರವರ ಶಾಲೆಯಲ್ಲಿ ಧ್ವಜಾರೋಹಣವನ್ನು ಮಾಡುವುದನ್ನು ನೋಡಿ, ಸ್ಪೂರ್ತಿಗೊಂಡ ಸ್ಲಂ-ಬಾಲರು ಯಾವ ಧೃಡತೆಯಿಂದ ತಾವೂ ಈ ದೇಶದ ಸ್ವಾತಂತ್ರ್ಯ ಹಬ್ಬವನ್ನು ಆಚರಿಸುತ್ತಾರೆ ಎಂಬ ಹೃದಯಂಗಮ ಚಿತ್ರಣ ನಿಮಗೋಸ್ಕರ ಪ್ರಸ್ತುತಿ.

72 ಸಂವತ್ಸರಗಳು ಸ್ವಾತಂತ್ರ್ಯವಾಗಿ ಆಗಿ ಹೋದರೇನು 129 ಕೋಟಿ ಪ್ರಜೆಗಳ ಸಂಖ್ಯೆಯಲ್ಲಿ ಇನ್ನೂ ಕಾಲು ಭಾಗ ಅವಕಾಶ ವಂಚಿತಗೊಳಗಾದವರು ನಿತ್ಯ ನಮ್ಮ ಜೀವನದ ಜೊತೆಗೆ ನಲುಗಿ ಹೋಗುತ್ತಿದ್ದಾರೆ.  18 ಸರ್ಕಾರಗಳು ರಾಷ್ಟ್ರ ಮಟ್ಟದಲ್ಲಿ, 500 ಕ್ಕೂ ಹೆಚ್ಚು ಸರ್ಕಾರಗಳು, ಮೂವವತ್ತು ರಾಜ್ಯಗಳು ಬಂದರೇನು ಆಡಳಿತಾತ್ಮಕ ಸವಲತ್ತುಗಳು, ಸೌಲಭ‍್ಯಗಳು ಹಳ್ಳಿಗಾಡಿನ ಕೊನೆ ಪ್ರಜೆಯನ್ನು ತಲುಪುವುದು ಇನ್ನೂ  ಮರಿಚಿಕೆಯಾಗಿಯೇ ಉಳಿದಿದೆ.

 

 

@ sunil Javali

 

 

 

 

 

 

 

 

 

 

Tags

Related Articles