ಸುದ್ದಿಗಳು

ಬೆಲ್ಲಾ ಮತ್ತು ಜಾನ್ ಸೇನಾ ಅವರ ಪ್ರೇಮ್ ಕಹಾನಿ!

ಮಾಜಿ ಪ್ರೇಯಸಿ ಮಾಡೆಲ್- ಹಾಲಿವುಡ್ ನಟಿ ನಿಕ್ಕಿ ಬೆಲ್ಲಾ ಹಾಗು WWE ಖ್ಯಾತಿಯ ಜಾನ್ ಸೆನಾರವರ ಸಂಭಂದ  ಈ ಹಿಂದೆ ಕ್ಷುಲ್ಲಕ ಕಾರಣಕ್ಕೆ ಮುರಿದು ಹೋಗಿತ್ತು ಎನ್ನಲಾಗಿತ್ತು ಆದರೆ ಈ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸಲು ನಿಕ್ಕಿ ಬೆಲ್ಲಾ ಅವರನ್ನು ಯಾವುದೇ ಕಾರಣಕ್ಕೆ ಬಿಟ್ಟುಕೊಡುವುದಿಲ್ಲ ಎಂದು ಜಾನ್ ಸೇನಾ ಮಾಧ್ಯಮಗಳಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಾನ್ ಸೇನಾ ಹಾಗು ನಿಕ್ಕೆ ಬೆಲ್ಲಾ ಅವರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಹರ್ಷ ತಂದಿದೆ ಎನ್ನಲಾಗಿದೆ.

ಕಳೆದ ತಿಂಗಳು ಈ ಜೋಡಿಗಳು ತಮ್ಮ ನಿಶ್ಚಿತಾರ್ಥವನ್ನು ಕ್ಷುಲ್ಲಕ ಕಾರಣಕ್ಕೆ ನಿಲ್ಲಿಸಿದ ನಂತರ, ಈಗ ತಮ್ಮ ಮದುವೆಯ ದಿನಾಂಕವನ್ನು ಬಹಿರಂಗ ಪಡಿಸಿದ್ದಾರೆ. ಬೆಲ್ಲಾ ಅವರು ಜಾನ್ ಸೆನಾ, ಅವರೊಂದಿಗೆ ರಾಜಿ ಮಾಡಿಕೊಳ್ಳುವಿಕೆಯನ್ನು ತಳ್ಳಿಹಾಕದೆ ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

ಈ ಮಾಹಿತಿಯನ್ನು ನ್ಯೂಯಾರ್ಕ್ ನಗರದಲ್ಲಿರುವ ಎನ್ಬಿಸಿ ಯುನಿವರ್ಸಲ್ ನ ಅಪ್ಫ್ರಂಟ್ ಪ್ರಸ್ತುತಿ poeple.com ವರದಿ ಮಾಡಿದೆ.  ಇದಕ್ಕೆ ಪ್ರತಿಕ್ರಿಯಿಸಿರುವ ಬೆಲ್ಲಾ  “ಜಾನ್ ಅಂತಹ ಆಶ್ಚರ್ಯಕರ ವ್ಯಕ್ತಿ, ಅವನು ನಿಜವಾಗಿಯೂ ನನ್ನ ಜೀವನದ ಪ್ರೀತಿಯೇ” ಎಂದು ಎಂಟರ್ಟೇನ್ಮೆಂಟ್ ಟುನೈಟ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *