ಸುದ್ದಿಗಳು

ಜೇಮ್ಸ್: ಇವರು ಯಾವತ್ತೂ ರೇಸ್ ಗೆ ಇಳಿಯಲ್ಲಾ, ಇಳಿದರೆ ಅದು ರೇಸೇ ಅಲ್ಲಾ..

ಎಲ್ಲರ ಮನ ಸೆಳೆದ ಜೇಮ್ಸ್ ಫಸ್ಟ್ ಲುಕ್ ಹಾಗೂ ಪೋಷನ್ ಪೋಸ್ಟರ್

ಬೆಂಗಳೂರು.ಮಾ.17: ಇಂದು ನಟ ಪುನೀತ್ ರಾಜ್ ಕುಮಾರ್ 44ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬದ ನಿಮಿತ್ತ ಅಭಿಮಾನಿಗಳು ಅಪ್ಪು ಮನೆ ಮುಂದೆ ಜಮಾಯಿಸಿ, ಶುಭ ಕೋರಿದರು. ಹಾಗೆಯೇ ಈ ಬಾರಿ ಎರಡು ಚಿತ್ರತಂಡದವರು ತಮ್ಮ ಚಿತ್ರಗಳ ಫಸ್ಟ್ ಲುಕ್ ರಿಲೀಸ್ ಮಾಡಿ, ಬರ್ತಡೇಯ ಉಡುಗೊರೆಯಾಗಿ ಅಭಿಮಾನಿಗಳಿಗೆ ನೀಡಿದ್ದಾರೆ.

ಫಸ್ಟ್ ಲುಕ್ ಪೋಸ್ಟರ್ ಗಳು

ನಿನ್ನೆ ಮಧ್ಯ ರಾತ್ರಿ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿರುವ ‘ಯುವರತ್ನ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಅದರ ‍ಬೆನ್ನಲ್ಲೇ ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಚಿತ್ರದ ಫಸ್ಟ್ ಲುಕ್ ಸಹ ರಿಲೀಸ್ ಆಗಿದೆ. ಈಗಾಗಲೇ ಈ ಎರಡೂ ಪೋಸ್ಟರ್ ಗಳಿಗೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಚಿತ್ರದ ಬಗ್ಗೆ

ಅಂದ ಹಾಗೆ ‘ಜೇಮ್ಸ್’ ಚಿತ್ರವು ಬಂದಿದ್ದರೆ ಈಗಾಗಲೇ ಮೂರು ವರ್ಷಗಳಾಗಿರಬೇಕಿತ್ತು. ಬಹುಶಃ ಈ ಸಿನಿಮಾ ನಿಂತು ಹೋಗಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಈಗ ಈ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಈ ವರ್ಷದಲ್ಲೇ ಸೆಟ್ಟೇರಲಿದೆ. ವಿಶೇಷವೆಂದರೆ, ಈ ಚಿತ್ರದ ಮೊಷನ್ ಪೋಸ್ಟರ್ ರಿಲೀಸ್ ಆಗಿದೆ.

Image result for punith raj kumar james

ಈ ಹಿಂದೆ ‘ಅಪ್ಪ-ಅಮ್ಮ ಹೆಸರಿಡುವುದು ವಾಡಿಕೆ, ತಮಗೆ ತಾವೇ ಇಟ್ಟಕೊಂಡ್ರೇ ಬೇಡಿಕೆ’ ಎಂಬ ಅಡಿಬರಹವಿದ್ದ ಜಾಗದಲ್ಲಿ ಇವರು ಯಾವತ್ತೂ ರೇಸ್ ಗೆ ಇಳಿಯಲ್ಲಾ, ಇಳಿದರೆ ಅದು ರೇಸೇ ಅಲ್ಲಾ ಎಂಬ ಸಾಲುಗಳಿದ್ದು, ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಮೂಡುತ್ತಿದೆ.

ಇನ್ನು ಈ ಮೋಷನ್ ಪೋಸ್ಟರ್ ನೋಡುತ್ತಿದ್ದರೆ ಪುನೀತ್ ಇಮೇಜ್ ಗೆ ಈ ಸಿನಿಮಾ ಎಕ್ಸ್ಟ್ರಾ ಮೈಲೇಜು ನೀಡಲಿದೆ ಎಂಬ ಮಾತು ಕೇಳಿ ಬರ್ತಿದೆ. ಈಗಾಗಲೇ ‘ಬಹದ್ದೂರ್’ ಮತ್ತು ‘ಭರ್ಜರಿ’ ಚಿತ್ರಗಳ ಮೂಲಕ ಭರ್ಜರಿ ಗೆಲುವನ್ನು ಸಾಧಿಸಿದ್ದ ಚೇತನ್ ಕುಮಾರ್ ಈ ಚಿತ್ರವನ್ನು ಮಾಡುತ್ತಿದ್ದಾರೆ.

ಸಾಮಾನ್ಯವಾಗಿ, ಬೇರೆ ನಿರ್ದೇಶಕರ ಚಿತ್ರಗಳಿಗೆ ಚೇತನ್ ಬರೆಯುವ ಹಾಡುಗಳು ಮತ್ತು ಡೈಲಾಗ್ ಗಳೇ ದೊಡ್ಡ ಮಟ್ಟದ ಅಬ್ಬರವಿಡುತ್ತವೆ. ಇನ್ನು ‘ಜೇಮ್ಸ್’ ಚಿತ್ರದಲ್ಲಿ ಕೇಳಬೇಕಾ..? ಸಖತ್ ಹಾಡುಗಳಿರುತ್ತವೆ. ಸದ್ಯ ‘ಭರಾಟೆ’ ಚಿತ್ರದಲ್ಲಿ ಬ್ಯುಸಿಯಿರುವ ಇವರು ಈ ಚಿತ್ರದ ಬಳಿಕ ‘ಜೇಮ್ಸ್’ ಕೈಗೆತ್ತಿಕೊಳ್ಳುತ್ತಾರೆ.

ಅಭಿಮಾನಿಯ ಕಡೆಯಿಂದ ವರುಣ್ ಧವನ್ ಗೆ ಸಿಕ್ತು ಸೂಪರ್ ಗಿಫ್ಟ್!!

#james, #movie, #motionposter, #balkaninews #kannadasuddigalu, #filmnews, #birthday

Tags