ಸುದ್ದಿಗಳು

ಬಾಲಿವುಡ್ ನ ಮುದ್ದಾದ ಅಣ್ಣ-ತಂಗಿಯರಿವರು!!

ಮತ್ತೆ ಒಂದಾದ ಕುಟುಂಬ..

ಶುಕ್ರವಾರವೇ ಅರ್ಜುನ್ ಕಪೂರ್ ಸೋದರಿಯರೊಂದಿಗಿರುವ ಫೋಟೋವನ್ನ ಇನ್ಸ್ಟಾಗ್ರಾಂನ ಲ್ಲಿ ಪೋಸ್ಟ್ ಮಾಡಿದ್ದಾರೆ.

ಮುಂಬೈ,ಆ.26: ಇಂದು ರಕ್ಷಾ ಬಂಧನ ಹಬ್ಬ ಭಾರತಾದ್ಯಂತ ಎಲ್ಲರೂ ಇದನ್ನು ಆಚರಿಸುತ್ತಿದ್ದಾರೆ. ಈಗಾಗಲೇ ಅಣ್ಣ -ತಮ್ಮಂದಿರಿಗೆ ಸಹೋದರಿಯರು ರಾಖಿ ಕಟ್ಟಿ ಶುಭಾಶಯಗಳನ್ನು ಕೋರುತ್ತಿದ್ದಾರೆ. ಇನ್ನು ರಕ್ಷಾ ಬಂಧನ ಹಬ್ಬ ಸೆಲೆಬ್ರೆಟಿಗಳ ಮನೆಯಲ್ಲಂತೂ ಕೇಳುವುದೇ ಬೇಡ. ಅದು ಬಿಟೌನ್ ನಲ್ಲಂತೂ ಜೋರಾಗಿಯೇ ನಡೆಯುತ್ತದೆ.  ಬೋನಿ ಕಪೂರ್ ಮನೆಯಲ್ಲಿ ಕೂಡ ರಕ್ಷಾ ಬಂಧನದ ಸಂಭ್ರಮ ಮೇಳೈಸಿದೆ. ಬೋನಿಕಪೂರ್ ಪುತ್ರ ಅರ್ಜುನ್ ಕಪೂರ್ ತನ್ನ ಸೋದರಿಯರ ಜೊತೆ ರಾಖಿ ಹಬ್ಬವನ್ನು ಆಚರಣೆ ಮಾಡಿದ್ದಾರೆ..

ಮತ್ತೆ ಒಂದಾದ ಸಂಬಂಧ

ಅನ್ಷುಲಾ, ಜಾಹ್ನವಿ, ಖುಷಿ, ಸೋನಮ್, ರೇಹಾ ಮತ್ತು ಸಾನ್ಯಾ ಜೊತೆಗಿರುವ ಫೋಟೋವನ್ನು ಅರ್ಜುನ್ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ. ಜಾಹ್ನವಿ, ಖುಷಿ ಮತ್ತು ಅನ್ಷುಲಾ, ಸೋನಮ್ ರ ಪ್ರತ್ಯೇಕ ಫೊಟೋಗಳು ಮತ್ತು ಎಲ್ಲರೂ ಒಂದಾಗಿರುವ ಫೊಟೋಗಳು  ಜಾಲಾತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

ಸಂತಸ ಹೆಚ್ಚಿಸಿದೆ

ಶುಕ್ರವಾರವೇ ಅರ್ಜುನ್ ಕಪೂರ್ ಸೋದರಿಯರೊಂದಿಗಿರುವ ಫೋಟೋವನ್ನ ಇನ್ಸ್ಟಾಗ್ರಾಂನ ಲ್ಲಿ ಪೋಸ್ಟ್ ಮಾಡಿದ್ದಾರೆ. ವಾರಾಂತ್ಯದಲ್ಲಿನ ರಕ್ಷಾಬಂಧನ ಹಬ್ಬ ನನ್ನ ಪಾಲಿನ ಸಂತಸ ಹೆಚ್ಚಿಸಿದೆ ಅನ್ನೋ ಸಂದೇಶವನ್ನು ಅರ್ಜುನ್ ಕಪೂರ್ ಬರೆದುಕೊಂಡಿದ್ದಾರೆ.

ಅರ್ಜುನ್ ಕಪೂರ್ ತಂದೆ ಬೋನಿ ಕಪೂರ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅರ್ಜುನ್ ಕಪೂರ್ ಮತ್ತು ಅವರೆಲ್ಲರು ಹಳೆಯ ದಿನಗಳನ್ನೆಲ್ಲಾ ಮರೆತು ಒಂದಾಗಿರೋದು ನಿಜಕ್ಕೂ ನನಗೆ ಖುಷಿಯ ವಿಚಾರವಾಗಿದೆ ಎಂದು ಬರೆದಿದ್ದಾರೆ. ಇಷ್ಟು ದಿನ ದೂರವಿದ್ದ ಈ ಎರಡೂ ಕುಟುಂಬವು ಒಟ್ಟಾಗಿದ್ದು ಕಂಡು ಅಭಿಮಾನಿಗಳೂ ಕೂಡ ಸಂತಸ ವ್ಯಕ್ತ ಪಡಿಸಿದ್ದಾರೆ..

 

Tags