ಸುದ್ದಿಗಳು

ವಿಕಲಚೇತನರ ‘ಜಕಣಚಾರಿ ಅವನ ತಮ್ಮ ಶುಕ್ಲಾಚಾರಿ’

ಬೆಂಗಳೂರು, ಫೆ.17:

ಕನ್ನಡ ಸಿನಿಮಾ ರಂಗದಲ್ಲಿ ಭಿನ್ನ ವಿಭಿನ್ನ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಪ್ರೇಕ್ಷಕರಿಗೆ ಇಷ್ಟವಾಗುವಂತಹ, ಅವರ ಅಭಿರುಚಿಗೆ ತಕ್ಕುದಾದ ಸಿನಿಮಾಗಳನ್ನು ಕನ್ನಡ ಚಿತ್ರರಂಗ ಕೊಡುತ್ತಲೇ ಇದೆ. ಹೊಸ ಹೊಸ ಪ್ರಯತ್ನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಇದೀಗ ವಿಶೇಷ ಚೇತನರ ಸಿನಿಮಾವೊಂದು ಸೆಟ್ಟೇರಿದೆ.

ವಿಶೇಷ ಚೇತನರ ಸಿನಿಮಾ

ಹೌದು, ರಾಜ ರವಿವರ್ಮಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ‘ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’ ಎಂಬ ವಿಭಿನ್ನ ಟೈಟಲ್ ಇಟ್ಟುಕೊಂಡು ಸಿನಿಮಾವೊಂದು ಸೆಟ್ಟೇರಿದೆ. ಈ ಸಿನಿಮಾ ವಿಶೇಷ ಚೇತನರ ಜೀವನ ಕಥೆಯದ್ದು. ಸಾಮಾನ್ಯವಾಗಿ ವಿಶೇಷಚೇತನರು ತುಂಬಾ ಚುರುಕು, ಛಲದವರು ಅನ್ನುವುದನ್ನು ಅನೇಕ ಬಾರಿ ನೋಡಿರುತ್ತೇವೆ. ಅಂಥಹದ್ದೇ ಕಥೆಯನ್ನು ಹೊಂದಿದೆ ಈ ಸಿನಿಮಾ‌.

ಸಿನಿಮಾದಲ್ಲಿದೆ ದೊಡ್ಡ ತಾರಾ ಬಳಗ

ಇನ್ನು ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಹೆಚ್ಚಾಗಿ ಮಕ್ಕಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮಾಸ್ಟರ್ ವಿನಯ್, ಮಾಸ್ಟರ್ ಕಿರಣ್, ಮುನಿ, ಮೂಗು ಸುರೇಶ್, ನೀನಾಸಂ ಅಶ್ವಥ್, ಮನದೀಪ್ ರಾಯ್, ಗಿರೀಶ್​ ಜತ್ತಿ, ಶಿವು, ಮೀನ, ಪಂಕಜ ರವಿಶಂಕರ್, ಮಂಜು ಸೂರ್ಯ ಸಿನಿಮಾದಲ್ಲಿ ಇದ್ದಾರೆ.  ಇನ್ನು ಈ ಸಿನಿಮಾದಲ್ಲಿ ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ ವಿ. ನಾಗೇಂದ್ರ ಪ್ರಸಾದ್.

ಆರ್ ಆರ್ ಆರ್ ಗೆ ನಾಯಕಿ ಕೊನೆಗೂ ಫಿಕ್ಸ್!!

#sandalwood #kannadamovies #balkaninews #jakanachariavanathammashuklachari

Tags

Related Articles