ಸುದ್ದಿಗಳು

‘ಜೆರ್ಸಿ’ ಟ್ರೈಲರ್: ಕ್ರಿಕೆಟಿಗನಾದ ನ್ಯಾಚುರಲ್ ಸ್ಟಾರ್ !!

ಹೈದರಾಬಾದ್,ಏ.12: ಈ ವರ್ಷದ  ಟಾಲಿವುಡ್ ನ ಬಹುನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾದ ನಾನಿಯ ‘ಜೆರ್ಸಿ’ ಟ್ರೇಲರ್  ಬಿಡುಗಡೆಯಾಗಿದ್ದು, ಮತ್ತು ನಾನಿಗೆ ಇದೊಂದು ಬಿಗ್ ಹಿಟ್ ಸಿಕ್ಕಲಿದೆ ಎಂದು ಟಿ-ಟೌನ್ ಈಗಾಗಲೇ ಮಾತಾಡಿಕೊಳ್ಳುತ್ತಿದೆ..

ಚಿತ್ರದಲ್ಲಿ ಅತಿದೊಡ್ಡ ಹೈಲೈಟ್ ನಾನಿ

ಕ್ರಿಕೆಟ್ ತಂಡದಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡ ವ್ಯಕ್ತಿ ಮತ್ತು ಅವನ ಜೀವನ ಸಾಮಾನ್ಯವಾಗಿರುತ್ತದೆ. ಆದರೆ 10 ವರ್ಷಗಳ ನಂತರ ಕ್ರಿಕೆಟ್ನಿಂದ ಹೊರಗುಳಿದ ನಂತರ, ತನ್ನ ಹೆಂಡತಿಯ  ಬ್ಯಾಗ್ ನಿಂದ ಹಣವನ್ನು ಕದಿಯುವ ಮಟ್ಟಕ್ಕೆ ನಾಯಕ ಇಳಿಯುತ್ತಾನೆ… ತದನಂತರ,  ಆತ ಮತ್ತೆ ಕ್ರಿಕೆಟಿಗರಾಗಲು ನಿರ್ಧರಿಸುತ್ತಾನೆ. ಆದರೆ ಈ ಚಿತ್ರದಲ್ಲಿ ಅತಿದೊಡ್ಡ ಹೈಲೈಟ್ ನಾನಿಗಿಂತ ಬೇರೆ ಯಾರೂ ಅಲ್ಲ. ಈ ಚಿತ್ರದಲ್ಲಿ ಚಿತ್ರಿಸಿದ ಭಾವನೆಗಳು ಅದ್ಭುತವಾಗಿದೆ. ಅತ್ಯುತ್ಕೃಷ್ಟವಾದ ‘ನ್ಯಾಚುರಲ್ ಸ್ಟಾರ್’ ಗೆ ಬೇರೆ ಯಾವುದೇ ಪರ್ಯಾಯವಿಲ್ಲ. ಶ್ರದ್ಧಾ ಶ್ರೀನಾಥ್ ನಟನೆಯ ಬಗ್ಗೆ ಮಾತೇ ಇಲ್ಲ. ಅದ್ಬುತವಾದ ನಟನೆಯ ಮೂಲಕ ಎಲ್ಲರನ್ನು ಮೋಡಿ ಮಾಡಿದ್ದಾಳೆ ಶ್ರದ್ಧಾ…

Image result for jersey trailer

ಅನಿರುದ್ಧನ ಸೊಗಸಾದ ಹಿನ್ನಲೆ

ಅನಿರುದ್ಧನ ಸೊಗಸಾದ ಹಿನ್ನಲೆ ಸ್ಕೋರ್ ಮತ್ತು ಸನು ವರ್ಘೀಸ್ನ ಸಿನಿಮಾಟೋಗ್ರಾಫಿ ಈಚಿತ್ರದ ದೊಡ್ಡ ಬೆನ್ನೆಲುಬುಗಳು. ಮತ್ತು ಕ್ರಿಕೆಟ್ ಬ್ಯಾಕ್ಡ್ರಾಪ್ನೊಂದಿಗೆ ಅಂತಹ ಭಾವನಾತ್ಮಕ ಕಥೆ ಹೊರತರಲು ನಿರ್ದೇಶಕ ಗೌತಮ್ ತಿನ್ನನೂರಿ ಅವರನ್ನು ಹೊಗಳಲೇ ಬೇಕು.. ಜೆರ್ಸಿ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ..

#jerseytrailer #tollywood #kollywood #nani #shradhhasrinath

‘ಪ್ರೀಮಿಯರ್ ಪದ್ಮಿನಿ’ ಚಿತ್ರತಂಡಕ್ಕೆ ಸೇರ್ಪಡೆಯಾದ ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಪತ್ನಿ ಕೃತಿ

Tags

Related Articles