ಬಾಲ್ಕನಿಯಿಂದವಿಡಿಯೋಗಳುಸುದ್ದಿಗಳು

ಹಾರೋಣಾ ಜಿಗಿ ಜಿಗಿದು.. ಬಾನಲ್ಲಿ.. ಎಂದು ಹಾಡಿ ಕುಣಿದ ಸ್ನೇಹಿತರು..!!

ಪ್ರಥಮ ಬಾರಿಗೆ ‘ತಿಥಿ’ ಗಡ್ಡಪ್ಪ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದ ‘ಜರ್ಕ್’ ಚಿತ್ರವು ಇತ್ತಿಚೆಗಷ್ಟೇ ತೆರೆ ಕಂಡಿದ್ದು, ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಈ ನಡುವೆ ಚಿತ್ರದ 2ನೇ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದ್ದ ಚಿತ್ರತಂಡ ಇದೀಗ ಒಂದು ವಿಡಿಯೋ ಸಾಂಗ್ ರಿಲೀಸ್ ಮಾಡಿದೆ.

ಜಾಲಿ ಜಾಲಿಯಾದ ಸಾಂಗ್

ಹಾರೋಣ ಜಿಗಿ ಜಿಗಿದು… ಎಂದು ಶುರುವಾಗುವ ಈ ಚಿತ್ರದ ಸ್ನೇಹದ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ. ಈ ಹಾಡಿನಲ್ಲಿ ಐವರು ಸ್ನೇಹಿತರು ಜಾಲಿಯಾಗಿ ಸುತ್ತಾಡುತ್ತಾ, ತಿರುಗಾಡುತ್ತಾ, ನಲಿಯುವುದನ್ನು ನೋಡಬಹುದು. ಈ ಜಾಲಿಯ ಜಾಡನ್ನು ನೆಲಮನೆ ರಾಘವೇಂದ್ರ ರಚಿಸಿದ್ದು, ಎಡ್ವರ್ಡ್ ಶಾ ಸಂಗೀತ ಸಂಯೋಜಿಸಿದ್ದಾರೆ.

ಚಿತ್ರದ ಕುರಿತಂತೆ

ಹಳ್ಳಿಯ ಹಿನ್ನೆಲೆಯನ್ನು ಒಳಗೊಂಡ ಈ ಚಿತ್ರವು ಕೆಎಎಸ್ ತರಬೇತಿಗಾಗಿ ಬೆಂಗಳೂರಿಗೆ ಬರುವ ಯುವಕನ ಪಾತ್ರದ ಸುತ್ತ ಕಥೆ ಹೆಣೆಯಲಾಗಿದ್ದು, ಚಿತ್ರಕ್ಕೆ ಮಹಾಂತೇಶ್ ಮದಕರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ನಾಯಕರಾಗಿ ಕೃಷ್ಣ ರಾಜ್ ನಟಿಸಿದ್ದು, ಉಳಿದಂತೆ ನೆ.ಲ ನರೇಂದ್ರ ಬಾಬು, ಸಚ್ಚಿನ್, ನಿತ್ಯಾರಾಜ್, ಆಶಾಭಂಡಾರಿ, ‘ಮಜಾ ಟಾಕೀಸ್’ ಪವನ್, ಕುರಿರಂಗ ಹಾಗೂ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ.

ಭಾರತೀಯ ಚಿತ್ರರಂಗಕ್ಕೆ ಸುಷ್ಮಾ ಸ್ವರಾಜ್ ನೀಡಿದ ಅದ್ಭುತ ಕೊಡುಗೆಗಳಿವು!!

#jerkmovie #jollyvideosong #jerkgaddappa #kannadafilm, #kannadamovie, #kannadanews, #kannadanewmovie

Tags