ಸುದ್ದಿಗಳು

ಭರದಿಂದ ಸಾಗುತ್ತಿದೆ ‘ಝಾನ್ಸಿ’ ಡಬ್ಬಿಂಗ್ 

ಉಪೇಂದ್ರ ಅವರಿಗೆ ಜೋಡಿಯಾಗಿ ಕಲ್ಪನ ಸಿನಿಮಾದಲ್ಲಿ ನಟಿಸಿದ್ದ ಲಕ್ಷ್ಮಿ ರಾಯ್ ಇದೀಗ ಮತ್ತೆ ಚಂದನವನದತ್ತ ಮುಖ ಮಾಡಿದ್ದಾರೆ. ಝಾನ್ಸಿ ಸಿನಿಮಾದಲ್ಲಿ ಲಕ್ಷ್ಮಿ ರಾಯ್ ಬಣ್ಣ ಹಚ್ಚಿದ್ದು ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಮಾತ್ರವಲ್ಲ ಚಿತ್ರದ ಡಬ್ಬಿಂಗ್ ಕೂಡಾ ಭರದಿಂದ ಸಾಗುತ್ತಿದೆ.

ಕನ್ನಡ ಭಾಷೆಯ ಜೊತೆಗೆ ತೆಲುಗು, ತಮಿಳು ಚಿತ್ರದಲ್ಲಿ ಅಭಿನಯಿಸುವ ಮೂಲಕ ಪರಭಾಷೆಗೆ ಕಾಲಿಟ್ಟಿರುವ ಲಕ್ಷ್ಮಿ ರಾಯ್ ಬೆಳಗಾವಿ ಮೂಲದವರು. ಪಿ.ವಿ.ಎಸ್​​​. ಗುರುಪ್ರಸಾದ್ ನಿರ್ದೇಶನದ ಈ ಸಿನಿಮಾದಲ್ಲಿ ಲಕ್ಷ್ಮಿ ಐಪಿಎಸ್ ಅಧಿಕಾರಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಸಾಹಸ ಪ್ರಧಾನದ ಈ ಚಿತ್ರಕ್ಕಾಗಿ ಲಕ್ಷ್ಮಿ ಅವರು ಮಾರ್ಷಲ್ ಆರ್ಟ್ ಕೂಡಾ ಕಲಿತಿದ್ದಾರೆ. ಮುಂಬೈ ಮೂಲದ ರಾಜೇಶ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದು ಚಿತ್ರದ ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಚಿತ್ರತಂಡ ಘೋಷಿಸಲಿದೆ. ಎಂ.ಎನ್.ಕೃಪಾಕರ್ ಸಂಗೀತ ನೀಡಿದ್ದು ವೀರೇಶ್ ಛಾಯಾಗ್ರಹಣ, ಬಸವರಾಜ್ ಸಂಕಲನ ಚಿತ್ರಕ್ಕಿದೆ.

ಮಂಜಿನ ನಗರಿಯ ಬೆಡಗಿ ಲತಾ ಗಿರೀಶ್ ರ ನಟನಾ ಪುರಾಣ

#jhoncy, #film, #dubbing, #balkaninews

Tags