ಸುದ್ದಿಗಳು

ಅಂಬಿ ಸಮಾರಾಧನೆಗೆ ರಮ್ಯಾ ಬರಬಹುದು: ಜಯಮಾಲಾ

ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ರಮ್ಯಾ ಮೇಲೆ ಜನರಿಂದ ಕಿಡಿ ಕಿಡಿ

ಉಡುಪಿ,ಡಿ.1: “ನಟ ಹಾಗೂ ಮಾಜಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್ ಅಂತ್ಯ ಸಂಸ್ಕಾರ ಸಂದರ್ಭ ಕಾಣಿಸಿಕೊಳ್ಳದ ಮಾಜಿ ಸಂಸದೆ ನಟಿ ರಮ್ಯಾ , ಖಂಡಿತ ಅಂಬಿಯವರ ವೈಕುಂ ಸಮಾರಂಭಕ್ಕೆ ಬರಬಹುದು” ಎಂದು ನಟಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಹೇಳಿದ್ದಾರೆ.

ರಮ್ಯಾರಿಗೆ ಹುಷಾರಿರಲಿಲ್ಲ

ಅಂಬರೀಶ್ ಅವರು ನಿಧನರಾದಾಗ ಅವರನ್ನು ನೋಡಲು ಅಥವಾ ಅಂತ್ಯಸಂಸ್ಕಾರದ ವೇಳೆಯಲ್ಲಿಯೂ ಸಹ ನಟಿ ರಮ್ಯಾ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಜನರೆಲ್ಲರೂ ಅವರ ಮೇಲೆ ಕೋಪಗೊಂಡಿದ್ದರು. ಮಂಡ್ಯದ ಜನರಂತೂ ‘ರಮ್ಯಾ ಶೃದ್ದಾಂಜಲಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಅಣಕ ಮಾಡುತ್ತಿದ್ದರು. ತಕ್ಷಣವೇ ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಮ್ಯಾ ತಮಗೆ ಹುಷಾರಿಲ್ಲ , ಹೀಗಾಗಿ ನಾನು ಅಂತ್ಯ ಸಂಸ್ಕಾರದ ವೇಳೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದರು.

ವೈಕುಂಠ ಸಮಾರಾಧನೆಗೆ ಬರ್ತಾರೆ.?!?

ಇಂದು ಉಡುಪಿಗೆ ಭೇಟಿ ನೀಡಿದ್ದ ನಟಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ “ನಟಿ ರಮ್ಯಾರಿಗೆ ಹುಷಾರಿಲ್ಲಾ, ಅದಲ್ಲದೇ ಹೆಣ್ಮಕ್ಕಳಿಗೆ ಹಲವಾರು ಸಮಸ್ಯೆಗಳು ಇರುತ್ತದೆ. ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳಿಕೊಳ್ಳಲು ಆಗುವುದಿಲ್ಲ. ಬಹುಶಃ ಅಂಬರೀಶ್ ಅವರ ವೈಕುಂಠ ಸಮಾರಾಧನೆಗಾದರೂ ಅವರು ಬರಬಹುದು. ತನಗೆ ಹುಷಾರಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನು ಹೊರತುಪಡಿಸಿ ಬಾರದಿರಲು ಬೇರೆ ಯಾವುದೇ ರಾಜಕೀಯ ಕಾರಣ ಇರಲಿಕ್ಕಿಲ್ಲ’ ಎಂದಿದ್ದಾರೆ.

ಸ್ಮಾರಕದ ಬಗ್ಗೆ

ಇನ್ನು ನಟ ವಿಷ್ಣುವರ್ಧನ್ ಅಗಲಿ 9 ವರ್ಷವಾಗಿದ್ದರೂ ಇನ್ನು ಸ್ಮಾರಕಗಳು ನಿರ್ಮಾಣವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ ಹೀಗಾಗಿ ಈ ಬಗ್ಗೆಯೂ ಜಯಮಾಲಾ ಮಾತನಾಡಿದ್ದಾರೆ, “ಡಾ. ವಿಷ್ಣು ಅವರ ಸ್ಮಾರಕ ಮಾಡಲು ಹೋದಾಗ ವಿವಾದವಾಗುತ್ತಲೇ ಇದೆ. ಅವರು ನಿಧನರಾಗಿ 9 ವರ್ಷಗಳಾದರೂ ಇನ್ನೂ ಸ್ಮಾರಕವಾಗಿಲ್ಲದಿರುವುದು ನನಗೂ ನೋವಿದೆ. ಇನ್ನು ಅವರ ಪತ್ನಿ ಮೈಸೂರಿನಲ್ಲಿಯೇ ಸ್ಮಾಕರ ನಿರ್ಮಿಸಿ ಎನ್ನುತ್ತಿದ್ದಾರೆ. ನಾವು ಅವರ ಮಾತಿಗೆ ಗೌರವ ಕೊಡಬೇಕಿದೆ. ವಿಷ್ಣು ಆಸೆ ಏನು ಎನ್ನುವುದು ಅವರ ಕುಟುಂಬಕ್ಕೆ ಗೊತ್ತಿರುತ್ತದೆ”

“ಇನ್ನು ಅಂಬರೀಶ್ ಓರ್ವ ಮಹಾನ್ ನಾಯಕ. ನಿಜವಾದ ಜನ ನಾಯಕ. ಜನರ ಹೃದಯದಲ್ಲಿ ವಾಸ ಮಾಡಿದ ಮಹಾನ್ ನಟ. ಅವರ ಸ್ಮಾರಕಕ್ಕೆ ಯಾವುದೇ ತೊಂದರೆಯಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tags