ಸುದ್ದಿಗಳು

‘ಮಾರಿಮುತ್ತು’ ಮೊಮ್ಮಗಳ ಬೋಲ್ಡ್ ಫೋಟೋ ಶೂಟ್

ಬೆಂಗಳೂರು, ಸೆ.14: ‘ಉಪೇಂದ್ರ’  ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಮಾರಿಮುತ್ತು ಅಂತಾನೆ ಪ್ರಖ್ಯಾತಿ ಪಡೆದುಕೊಂಡ ಕಲಾವಿದೆ ಸರೋಜಮ್ಮ.  ಸರೋಜಮ್ಮನ ಮೊಮ್ಮಗಳು ಈಗಾಗಲೇ ಸಿನಿಮಾರಂಗಕ್ಕೆ ಬರುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಅಜ್ಜಿಯ ರೀತಿಯಲ್ಲೇ ಸಖತ್ ಫೇಮಸ್ ಆಗ್ಬೇಕು ಅನ್ನುವ ಆಸೆ ಹೊಂದಿರುವ ನಟಿ ಜಯಶ್ರೀ ಆರಾಧ್ಯ ಇತ್ತೀಚೆಗಷ್ಟೇ ಹಾಟ್ ಫೋಟೋ ಶೂಟ್ ಮಾಡಿಸಿದ್ದಾರೆ.ಜಯಶ್ರೀ ಆರಾಧ್ಯ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಿನಿಮಾರಂಗದಲ್ಲಿ ನಾಯಕಿಯಾಗಿ ಸಾಕಷ್ಟು ದಿನಗಳು ಉಳಿದುಕೊಳ್ಳುವ ಸೂಚನೆ ಈ ಮೂಲಕ ಜಯಶ್ರೀ ನೀಡಿದ್ದಾರೆ.ಬೋಲ್ಡ್ ಫೋಟೋ ಶೂಟ್

ಬೋಲ್ಡ್ ಅಂಡ್ ಬ್ಯೂಟಿಫುಲ್ ಲುಕ್‍ಜಯಶ್ರೀ ಸದ್ಯ ಮಾಡಿಸಿರುವ ಫೋಟೋ ಶೂಟ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತನ್ನ ಸೌಂದರ್ಯದಿಂದಲೇ ಅಭಿಮಾನಿಗಳನ್ನು ಸೆಳೆದಿದ್ದ ನಟಿ, ಈಗ ಗ್ಲಾಮರಸ್ ಲುಕ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.ಪುಟ್ಟರಾಜು ಲವ್ವರ್ ಆಗಿದ್ದ ಜಯಶ್ರೀ

ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆ ಆಗಿದ್ದ ‘ಪುಟ್ಟರಾಜು ಲವರ್ ಆಫ್ ಶಶಿಕಲಾ’ ಸಿನಿಮಾದಲ್ಲಿ ಜಯಶ್ರೀ ಆರಾಧ್ಯ ನಾಯಕಿ ನಟಿಯಾಗಿ ಅಭಿನಯ ಮಾಡಿದ್ದರು. ಚಿತ್ರ ಬಿಡುಗಡೆ ಆದ ನಂತರ ಬೋಲ್ಡ್ ಲುಕ್ ನಲ್ಲಿ ಪ್ರೇಕ್ಷಕರ ಮುಂದೆ ಬರುವ ಆಲೋಚನೆ ಜಯಶ್ರೀ ಆರಾಧ್ಯ ಅವರದ್ದಾಗಿದೆ.

Tags