ಸುದ್ದಿಗಳು

ದೀಪಾವಳಿ ಹಬ್ಬದ ಶುಭಾಶಯ ಹೇಳಿದ ಜಾನ್ ಸೆನಾ!

ಹಾಲಿವುಡ್ ನಟ ಜಾನ್ ಸೆನಾ

ನವೆಂಬರ್, 07: ಅಮೆರಿಕಾದ ಕುಸ್ತಿಪಟು ಮತ್ತು ನಟ ಜಾನ್ ಸೆನಾ ಅವರು ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಅವರ ಅಭಿಮಾನಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರತಿಯೊಬ್ಬರಿಗೂ ದೀಪಾವಳಿ ಹಬ್ಬದ ಶುಭಾಶಯ ಹೇಳುವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ.

 

View this post on Instagram

 

A post shared by John Cena (@johncena) on

ಬೆಳಕಿನ ಹಬ್ಬಕ್ಕೆ ಶುಭಾಶಯ ಹೇಳಿದ ಹಾಲಿವುಡ್ ನಟ

‘ಬಂಬಲ್ಬೀ’ ನಟ ಭಾರತ ದೇಶದ ದೊಡ್ಡ ಅಭಿಮಾನಿ, ಅಲ್ಲದೇ, ಭಾರತದ ತಮ್ಮ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಇದರ ಜೊತೆಗೆ ದೇಶದ ಪ್ರತಿ ಹಬ್ಬಕ್ಕೂ ಭಾರತೀಯ ಅಭಿಮಾನಿಗಳಿಗೆ ಸಂಪ್ರದಾಯಬದ್ಧವಾಗಿ ಶುಭಾಶಯ ಕೋರುತ್ತಾರೆ.

ಅನೇಕ ಬಾಲಿವುಡ್ ತಾರೆಗಳು ಕೂಡ ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಮಾಧ್ಯಮದ ಮೂಲಕ ಶುಭಾಶಯ ಹೇಳಿದ್ದಾರೆ. ಕರಣ್ ಜೋಹರ್, ಕಾಜೊಲ್, ಬಿಪಾಶಾ ಬಸು, ಇಮ್ರಾನ್ ಹಶ್ಮಿ, ಅನುಷ್ಕಾ ಶರ್ಮಾ, ಅನುಪಮ್ ಖೇರ್, ಅರ್ಜುನ್ ಕಪೂರ್ ಮೊದಲಾದವರು ಸೇರಿದ್ದಾರೆ.

ಜಾನ್ ಸೆನಾ ಕೊನೆಯ ಬಾರಿಗೆ ಅಮೆರಿಕಾದ ಲೈಂಗಿಕ ಹಾಸ್ಯ ಚಲನಚಿತ್ರ ‘ಬ್ಲಾಕರ್ಸ್’ ನಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಟ್ರಾನ್ಸ್ಫಾರ್ಮರ್ಸ್ ಸ್ಪಿನ್-ಆಫ್ ಪ್ರಿಕ್ವೆಲ್ ಮತ್ತು ‘ಬಂಬಲ್ಬೀ’ ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Tags