ಸುದ್ದಿಗಳು

ಡಾ ಜಯಮಾಲಾ ಅವರ ಹುಟ್ಟುಹಬ್ಬ

ಕನ್ನಡದ ಜನಪ್ರಿಯ ನಾಯಕಿ ಹಾಗು ರಾಜಕೀಯದಲ್ಲೂ ಹೆಸರುಮಾಡಿರುವ ಜಯಮಾಲಾ ಅವರ ಹುಟ್ಟುಹಬ್ಬ

ಕನ್ನಡದ ಜನಪ್ರಿಯ ನಾಯಕಿ ಹಾಗು ರಾಜಕೀಯದಲ್ಲೂ ಹೆಸರುಮಾಡಿರುವ ಜಯಮಾಲಾ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಜಯಮಾಲಾ ಅವರು ಮಂಗಳೂರಿನಲ್ಲಿ ತುಳು ಮಾತನಾಡುವ ಕುಟುಂಬದಲ್ಲಿ 1955ರಲ್ಲಿ ಜನಿಸಿದರು. ಅವರ ತಂದೆ ಜಿ. ಓಮಯ್ಯ ಕೃಷಿಕ ಮತ್ತು ತಾಯಿ ಕಮಲಮ್ಮ ಗೃಹಿಣಿ. ಅವರಿಗೆ ಆರು ಸಹೋದರಿಯರು ಮತ್ತು ಒಬ್ಬ ಸಹೋದರ ಇದ್ದಾರೆ.ಅವರ ಪುತ್ರಿ ಸೌಂದರ್ಯ ಜಯಮಾಲಾ. ಜಯಮಾಲಾ ಸಣ್ಣ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು, 1980 ರ ದಶಕದ ಆರಂಭದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಮನಮೋಹಕ ನಾಯಕಿ ಎನ್ನಿಸಿಕೊಂಡಿದ್ದರು.

Image result for jayamala

ಜಯಮಾಲಾ ರಾಜ್‌ಕುಮಾರ್ ಅವರಿಗೆ ನಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಬಹುತೇಕ ಯಶಸ್ವಿ ಚಲನಚಿತ್ರಗಳನ್ನು ಮಾಡಿದ್ದಾರೆ. ಅಲ್ಲದೆ ಅವರು ರಾಜಕೀಯ ಕ್ಷೇತ್ರದಲ್ಲಿ “ಕರ್ನಾಟಕ ಶಾಸಕಾಂಗ ಪರಿಷತ್ತಿನ” ಸದಸ್ಯರಾಗಿರುವ ಮೂಲಕ ಕರ್ನಾಟಕ ಸರ್ಕಾರದಲ್ಲಿ “ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ” ಹಾಗು “ಹಿರಿಯ ನಾಗರಿಕರ ಸಬಲೀಕರಣ” ಸಚಿವರಾಗಿ ಸೇವೆ ಸಲ್ಲಿಸಿದರು.

Image result for jayamala films

ಅಲ್ಲದೆ ಅವರು 2008 ಮತ್ತು 2010 ರ ನಡುವೆ “ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್‌ನ ಮಹಿಳಾ ಅಧ್ಯಕ್ಷರಾಗಿ” ಸೇವೆ ಸಲ್ಲಿಸಿದರು. ಅವರ ಜನಪ್ರಿಯ ಕನ್ನಡ ಚಿತ್ರಗಳೆಂದರೆ ಪ್ರೇಮದ ಕಾಣಿಕೆ, ಶಂಕರ್ ಗುರು, ಅಂತ ಮತ್ತು ಚಂಡಿ ಚಾಮುಂಡಿ ಸೇರಿದಂತೆ ಹಲವಾರು ಚಿತ್ರಗಳಿವೆ. ಅವರು ಪ್ರಶಸ್ತಿ ಪುರಸ್ಕೃತ “ತಾಯಿಸಾಹೇಬ” ಸಿನಿಮಾವನ್ನು ನಿರ್ಮಿಸಿ ನಟಿಸಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಅಷ್ಟೇ ಅಲ್ಲದೆ ತಮಿಳು, ತೆಲುಗು ಹಾಗು ಮಲಯಾಳಂ ಚಿತ್ರದಲ್ಲೂ ಅಭಿನಯಿಸಿದ್ದಾರೆ.

Image result for jayamala doctorate award

ಜಯಮಾಲಾ ಅವರು ಭಾರತೀಯ ಚಲನಚಿತ್ರೋದ್ಯಮದಲ್ಲಿ ಪ್ರಬಂಧ ಬರೆಯಲು ಡಾಕ್ಟರೇಟ್ ಪಡೆದ ಏಕೈಕ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಪ್ರಬಂಧವು ಕರ್ನಾಟಕದ ಗ್ರಾಮೀಣ ಮಹಿಳೆಯರ ಪುನರ್ವಸತಿ ಕುರಿತಾಗಿತ್ತು .  ಬೆಂಗಳೂರು ವಿಶ್ವವಿದ್ಯಾಲಯವು 18 ಜನವರಿ 2008 ರಂದು, ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರು ಅದ್ಯಕ್ಷತೆಯಲ್ಲಿ ಡಾಕ್ಟರೇಟ್ ನೀಡಲಾಗಿತ್ತು.

ಅರ್ಜುನ್ ಜನ್ಯಾರಿಗೆ ಹೃದಯಾಘಾತ

#balkaninews #drjayamal #soundartajayamala #kannadafilm #happybirthday #sinilika #sandalwood

Tags