ಸುದ್ದಿಗಳು

ಬಿಡುಗಡೆಗೆ ಸಿದ್ದವಾಯ್ತು ‘ಜನುಮದ ಸ್ನೇಹಿತರು’

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಒಂದೇ ಎಂಬ ಸಂದೇಶ ಸಾರುವ ಸಿನಿಮಾ

ಬೆಂಗಳೂರು, ಡಿ.6: ಬಹುತೇಕ್ ಹೊಸಬರೇ ಮಾಡಿರುವ ‘ಜನುಮದ ಸ್ನೇಹಿತರು’ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು, ಇದೀಗ ಸೆನ್ಸಾರ್ ಮನೆಯಲ್ಲಿದೆ. ಈ ಚಿತ್ರವನ್ನು ಇಂಡಿಯನ್ ಫಿಲಂ ಇಂಡಸ್ಟ್ರಿಸ್ ಲಾಂಛನದಲ್ಲಿ ಶೈಕ್ ಮುಕ್ತಿಯಾರ್ ಕಥೆ ಬರೆದು ನಿರ್ಮಿಸಿದ್ದಾರೆ.

ಚಿತ್ರದ ಕಥಾಹಂದರ

ಚಿತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಒಂದೇ ಎಂಬ ಸಂದೇಶ ಸಾರುವ ಹಾಗೂ ಫ್ಯಾಕ್ಟರಿಯಲ್ಲಿ ಕಾರ್ಮಿಕ, ಮಾಲೀಕನ ಸುತ್ತಮುತ್ತ ನಡೆಯುವ ಕಥೆಯನ್ನು ತೋರಿಸಲಾಗಿದ್ದು ಮುಂದಿನ ವರ್ಷ ಜನವರಿ ತಿಂಗಳಿನಲ್ಲಿ ತೆರೆಗೆ ಬರಲಿದೆ.

ಚಿತ್ರದ ಬಗ್ಗೆ

ಈ ಚಿತ್ರದಲ್ಲಿ ರೋಹಿತ್ ಶೆಟ್ಟಿ, ಅಂಗಾರಿಕ, ಶ್ರೀಧರ್ ಶೆಟ್ಟಿ, ಮೂಗು ಸುರೇಶ್, ರವಿ, ಹರೀಶ್, ದೇವರಾಜ್, ನವೀನ್, ಪ್ರಭಾಕರ್, ವಿನೋದ್ ಇನ್ನೂ ಮುಂತಾದವರ ತಾರಾಬಳಗವಿದ್ದು, ಪರುಶುರಾಮ್ ನಾವಳ್ಳಿ ನಿರ್ದೇಶಿಸಿದ್ದಾರೆ.

ಈಗಾಗಲೇ ಚಿತ್ರದ ಹಾಡುಗಳು ಎಲ್ಲರ ಮೆಚ್ಚುಗೆ ಗಳಿಸಿದ್ದು. ಚಿತ್ರಕ್ಕೆ , ಎ.ರಾಜ್ ಕುಮಾರ್ ಸಂಗೀತ ನೀಡಿದ್ದಾರೆ. ಉಳಿದಂತೆ ಕೃಷ್ಣಸಾರಥಿ ಛಾಯಾಗ್ರಹಣ, ಶ್ರೀಧರ್ ಶೆಟ್ಟಿ ಚಿತ್ರಕಥೆ, ಸಂಭಾಷಣೆ ಹಾಗೂ ಸಹ ನಿರ್ದೇಶನ, ಜಗ್ಗು ನೃತ್ಯ ನಿರ್ದೇಶನ ಸುಪ್ರಿತ್ ಶಂಕರ್ ಸಂಕಲನವಿದೆ.

Tags