ಸುದ್ದಿಗಳು

ಜಯಲಲಿತ ಪಾತ್ರಕ್ಕೆ ಕಂಗಾನ ಸಂಭಾವನೆ ಎಷ್ಟು ಗೊತ್ತಾ..?

ಮುಂಬೈ,ಮೇ.19: ಜಯಲಲಿತ ಪಾತ್ರ ನಿಭಾಯಿಸುತ್ತಿರುವ ನಟಿ ಕಂಗಾನ ಅವರ ಸಂಭಾವನೆ ಇದೀಗ ಚರ್ಚೆಯಾಗುತ್ತಿದೆ.

ಜಯಲಲಿತ ಅವರ ಬಯೋಪಿಕ್ ಸಿನಿಮಾ ತೆರೆ ಕಾಣೋದಿಕ್ಕೆ ರೆಡಿಯಾಗುತ್ತಿದೆ. ಅವರ ಜೀವನ ಸಿನಿಮಾ ಜೀವನದಿಂದ ರಾಜಕೀಯ ಜೀವನ, ಇಡೀ ತಮಿಳು ನಾಡಿಗೆ ತಾಯಿಯಾದ ಕಥೆ. ಅಲ್ಲಿನ ಜನರಿಗೆ ಆಸರೆಯಾದ ಘಟನೆಗಳು ಹೀಗೆ ಎಲ್ಲವನ್ನು ಸಿನಿಮಾ ಮೂಲಕ ಜನತೆಗೆ ತೋರಿಸುವ ಕೆಲಸ ಆಗುತ್ತಿದೆ. ಈ ಸಿನಿಮಾದಲ್ಲಿ ಜಯಲಲಿತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟಿ ಕಂಗಾನ. ಸದ್ಯ ಕಂಗಾನ ಈ ಸಿನಿಮಾಗೆ ತೆಗೆದುಕೊಂಡ ಸಂಭಾವನೆ ಬಗ್ಗೆ ಚರ್ಚೆಗಳಾಗುತ್ತಿವೆ.

೨೫ ಕೋಟಿ ಸಂಭಾವನೆ..?

ಹೌದು, ನಟಿ ಕಂಗಾನ ತಮಿಳರ ಪಾಲಿನ ಅಮ್ಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ. ಇದೀಗ ಕಂಗಾನ ಈ ಸಿನಿಮಾಗೆ ತೆಗೆದುಕೊಂಡ ಸಂಭಾವನೆ ಬಗ್ಗೆ ಚರ್ಚೆಗಳಾಗುತ್ತಿದೆ. ಕಂಗಾನ ಈ ಸಿನಿಮಾಗಾಗಿ ಸುಮಾರು ೨೫ ಕೋಟಿ ಸಂಭಾವನೆ ಪಡೆಲಿದ್ದಾರೆ  ಎನ್ನಲಾಗಿದೆ. ಸದ್ಯ ಈವರೆಗೆ ಇಷ್ಟು ಸಂಭಾವನೆ ಯಾರು ಪಡೆದಿಲ್ಲ ಎನ್ನಲಾಗಿದೆ.

Image result for jayalalitha biopic kangana

ಜಯಲಲಿತ ಬಯೋಪಿಕ್ ನಿರ್ದೇಶನ ಮಾಡಲಿದ್ದಾರೆ ಕಂಗನಾ

ಇನ್ನು ಈ ಸಿನಿಮಾ ತಮಿಳು ಹಾಗೂ ಹಿಂದಿಯಲ್ಲಿ ತೆರೆ ಕಾಣಲಿದೆ. ಇನ್ನು ಈ‌ ಸಿನಿಮಾವನ್ನು ನಟಿ‌ ಕಂಗನಾ ರಾಣವತ್ ಸ್ವತಃ ತಾವೇ ನಿರ್ದೇಶನ ಮಾಡಲಿದ್ದಾರೆ. ಇನ್ನು ಈಗಾಗಲೇ ಮಣಿಕರ್ಣಿಕ ಸಿನಿಮಾ ಯಶಸ್ವಿಯಲ್ಲಿರುವ ಕಂಗನಾ ಇದೀಗ ಮತ್ತೊಂದು ದೊಡ್ಡ ಸಿನಿಮಾಗೆ ಕೈ ಹಾಕುತ್ತಿದ್ದಾರೆ. ತಮಿಳುನಾಡಿನ ಮುಖ್ಯಂತ್ರಿಯಾಗಿ ಬಹಳಷ್ಟು ಕಾಲ ಆಳಿ, ವರ್ಣರಂಜಿತ ರಾಜಕೀಯ ಜೀವನ ಮಾಡಿದ್ದ ನಟಿ ಮತ್ತು ರಾಜಕಾರಣಿ ಜಯಲಲಿತಾ ಜೀವನ ಚರಿತ್ರೆ ಆಧಾರಿತ ಈ ಸಿನಿಮಾಗೆ ನಾಯಕಿಯಾಗಿ ನಟಿಸಲು ಕಂಗನಾ ರಣಾವತ್ ಒಪ್ಪಿಕೊಂಡಿದ್ದಾದ್ದು ಇದೀಗ ಇಡೀ ತಮಿಳುನಾಡಿನ ಜನ ಕಾತುರರಾಗಿದ್ದಾರೆ.

ಹರಿಪ್ರಿಯಾಗೆ ನೋಟೀಸ್..?

#jayalalitha #biopic #sandalwood #kanganaranaut

 

Tags