ಸುದ್ದಿಗಳು

ಜನವರಿ 7ರಂದು ಮೋದಿ ಬಯೋಪಿಕ್ ಸಿನಿಮಾದ ಫಸ್ಟ್ ಲುಕ್ ರಿಲೀಸ್

ಮುಂಬೈ, ಜ.05: ಇತ್ತೀಚೆಗೆ ಮಾಜಿ ಪಿಎಂ ಮನ್ ಮೋಹನ್ ಸಿಂಗ್ ಅವರ ಜೀವನಾಧಾರಿತ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ ಅನ್ನುವ ವಿಚಾರ ಬಹಳಷ್ಟು ಚರ್ಚೆಯಾಗಿತ್ತು. ಇದೀಗ ಈ ಬೆನ್ನಲ್ಲೇ ಪ್ರಸ್ತುತ ಪಿಎಂ ನರೇಂದ್ರ ಮೋದಿಯವರ ಜೀವನಾಧಾರಿತ ಸಿನಿಮಾ ಕೂಡ ಬರುತ್ತಿದೆ. ಈಗಾಗಲೇ ಈ ಸಿನಿಮಾ ಟೈಟಲ್ ಕೂಡ ಫಿಕ್ಸ್ ಆಗಿದೆ. ಅಷ್ಟೆ ಅಲ್ಲ ಇದೇ ತಿಂಗಳ 7ರಂದು ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದೆ‌.

ಮೋದಿಯವರ ಬಯೋಪಿಕ್

ಇತ್ತೀಚಿನ ದಿನಗಳಲ್ಲಿ ಬಯೋಪಿಕ್ ಸಿನಿಮಾಗಳಿಗೇನು ಕಡಿಮೆ ಇಲ್ಲ. ಯಾಕೆಂದರೆ ಬಹಳಷ್ಟು ಮಂದಿಯ ಜೀವನಾಧಾರಿತ ಸಿನಿಮಾಗಳು ತೆರೆ ಕಂಡಿವೆ. ಅಷ್ಟೆ ಅಲ್ಲ ಪ್ರೇಕ್ಷಕರು ಕೂಡ ಬಯೋಪಿಕ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇದೀಗ ನರೇಂದ್ರ ಮೋದಿಯವರ ಬಯೋಪಿಕ್ ಸಿನಿಮಾ ಕೂಡ ತೆರೆ ಕಾಣಲು ಸಿದ್ದತೆ ನಡೆಸಿದೆ. ಪ್ರಧಾನ ಮಂತ್ರಿಯವರ ಜೀವನ, ಪಿಎಂ ಆದ ಘಟನೆಗಳು ಹೀಗೆ ಎಲ್ಲವನ್ನು ಎಳೆ ಎಳೆಯಾಗಿ ಬಿಚ್ಚಿಡಲು ತಯಾರಿಗಳು ನಡೆದಿವೆ.

Image result for modi biopic

ಜನವರಿ 7ರಂದು ಫಸ್ಟ್ ಲುಕ್

ಇನ್ನು ಈ ಬಯೋಪಿಕ್ ಸಿನಿಮಾಗೆ ಪಿಎಂ ನರೇಂದ್ರ ಮೋದಿ’ ಎಂಬ ಟೈಟಲ್ ಇಡಲಾಗಿದೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಜನವರಿ 7 ರಂದು ಬಿಡುಗಡೆಯಾಗಲಿದೆ. ಮೋದಿ ಪಾತ್ರಧಾರಿಯಾಗಿ ವಿವೇಕ್ ಒಬೆರಾಯ್ ಅಭಿನಯಿಸಲಿದ್ದಾರೆ. ಇನ್ನು, ಚಿತ್ರದ ಶೂಟಿಂಗ್ ಜನವರಿ ಮಧ್ಯದಲ್ಲಿ ಆರಂಭವಾಗಲಿದೆಯಂತೆ. ಒಮಂಗ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಸಂದೀಪ್ ಎಸ್ ಸಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಹೀಗೆ ತರಣ್ ಆದರ್ಶ್ ಟ್ವಿಟ್ ಮಾಡಿದ್ದಾರೆ. ಇನ್ನು ಮೋದಿಯವರ ಪಾತ್ರದಲ್ಲಿ ವಿವೇಕ್ ಒಬೇರಾಯ್ ನಟಿಸುತ್ತಿದ್ದಾರೆ.

Tags