ಸುದ್ದಿಗಳು

ಸಚಿವೆ ಜಯಮಾಲ ವಿರುದ್ದ ಸಿಟಿ ರವಿ ವಾಗ್ದಾಳಿ..!?!

ಮಂಗಳೂರು.ಏ.22: ಸಚಿವೆ ಜಯಮಾಲ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು, ಜಯಮಾಲ ನನ್ನ ನಾಲಗೆಯನ್ನು ಚಪ್ಪಲಿಗೆ ಹೋಲಿಸಿದ್ದಾರೆ. ಪ್ರತಿದಿನ ಹೊಲಸು ಮಾತನಾಡುವ ಕಾಂಗ್ರೆಸ್ ನಾಯಕರ ನಾಲಗೆ ಏನು? ಉಂಡ ಮನೆಗೆ ದ್ರೋಹ ಬಗೆದವರು ತಾಯಿ ನೀವು’ ಎಂದು ಕಿಡಿಕಾರಿದ್ದಾರೆ.

‘ಸಿಎಂ ಇಬ್ರಾಹಿಂ ನಾಲಗೆಯನ್ನು ಯಾವುದಕ್ಕೆ ಹೋಲಿಸ್ತೀರಿ. ಗಟಾರದ ಹಂದಿಗೆ ಹೋಲಿಸ್ತೀರಾ. ಅಥವಾ ಟಾಯ್ಲೆಟ್ ನಲ್ಲಿ ಹುಳಕ್ಕೆ ಹೋಲಿಸ್ತೀರಾ. ಒಂದು ಮಾತಿಗೆ ಚಪ್ಪಲಿ ಅಂಥಾ ಜಯಮಾಲ ಹೇಳಿದ್ದಾರೆ. ಜಯಮಾಲರಿಂದ ಉತ್ತರದ ನಿರೀಕ್ಷೆಯಲ್ಲಿದ್ದೇನೆ. ಜಯಮಾಲ ನನ್ನ ನಾಲಗೆಗೆ ಬಜೆ ತಿಕ್ಕಿಸಿಲ್ಲ’ ಅಂತಾ ಹೇಳಿದ್ದಾರೆ.

‘ನಾನು ಸ್ಪಷ್ಟ ಕನ್ನಡ ಮಾತನಾಡುತ್ತೇನೆ. ವಿಶ್ವೇಶ್ವರಯ್ಯ,ಕನಕದಾಸ ಹೆಸರು ಸರಿ ಹೇಳದ ರಾಹುಲ್ ಗಾಂಧಿ ನಾಲಗೆಗೆ ಬಜೆ ತಿಕ್ಕಿಸಿ. ರಾಹುಲ್ ಗಾಂಧಿ ಗೆ ಬಜೆ ಕಳುಹಿಸಿಕೊಡಿ’ ಎಂದು ಸಚಿವೆ ಜಯಮಾಲ ವಿರುದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಿಡಿ ಕಾರಿದ್ದಾರೆ.

ಜಯಮಾಲ ಕಳುಹಿಸಿದ ಪುಸ್ತಕಗಳನ್ನು ಸ್ವೀಕರಿಸುತ್ತೇನೆ. ಕಾಂಗ್ರೆಸ್ ನಾಯಕರಿಗೆ ಜಯಮಾಲ ಸಭ್ಯತೆಯ ಕ್ಲಾಸ್ ತೆಗೆದುಕೊಳ್ಳಲಿ. ಸಿಎಂ ಇಬ್ರಾಹಿಂ,ಸಿದ್ಧರಾಮಯ್ಯ ರನ್ನು ಕೂರಿಸಿ ಪಾಠ ಮಾಡಲಿ.

ಜಯಮಾಲರಿಗೆ ಸಂಸ್ಕೃತಿ-ಸಭ್ಯತೆ ಇದ್ರೆ ಮಾತ್ರ ಮಾಡಲಿ . ಬಣ್ಣದ ಬದುಕಿನವರದ್ದು ಒಳಗೊಂದು-ಹೊರಗೊಂದು ವೇಷ. ಜಯಮಾಲ ಕ್ಲಾಸ್ ತೆಗೆದುಕೊಳ್ಳೋದಾದ್ರೆ ನಾನು ಸಂಪನ್ಮೂಲ ವ್ಯಕ್ತಿ ಯನ್ನು ಕಳುಹಿಸಿ ಕೊಡುತ್ತೇನೆ. ಜಯಮಾಲ ಕ್ಲಾಸ್ ತೆಗೆದುಕೊಳ್ಳೋದಾದ್ರೆ ನಾನು ಸಂಪನ್ಮೂಲ ವ್ಯಕ್ತಿಯನ್ನು ಕಳುಹಿಸಿಕೊಡುತ್ತೇನೆ ’ ಎಂದಿದ್ದಾರೆ.

ಭಯೋತ್ಪಾದಕ ದಾಳಿಗೆ ಬೀದಿಗಿಳಿಯದ ಮೈತ್ರಿ ಸರ್ಕಾರ ಐಟಿ ದಾಳಿಗಾಗಿ ಬೀದಿಗಿಳಿದಿದ್ದಾರೆ. ಇದರಿಂದಲೇ ತಿಳಿಯುತ್ತೆ ಇವರ ನಿಯತ್ತು. ಭಯೋತ್ಪಾದನೆಯ ಬೇರನ್ನು ಕಿತ್ತೆಸೆಯಲು ಎಲ್ಲಾ ದೇಶಗಳು ಒಗ್ಗಟ್ಟಾಗಬೇಕು ಎಂದು ಸಿಟಿ ರವಿ ಕರೆ ನೀಡಿದರು.

ಒಂದೇ ಸಿನಿಮಾದಲ್ಲಿ ನಟಿಸಲು ಮುಂದಾದ ಪುನೀತ್ – ಶಿವಣ್ಣ

#jayamala, #ctravi, #balkaninews #filmnews, #kannadasuddigalu

Tags