ಸುದ್ದಿಗಳು

ಸಿನಿರಂಗದತ್ತ ಗಣಿದಣಿ ಪುತ್ರ..!

ಬೆಂಗಳೂರು, ಏ.25:

ಇತ್ತೀಚೆಗಂತೂ ಸಿನಿಮಾ ರಂಗದವರು ರಾಜಕೀಯ ಸೇರೋದು ಹಾಗೆ ರಾಜಕೀಯ ನಾಯಕರ ಮಕ್ಕಳು ಸಿನಿಮಾ ರಂಗದತ್ತ ಧಾವಿಸೋದು ಮಾಮೂಲಿಯಾಗ್ಬಿಟ್ಟಿದೆ. ಸದ್ಯ ಈ ಸಾಲಿನಲ್ಲಿ ಕೇಳಿಬರ್ತಿರೋದು ಗಣಿದಣಿ ಹಾಗೂ ಮಾಜಿ ಸಚಿವರಾಗಿದ್ದ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕೀರ್ತಿ ರೆಡ್ಡಿ.

ಸದ್ಯ ಸಿನಿ ಇಂಡಸ್ಟ್ರಿಗೆ ಬರಲು ಸಜ್ಜಾಗಿರುವ ಕೀರ್ತಿ ರೆಡ್ಡಿ ರಾಜಕೀಯದಲ್ಲೂ ಮಿಂಚ್ತಾರೆ ಅನ್ನೋ ಮಾತುಗಳು ಸಹ ಹರಿದಾಡ್ತಿವೆ. ಪ್ರಸ್ತುತ ವಿದೇಶದಲ್ಲಿ ಪೊಲಿಟಿಕಲ್ ಸೈನ್ಸ್ ನಲ್ಲಿ ಉನ್ನತ ಅಭ್ಯಾಸ ಮಾಡ್ತಿರೋ ಕೀರ್ತಿ, ಜೊತೆಜೊತೆಗೆ ಡ್ಯಾನ್ಸ್, ಫೈಟಿಂಗ್ ಸೇರಿದಂತೆ ಆ್ಯಕ್ಟಿಂಗ್ ಗೆ ಬೇಕಾದ ಎಲ್ಲಾ ರೀತಿಯ ಅಭ್ಯಾಸಗಳನ್ನು ಮಾಡ್ತಿದ್ದಾರೆ.  ಅಗತ್ಯವಾದ ಕೋಚಿಂಗ್ ಕೂಡ ಪಡೆಯುತ್ತಿದ್ದಾರೆ. ಇನ್ನೂ ಕೀರ್ತಿ ಸ್ವದೇಶಕ್ಕೆ ವಾಪಸ್ಸಾದ ಕೂಡಲೇ ಮಗನಿಗಾಗಿ ಚಿತ್ರ ನಿರ್ಮಿಸಲಿರುವ ಜನಾರ್ಧನ ರೆಡ್ಡಿ ಈಗಾಗಲೇ ತೆಲುಗಿನ ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ ಹಾಗೂ ವಿವಿ ವಿನಾಯಕ್ ಅವರನ್ನು  ಸಂಪರ್ಕಿಸಿದ್ದಾರಂತೆ. ಒಟ್ಟಿನಲ್ಲಿ ಕೀರ್ತಿ ರೆಡ್ಡಿ ಚಿತ್ರರಂಗಕ್ಕೆ ಬರೋದಂತು ಫೈನಲ್ ಆಗಿದ್ದು, ಯಾವಾಗ ಅನ್ನೋದು ಮಾತ್ರ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

Image may contain: 1 person, sitting and beard

Image may contain: 1 person, car and outdoor

‘ಯೂ ಟರ್ನ್’ ಬೆಡಗಿಯ ನ್ಯೂ ಫೋಟೊಶೂಟ್

#balkaninews #sandalwood #janardhanareddy #janardhanareddymovies

Tags