ಸುದ್ದಿಗಳು

‘ಕಳಂಕ್’ ಚಿತ್ರದಲ್ಲಿ ಶ್ರೀದೇವಿ ಜಾಗಕ್ಕೆ ಬಂದ ಮಾಧುರಿ ಬಗ್ಗೆ ನಟಿ ಜಾಹ್ನವಿ ಕಪೂರ್ ಹೇಳಿದ್ದೇನು…?

ಮುಂಬೈ, ಮಾ.21:

ನನಗೆ ಹೆಸರು ತಂದುಕೊಳ್ಳುವುದಕ್ಕಿಂತ ನನ್ನ ಚಿತ್ರಗಳು ನನಗೆ ತುಂಬಾ ಮಹತ್ವದ್ದು. ನಾನು ಪ್ರಸಿದ್ಧಿಯನ್ನು ಬಾಲ್ಯದಿಂದಲೇ ಅನುಭವಿಸಿದ್ದೇನೆ. ಆದರೆ ಚಿತ್ರರಂಗ ನನಗೆ ಇದೀಗ ಹೊಸತು. ನನ್ನ ಮೊದಲ ಚಿತ್ರದ ಬಳಿಕ ನನ್ನ ಪ್ರಸಿದ್ಧಿ ಹೆಚ್ಚಾಗಿದೆ. ಪ್ರತಿಯೊಬ್ಬರ ನಟಿಗೂ ಫೇಮ್ ತುಂಬಾ ಮಹತ್ವದ್ದೆ .

ನಾನು ಈಗ ಏನು ಗಳಿಸಿದ್ದೇನೋ ಅದು ನನ್ನ ಕುಟುಂಬದಿಂದ ಪಡೆದಿದ್ದು ಎಂದಿದ್ದಾರೆ ನಟಿ ಜಾಹ್ನವಿ ಕಪೂರ್.  ಪ್ರೇಕ್ಷಕರ ಪ್ರೀತಿ ವಿಶ್ವಾಸಕ್ಕ ನಾನು ಋಣಿ ಎಂದಿರುವ ಜಾಹ್ನವಿ ಕಪೂರ್, ‘ಧಡಕ್’ ಚಿತ್ರ ನನಗೆ ಹೊಸ ಅನುಭವ ಕೊಟ್ಟಿತ್ತು. ಅಷ್ಟೇ ಅಲ್ಲ ಚಿತ್ರ ನನಗೆ ಮಹತ್ವದ್ದೂ ಆಗಿತ್ತು. ಈ ಚಿತ್ರದ ಬಳಿಕ ನನ್ನನ್ನು ಗುರುತಿಸುವ ರೀತಿ ಬದಲಾಯಿತು. ಇಂದು ನಾನು ಏನಾಗಿದ್ದೇನೋ ಅಂದಕ್ಕೆ ನನ್ನ ಕುಟುಂಬ ಸದಸ್ಯರ ಬೆಂಬಲವೇ ಕಾರಣ ಎಂದಿದ್ದಾರೆ ಜಾಹ್ನವಿ.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತನ್ನ ಅನುಭವ ಬಿಚ್ಚಿಟ್ಟ ಜಾಹ್ನವಿ

ಜಾಹ್ನವಿ ಕಪೂರ್ ಶ್ರೀದೇವಿ ಹಾಗೂ ಬೋನಿಕಪೂರ್ ಹಿರಿಯ ಪುತ್ರಿ. ಜಾಹ್ನವಿ ‘ಧಡಕ್’ ಚಿತ್ರದ ಮೂಲಕ ತೆರೆಗೆ ಬರಲು ರೆಡಿಯಾಗುತ್ತಿದ್ದ ದಿನಗಳದು. ಚಿತ್ರೀಕರಣ ಬಹುತೇಕ ಮುಗಿದಿತ್ತು. ಶ್ರೀದೇವಿ ಕೂಡ ಮಗಳ ಅಭಿನಯದ ಫೂಟೇಜ್ ನೋಡಿದ್ದರು. ದುರದೃಷ್ಟವೆಂಬಂತೆ ಚಿತ್ರ ಬಿಡುಗಡೆಗೆ ಮೊದಲೇ ಅವರು ಇಹಲೋಕ ತ್ಯಜಿಸಿದರು. ಒಂದು ವೇಳೆ ಶ್ರೀದೇವಿ ಬದುಕಿಸಿದ್ದರೆ ಅವರು ‘ಕಳಂಕ್’ ಚಿತ್ರದಲ್ಲಿ ನಟಿಸಬೇಕಿತ್ತು.

ಆದರೆ ವಿಧಿಯಾಟಕ್ಕೆ ಆಕೆ ಬಲಿಯಾಗಿದ್ದರಿಂದ ‘ಕಳಂಕ್’ ಚಿತ್ರದಲ್ಲಿ ಶ್ರೀದೇವಿ ಪಾತ್ರವನ್ನು ಮಾಧುರಿ ದೀಕ್ಷಿತ್ ನಿರ್ವಹಿಸಿದ್ದಾರೆ. ಮಾಧುರಿ ದೀಕ್ಷಿತ್ ಕುರಿತಂತೆ ಮಾತನಾಡಿರುವ ಜಾಹ್ನವಿ ಕಪೂರ್, ಒಬ್ಬ ಪ್ರೇಕ್ಷಕಿಯ ದೃಷ್ಟಿಕೋನದಲ್ಲಿ ನನಗೆ ‘ಕಳಂಕ್’ ಚಿತ್ರದಲ್ಲಿನ ಮಾಧುರಿ ದೀಕ್ಷಿತ್ ಪಾತ್ರ ನೋಡಲು ಎಕ್ಲೈಟ್ ಆಗುತ್ತಿದ್ದು, ಚಿತ್ರದ ಟೀಸರ್ ಈಗಾಗಲೇ ಮನಗೆದ್ದಿದೆ ಎಂದಿದ್ದಾರೆ ಜಾಹ್ನವಿ. ಇನ್ನೂ ಜಾಹ್ನವಿ ಕಪೂರ್ ಸದ್ಯಕ್ಕೆ ಗಂಜನ್ ಸೆಕ್ಸೆನಾ ಅವರ ಬಯೋಪಿಕ್ ನಲ್ಲಿ ನಟಿಸುತ್ತಿದ್ದಾರೆ.

ರೋಸ್ ವಾಟರ್ ಎಂಬ ನೈಸರ್ಗಿಕ ಸೌಂದರ್ಯವರ್ಧಕ

#balkaninews #bollywood #madhuridixit #janhvikapoor #shridevi #shrideviandjanhvikapoor

Tags

Related Articles