ಸುದ್ದಿಗಳು

ಜೋಗಿ ಚಿತ್ರಕ್ಕೆ ತುಂಬಿತು ಹದಿಮೂರು ವರ್ಷ!!

ವಿಲನ್‍ ನಲ್ಲಿ ಆಗಬಹುದೇ ಜೋಗಿಯ ದಾಖಲೆ...

ಅರೇ ‘ಜೋಗಿ’ ಎಂಬ ಮಾತು ಇಡೀ ಕರುನಾಡ ಸಿನಿಮಾ ರಸಿಕರ ಬಾಯಲ್ಲಿ ಗುಣು ಗುಣುಸಿತ್ತಿದ್ದ ಕಾಲವದು. ಯಾವ ಸಿನಿಮಾ ಮಂದಿರದಲ್ಲಿ ನೋಡಿದರು  ಜೋಗಿಯ ಬ್ಯಾನರ್ಗಳು. ಶಿವರಾಜ್‍ಕುಮಾರ್ ನಟನೆಯಲ್ಲಿ ಮೂಡಿ ಬಂದ ಸಿನಿಮಾಕ್ಕೆ ಇಂದು 13 ವರ್ಷಗಳು ತುಂಬಿದೆ. ಪ್ರೇಮ್ ಅವರ ಸಾರಥ್ಯದಲ್ಲಿ ತೆರೆ ಕಂಡ ಜೋಗಿ ಸಿನಿಮಾವು ಸುಮಾರು 61 ಸಿನಿ ಮಂದಿರಗಳಲ್ಲಿ 100 ದಿನವನ್ನು ಪೂರೈಸಿ ಹೊಸ ದಾಖಲೆಯನ್ನು ಮಾಡಿತು. ಇದರ ಮೂಲಕ ಶಿವಣ್ಣ  ಮತ್ತು ಪ್ರೇಮ್ ಜೋಡಿ ಚಂದನವನದನಲ್ಲಿ ಹೊಸ ಅಲೆಯೊಂದನ್ನೇ ಸೃಷ್ಟಿಸಿ ಬಿಟ್ಟಿತ್ತು. ಅಶ್ವಿನಿ ನಿರ್ಮಾಣದಡಿಯಲ್ಲಿ ಮೂಡಿ ಬಂದ ಸಿನಿಮಾಕ್ಕೆ ನಾಯಕಿಯಾಗಿ ಜೆನಿಫರ್ ಕೊತ್ವಾಲ್ ನಟಿಸಿದ್ದಾರೆ. ಎಮ್ ಆರ್ ಸೀನ್ ಛಾಯಗ್ರಹಣ ಈ ಸಿನಿಮಾಕ್ಕಿದ್ದು, ಗುರು ಕಿರಣರ ಸಂಗೀತದ ಸಿನಿಮಾಕ್ಕೆ ಹೊಸ ರಂಗನ್ನು ತಂದು ಕೊಡುವುದರೊಂದಿಗೆ ಸ್ಯಾಂಡಲ್‍ವುಡಿನಲ್ಲಿ ಹೊಸ ಅಲೆಯನ್ನು ಸೃಷ್ಠಿಸಿತು. 13 ವರ್ಷಗಳ ಹಿಂದಿನ ಮಾತು ಈಗ ಯಾಕು ಅಂಥೀರಾ.

ಶಿವಣ್ಣ ಮತ್ತು ಪ್ರೇಮ್ ಮತ್ತೊಮ್ಮೆ ಒಟ್ಟಾಗಿ ವಿಲನ್ ಮೂಲಕ ಪ್ರವೇಶ್ರ ಕೊಡುತ್ತಾ ಇದ್ದಾರೆ. ಹೌದು ಇತ್ತೀಚಿಗೆ ಬಾರಿ ಸುದ್ದಿ ಮಾಡುತ್ತಿರುವ  ಸಿನಿಮಾ ಅಂದರೆ ಅದು ‘ವಿಲ£’ï. ಸುದೀಪ್ ಮತ್ತು ಶಿವರಾಜ್‍ಕುಮಾರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಈ ಸಿನಿಮಾಕ್ಕೆ ಪ್ರೇಮ್ ಅವರದೇ ನಿರ್ದೇಶನ. ಅವರೇ ಹೆಣೆದಿರುವ ಕಥೆಯನ್ನು ಇಟ್ಟುಕೊಂಡು ತಾನ್ವಿ ಶಾನ್ವಿ ಬ್ಯಾನರಡಿಯಲ್ಲಿ ಈ ಸಿನಿಮಾವು ನಿರ್ಮಾಣಗೊಳ್ಳಲಿದೆ. ಅರ್ಜುನ ಜನ್ಯರ ಸಂಗೀತದಲ್ಲಿ ಮೂಡಿಬರಲಿರುವ ಈ ಚಿತ್ರ ಸಪ್ಟೆಂಬರ್ ಮೊದಲ ತಿಂಗಳಲ್ಲಿ ತೆರೆ ಕಾಣುವ ಸಂಭವ ಇದೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬರುತಿದೆ.

ಮತ್ತೊಮ್ಮೆ ಅಂತದ್ದೇ ದಾಖಲೆ ಬರೆಯುತ್ತಾ?

ಮತ್ತೊಮ್ಮೆ ಚಂದನವನದಲ್ಲಿ ದಾಖಲೆ ಸೃಷ್ಟಿಸುತ್ತ ಈ ಜೋಡಿ ಎಂಬ ಮಾತು ಸ್ಯಾಂಡಲ್‍ವುಡ್ ಸಿನಿ ರಸಿಕರಲ್ಲಿ ಮೂಡಿದೆ. 13 ವರ್ಷಗಳ ಹಿಂದೆ ತೆರೆ ಕಂಡ ‘ಜೋಗಿ’ ಸಿನಿಮಾದ ಮೂಲಕ ಮನೆ ಮಾತಾಗಿರುವ ಈ ಜೋಡಿ. ‘ವಿಲ£’ï ಸಿನಿಮಾದ ಮೂಲಕ ಮತ್ತೊಮ್ಮೆ ಸೂಪರ್ ಜೋಡಿಯಾಗಬಹುದೇ ಎಂಬ ನಿರೀಕ್ಷೆಯಲ್ಲಿ ಸಿನಿ ರಸಿಕರಿದ್ದಾರೆ. ತುಂಬಾ ಸಸ್ಪೆನ್ಸಾಗಿ ಸಿನಿಮಾವನ್ನು ಕೊಂಡು ಹೋಗುತ್ತಿರುವ ಪ್ರೇಮ್ ಎಲ್ಲಿಯೂ ಕೂಡ ಸಿನಿಮಾದ ಸತ್ಯಾಂಶವನ್ನು ಬಿಟ್ಟು ಕೊಡದೇ ಯಾರು ‘ವಿಲನ್’ ಎಂಬ ಗುಟ್ಟನ್ನೆ ಬಿಟ್ಟು ಕೊಟ್ಟಿಲ್ಲ . ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಅದರಲ್ಲಿ ಸುದೀಪ್ ಮತ್ತು ಶಿವರಾಜ್ ಕುಮಾರ್ ಇಬ್ಬರನ್ನು ಕೂಡ ವಿಲನ್ ರೀತಿಯಲ್ಲಿ ತೋರಿಸಿದ್ದಾರೆ ನಿರ್ದೇಶಕರು. ಶಿವಣ್ಣ ಅಭಿಮಾನಿ ಮತ್ತು ಕಿಚ್ಚನ ಅಭಿಮಾನಿಗಳಿಗೆ ಯಾವ ರೀತಿಯ ಸಿಹಿಯನ್ನು ಕೊಡುತ್ತಾರೆ ಎಂಬುದನ್ನು ಸಿನಿಮಾ ತೆರೆ ಕಾಣುವವರೆಗೆ ಕಾದು ನೋಡಬೇಕು. ಮತ್ತೊಮ್ಮೆ ಒಂದಾಗಿರುವ ಪ್ರೇಮ್ ಮತ್ತು ಶಿವಣ್ಣ ‘ವಿಲನ್’ ಸಿನಿಮಾದಿಂದ ಮತ್ತದೇ ‘ಜೋಗಿ’ ಸಿನಿಮಾದ ದಾಖಲೆಯನ್ನು ನಿರ್ಮಿಸುವ ಮುನ್ಸೂಚನೆಯನ್ನು ಕೊಟ್ಟಿದ್ದು ಅಂಥು ಸುಳ್ಳಲ್ಲ. ಅದೇ ಏನೇ ಇದ್ದರೂ ಸಿನಿಮಾ ತೆರೆ ಕಂಡ ಬಳಿಕವೇ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿz

Tags