ಸುದ್ದಿಗಳು

ಮುಹೂರ್ತ ಆಚರಿಸಿಕೊಂಡ ‘ಜುಗಾರಿ ಕ್ರಾಸ್’

ಮುಹೂರ್ತಕ್ಕೆ ಆಗಮಿಸಿದ ‘ಯಶ್’ ಹಾಗೂ ‘ಪುನೀತ್ ರಾಜ್ ಕುಮಾರ್’

ಬೆಂಗಳೂರು.ಫೆ.10

‘ಜುಗಾರಿ ಕ್ರಾಸ್’– ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ. ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯುತ್ತಿರುವ ವಾಸ್ತವದ ಮೇಲೆ ಬೆಳಕು ಚೆಲ್ಲುತ್ತದೆ. ಕಾಡು ಕಾಳದಂಧೆಗೆ ಸಿಲುಕಿ ನಲುಗುತ್ತಿರುವ ಬಗ್ಗೆ ಕನ್ನಡಿ ಹಿಡಿಯುತ್ತದೆ. ‘ಜುಗಾರಿ ಕ್ರಾಸ್’ನಲ್ಲಿ ನಡೆಯುವ ಕಾಳದಂಧೆ ಊಹೆಗೆ ನಿಲುಕದ್ದು.

ಈಗಾಗಲೇ ಈ ಕಾದಂಬರಿಯನ್ನು ಸಿನಿಮಾ ಮಾಡುತ್ತಿರುವುದಾಗಿ ಸ್ಯಾಂಡಲ್ ವುಡ್ ನಲ್ಲಿ ಸುದ್ದಿಯಾಗಿತ್ತು. ಆದರೆ ಸಿನಿಮಾ ಶುರುವಾಗಿರಲಿಲ್ಲ. ಆದರೆ ಈಗ ಇದೇ ಹೆಸರಿನಲ್ಲಿ ಸಿನಿಮಾ ಬರುತ್ತಿದೆ. ವಿಶೇಷವೆಂದರೆ ಇಂದು ಈ ಚಿತ್ರಕ್ಕೆ ಮುಹೂರ್ತವಾಗಿದೆ.

ಮುಹೂರ್ತಕ್ಕೆ ಆಗಮಿಸಿದ ಯಶ್ ಹಾಗೂ ಪುನೀತ್ ರಾಜ್ ಕುಮಾರ್

ಇಂದು ಬೆಳಿಗ್ಗೆ ಜಯನಗರದ ಮೆಟ್ರೋ ಬಳಿ ಇರುವ ಗಣೇಶನ ದೇವಸ್ಥಾನದಲ್ಲಿ ‘ಜುಗಾರಿ ಕ್ರಾಸ್’ ಚಿತ್ರತಂಡವು ಮುಹೂರ್ತವನ್ನು ಆಚರಿಸಿಕೊಂಡಿತು. ಈ ಮುಹೂರ್ತ ಸಮಾರಂಭಕ್ಕೆ ಯಶ್ ಹಾಗೂ ಪುನೀತ್ ರಾಜ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಚಿತ್ರದ ಬಗ್ಗೆ

ಈಗಾಗಲೇ ನಾಟಕ ರೂಪದಲ್ಲಿ ಹಲವಾರು ಪ್ರದರ್ಶನಗಳನ್ನು ಕಂಡಿರುವ ಈ ಕಾದಂಬರಿಯನ್ನು ಸಿನಿಮಾ ರೂಪದಲ್ಲಿ ತರಲು ಈ ಹಿಂದೆ ಪ್ರಯತ್ನ ಮಾಡಲಾಗಿತ್ತು. ಹಲವು ವರ್ಷಗಳ ಹಿಂದೆ “ಕಾನೂರು ಹೆಗ್ಗಡತಿ’ ಚಿತ್ರವನ್ನು ನಿರ್ಮಿಸಿದ್ದ ನಾರಾಯಣ ಅವರು “ಜುಗಾರಿ ಕ್ರಾಸ್’ ಕಾದಂಬರಿಯನ್ನು ಚಿತ್ರವನ್ನಾಗಿ ಮಾಡುವ ತಮ್ಮ ಆಸೆ ವ್ಯಕ್ತಪಡಿಸಿದ್ದರು.

ಆನಂತರ ಶಿವರಾಜಕುಮಾರ್ ಅಭಿನಯದಲ್ಲಿ ಕೋಡ್ಲು ರಾಮಕೃಷ್ಣ “ಜುಗಾರಿ ಕ್ರಾಸ್’ ಚಿತ್ರವನ್ನು ಪ್ರಾರಂಭಿಸಿಯೇ ಬಿಡುತ್ತಾರೆ ಎಂಬ ಸುದ್ದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರಗಳು ಶುರುವಾಗಲೇ ಇಲ್ಲ.

ಆಗೊಮ್ಮೆ ಈಗೊಮ್ಮೆ “ಜುಗಾರಿ ಕ್ರಾಸ್’ ಚಿತ್ರವಾಗುವ, ಅದರ ಹಕ್ಕುಗಳು ಒಬ್ಬರ ಕೈಯಿಂದ ಇನ್ನೊಬ್ಬರಿಗೆ ಹಸ್ತಾಂತರವಾಗಿರುವ ಸುದ್ದಿಗಳು ಬರುತ್ತಲೇ ಇದ್ದವು. ಈಗ ‘ಕಡ್ಡಿಪುಡಿ’ ಚಂದ್ರು ಈ ಚಿತ್ರವನ್ನು ನಿರ್ಮಸುತ್ತಿದ್ದಾರೆ. ಚಿತ್ರದಲ್ಲಿ ಚಿರಂಜೀವಿ ಸರ್ಜಾ, ರಂಗಾಯಣ ರಘು, ತಾರಾ, ಸಾಧು ಕೋಕಿಲಾ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

‘ಜುಗಾರಿ ಕ್ರಾಸ್’ ಗೆ ಫೈನಲ್ ಆದ ಕಲಾವಿದರು

#jugaricross, #balkaninews #filmnews, #kannadasuddigalu, #chirusarja, #nagabharan

Tags