ಸುದ್ದಿಗಳು

ಬಾಲಿವುಡ್ ಪೋಸ್ಟರ್ ನಲ್ಲಿ ಜೆಕೆ

ಜೆಕೆ. ತಮ್ಮದೇ ಆದ ನಟನೆ. ತಮ್ಮದೇ ಆದ ಗಡಸು ಧ್ವನಿ,, ಗಡಸು ಬಾಡಿಯ ಮೂಲಕ ಅಭಿಮಾನಿಗಳನ್ನ ಸಂಪಾಧಿಸಿದ ನಟ. ಇಷ್ಟೇ ಅಲ್ಲದೆ ಬಿಗ್ ಬಾಸ್ ಮನೆಗೂ ಎಂಟ್ರಿ ಕೊಟ್ಟು, ಫೈನಲ್ ವರೆಗೂ ತಲುಪಿದ ನಟ.

ಕನ್ನಡದಲ್ಲಿ ಅಷ್ಟೆ ಅಲ್ಲದೆ ಕಿರುತೆರೆಯಲ್ಲಿ ಹಿಂದಿ ರಾಮಾಯಣ ಧಾರಾವಾಹಿಯಲ್ಲಿ ರಾವಣನ ಪಾತ್ರ ಮಾಡಿ, ಹಿಂದಿ ಆಡಿಯನ್ಸ್‌ಗೆ ಹತ್ತಿರವಾಗಿರೋ ಕನ್ನಡದ ಪ್ರತಿಭೆ ಜೆಕೆ. ಕನ್ನಡದಲ್ಲಿ ಒಂದಷ್ಟು ಸಿನಿಮಾಗಳಿಗೆ ನಾಯಕನಾಗಿ, ಇನ್ನೊಂದಷ್ಟು ಚಿತ್ರಗಳಲ್ಲಿ ವಿಲನ್‌ ಆಗಿ, ಕಿರುತೆರೆಯಲ್ಲಿ, ಮಾಡೆಲಿಂಗ್‌ ಕ್ಷೇತ್ರದಲ್ಲಿ, ಸಿಸಿಎಲ್‌ನಲ್ಲಿ ಒಳ್ಳೆಯ ಫೇಮ್‌ ಪಡೆದುಕೊಂಡಿರೋ ಕಾರ್ತಿಕ್‌, ಈಗ ಬಾಲಿವುಡ್‌ ಗೆ ಎಂಟ್ರಿ ಕೊಟ್ಟಿದ್ದಾರೆ.

ಹೌದು, ಪುಷ್ಪ ಹೇಟ್‌ ಟೀಯರ್ಸ್‌ ಅನ್ನೋ ಚಿತ್ರದಲ್ಲಿ ನಾಯಕನಟನಾಗಿ ಜಯರಾಮ್‌ ಕಾರ್ತಿಕ್‌ ಅಭಿನಯಿಸ್ತಿದ್ದಾರೆ ಅಂತಾ ವರದಿಯಾಗಿದೆ.

ಪುಷ್ಪ ಹೇಟ್‌ ಟಿಯರ್ಸ್‌ ಚಿತ್ರದ ಪೋಸ್ಟರ್‌ಗಳು ಇದೀಗ ರಿಲೀಸ್‌ ಆಗಿದ್ದು, ಪೋಸ್ಟರ್‌ನಲ್ಲಿ ಜೆಕೆ ಗನ್‌ ಹಿಡಿದು ಪೋಸ್‌ ಕೊಟ್ಟಿದ್ದಾರೆ. ಕಾರ್ತಿಕ್‌ ಜೊತೆಗೆ ನಟ ಕೃಷ್ಣ ಅಭಿಷೇಕ್‌ ಕೂಡ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರದ ಮೂಲಕ ಆದ್ಯ ತಕ್ಕೂರ್‌ ಅನ್ನೋ ನವ ನಟಿ ಬಾಲಿವುಡ್‌ ಗೆ ಪರಿಚಯವಾಗ್ತಿದ್ದಾಳೆ.

ಜೆಕೆ, ಆದ್ಯ, ಕೃಷ್ಣ ಅಭಿಷೇಕ್‌ ಈ ಮೂವರ ಸುತ್ತಾ ಸುತ್ತೋ ಕಥೆ ಪುಷ್ಪ ಹೇಟ್‌ ಟೀಯರ್ಸ್‌ ಕಥೆಯಂತೆ.. ದಿನಕರ್‌ ಕಪೂರ್‌ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳ್ತಿದ್ದು, ಸದ್ಯ ರಿಲೀಸ್‌ ಆಗಿರೋ ಈ ಚಿತ್ರದ ಪೋಸ್ಟರ್ಸ್‌ ಇಂಟ್ರೆಸ್ಟಿಂಗ್‌ ಹಾಗೂ ಕುತೂಹಲವಾಗಿ ಕಾಣ್ತಿವೆ.

Tags