ಸುದ್ದಿಗಳು

ಜೇಮ್ಸ್ ಗುನ್ ಅವರ ‘ಸುಸೈಡ್ ಸ್ಕ್ವಾಡ್’ ನಲ್ಲಿ ನಟಿಸಲಿರುವ ಡೇವ್ ಬಟಿಸ್ಟಾ

ದಿ ಹಾಲಿವುಡ್ ರಿಪೋರ್ಟರ್ ವರದಿ

ಅಕ್ಟೋಬರ್, 11: ಅಮೆರಿಕಾದ ಚಲನಚಿತ್ರ ನಿರ್ಮಾಪಕ ಜೇಮ್ಸ್ ಗುನ್ ಅವರು ‘ಸುಸೈಡ್ ಸ್ಕ್ವಾಡ್’ ಚಲನಚಿತ್ರದ ಮುಂದಿನ ಭಾಗಕ್ಕೆ ನಟ ಡೇವ್ ಬಟಿಸ್ಟಾ ಸಹಿ ಹಾಕಲು ಸಿದ್ಧರಾಗಿದ್ದಾರೆ.

‘ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ’ ಸ್ಟಾರ್ ಡೇವ್ ಬಟಿಸ್ಟಾ ಅವರು ಟ್ವಿಟರ್ ನಲ್ಲಿ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಮಾರ್ವೆಲ್ ಕಾಮಿಕ್ ನ ಪ್ರತಿಸ್ಪರ್ಧಿಯಾದ ಡಿಸಿ ಯುನಿವರ್ಸ್ ಗೆ ಗುನ್ ವರ್ಗಾವಣೆಯ ಬಗ್ಗೆ ಲಿಂಕ್ ಮಾಡುತ್ತಾ ಬಟಿಸ್ಟಾ, “ನಾನು ಎಲ್ಲಿಗೆ ಸಹಿ ಮಾಡಬೇಕು!” ಎಂದು ಕಿಚಾಯಿಸಿದ್ದಾರೆ.ಟ್ವಿಟರ್ ನಲ್ಲಿ ಈ ವಿಷಯ ತಿಳಿಸಿದ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ’ ಸ್ಟಾರ್ ಡೇವ್ ಬಟಿಸ್ಟಾ

‘ಗಾರ್ಡಿಯನ್ಸ್ ಆಫ್ ಗ್ಯಾಲಕ್ಸಿ’  ಫ್ರ್ಯಾಂಚೈಸ್ ನ ಮುಂದಿನ ಕಂತಿನ ನಿರ್ಮಾಣದಿಂದ ಹೊರಬಂದ ಅಮೆರಿಕನ್ ಚಲನಚಿತ್ರ ನಿರ್ಮಾಪಕ ಇವರಾಗಿದ್ದಾರೆ. ವಾರ್ನರ್ ಬ್ರದರ್ಸ್ ಮತ್ತು ಡಿಸಿಯ ಸುಸೈಡ್ ಸ್ಕ್ವಾಡ್ ನ ಉತ್ತರಭಾಗಕ್ಕೆ ಚಿತ್ರಕಥೆ ಬರೆಯಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಕ್ರಿಪ್ಟಿಂಗ್ ಪ್ರಕ್ರಿಯೆಯ ಫಲಿತಾಂಶವನ್ನು ಅವಲಂಬಿಸಿ, ಗುನ್ ಚಿತ್ರದ ನಿರ್ದೇಶಕನ ಸ್ಥಾನವನ್ನು ತೆಗೆದುಕೊಳ್ಳಬಹುದು ಎಂದು ದಿ ಹಾಲಿವುಡ್ ರಿಪೋರ್ಟರ್ ವರದಿ ಮಾಡಿದೆ.

ಜುಲೈನಲ್ಲಿ ಡಿಸ್ನಿ ಮಾರ್ವೆಲ್ ನಿಂದ ಗುನ್ ಅವರನ್ನು ವಜಾ ಮಾಡಲಾಗಿತ್ತು. ನಂತರ ಅವರ ಕೆಲವು ಸೂಕ್ಷ್ಮ ಮತ್ತು ವಿವಾದಾತ್ಮಕ ಟ್ವೀಟ್ ಗಳು ಅಂತರ್ಜಾಲದಲ್ಲಿ ಹರಿದಾಡಿತ್ತು. ಇದಾದ ನಂತರ, ಡೇವ್ ಬಟಿಸ್ಟಾ, ಕ್ರಿಸ್ ಪ್ರ್ಯಾಟ್, ಜೊಯಿ ಸಾಲ್ಡನಾ ಮತ್ತು ಇತರ ಗಾರ್ಡಿಯನ್ಸ್ ತಾರೆಯರು ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳು ಗುನ್ ಅವರನ್ನು ಬೆಂಬಲಿಸಿದರು. ನಿರ್ದೇಶಕರನ್ನು ಮತ್ತೆ ಸೇರಿಸಿಕೊಳ್ಳಲು ತೆರೆದ ಪತ್ರವೊಂದಕ್ಕೆ ಸಹಿ ಹಾಕಿದ್ದರು.

Tags