ಸುದ್ದಿಗಳು

ಜಯಲಲಿತ ಮತ್ತು ಶಶಿಕಲಾ ಬಯೋಪಿಕ್ ನಲ್ಲಿ ನಟಿಸಲಿರುವ ಕಾಜೋಲ್ ಹಾಗೂ ಅಮಲಾ ಪೌಲ್..!!?!!

ಚೆನೈ, ಏ.11:

ತಮಿಳುನಾಡನ್ನೇ ಆಳಿದ ತಲೈವಿ, ಜನಗಳ ಪ್ರೀತಿಯ ಅಮ್ಮ ಜಯಲಲಿತ ಅವರ ಬಯೋಪಿಕ್ ಚಿತ್ರ ಮಾಡುವುದಕ್ಕೆ ಈಗಾಗಲೇ ಅನೇಕ ಮಂದಿ ಆಸಕ್ತಿ ತೋರಿಸಿದ್ದಾರೆ. ಅಷ್ಟೇ ಅಲ್ಲ ಈಗಾಗಲೇ ಕೆಲವೊಬ್ಬರು ಇವರ ಬಯೋಪಿಕ್ ಸಿನಿಮಾ ಟೈಟಲ್ ಗಳನ್ನು ಘೋಷಣೆ ಮಾಡಲಾಗಿದೆ. ಇನ್ನೂ ಚಿತ್ರೀಕರಣ ಕೂಡ ಪ್ರಾರಂಭವಾಗಿವೆ. ಇದೀಗ ಶಶಿಲಲಿತ ಎನ್ನುವ ಚಿತ್ರ ತೆರೆಗೆ ಬರಲು ಸಿದ್ದತೆ ನಡೆಸಿದೆ.

ಶಶಿಲಲಿತಾ ಚಿತ್ರಕ್ಕೆ ನಾಯಕಿಯರು ರೆಡಿ..?

ಹೌದು,  ಸದ್ಯ ಜಯಲಲಿತ ಬಯೋಪಿಕ್ ಹಾಗೂ ವೆಬ್ ಸೀರೀಸ್ ಪೈಕಿ ಇದೀಗ ಶಶಿ ಲಲಿತ ಚಿತ್ರ ಕೂಡ ಒಂದು. ಸದ್ಯ ಶಶಿ ಲಲಿತ ಎನ್ನುವ ಟೈಟಲ್ ಕೂಡ ಫಿಕ್ಸ್ ಆಗಿದೆ. ಇದೀಗ ಈ ಚಿತ್ರದಲ್ಲಿ ಶಶಿಕಲಾ ಹಾಗೂ ಜಯಲಲಿತ ಅವರ ಕಥೆಯನ್ನು ಆಧರಿಸಿದೆಯಂತೆ. ಈಗಾಗಲೇ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ಈ ಫೋಸ್ಟರ್ ಕೂಡ ವಿಭಿನ್ನವಾಗಿ ಮೂಡಿ ಬಂದಿದೆ.

ಜಯಲಲಿತಾ ಪಾತ್ರಕ್ಕೆ ಕಾಜೋಲ್

ಇದೀಗ ಹೊಸ ಸುದ್ದಿಯೆಂದರೆ, ಈ ಶಶಿ ಲಲಿತ ಚಿತ್ರದಲ್ಲಿ ಕಾಜೋಲ್ ಹಾಗೂ ಅಮಲಾ ಪೌಲ್ ನಟಿಸುತ್ತಿದ್ದಾರೆಂಬ ಸುದ್ದಿ ಓಡಾಡುತ್ತಿದೆ. ಜಯಲಲಿತ ಪಾತ್ರದಲ್ಲಿ ಕಾಜೋಲ್ ಕಾಣಿಸಿಕೊಳ್ಳುತ್ತಿದ್ದು, ಶಶಿಕಲಾ ಪಾತ್ರದಲ್ಲಿ ಅಮಲಾ ಪೌಲ್ ಕಾಣಿಸಲಿದ್ದಾರಂತೆ. ಈಗಾಗಲೇ ಈ ಸಿನಿಮಾ ವಿಚಾರವಾಗಿ ಇಬ್ಬರನ್ನು ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ.

ಕೆ ಜಗದೀಶ್ವರ ರೆಡ್ಡಿ ನಿರ್ದೇಶನದ ಚಿತ್ರ

ಇನ್ನೂ ಶಶಿ ಲಲಿತಾ ಚಿತ್ರ ಜಯಂ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ. ಕೆ ಜಗದೀಶ್ವರ ರೆಡ್ಡಿ ಈ ಸಿನಿಮಾವನ್ನು ನಿರ್ದೇಶನದ ಜೊತೆಗೆ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಈ ಬಯೋಪಿಕ್ ಚಿತ್ರದಲ್ಲಿ ಜಯಲಲಿತಾ ಅವರ ಇಡೀ ಜೀವನ ಅಂದರೆ, ಬಾಲ್ಯ,  ರಾಜಕೀಯ ಮತ್ತು ಸಾವು ಹೀಗೆ ಎಲ್ಲವನ್ನು ತೋರಿಸಲಾಗುತ್ತಿದೆ. ಶಶಿಲಲಿತಾ ದಿ ಸ್ಟಾರ್ಮ್ ಸಿನಿಮಾ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬೇಕು- ಎದೆ ಮೇಲೆ ನಿಖಿಲ್ ಟ್ಯಾಟೋ ಹಾಕಿಸಿಕೊಂಡ ಮಂಡ್ಯದ ಯುವಕ

#shashilalithamovie #balkaninews #kajolandamalapaul #amalapaul #kajolmovies #jayalalithaandshashikalabiopic #jayalalithabiopic

Tags

Related Articles