ಸುದ್ದಿಗಳು

ಮಧು ಕೊಲೆ ತೀವ್ರ ನೋವು ತಂದಿದೆ: ನಟ ಭುವನ್ ಹಾಗೂ ನಟಿ ಹರ್ಷಿಕಾ ಪೂಣಚ್ಚ ಸಂತಾಪ

ರಾಯಚೂರು.ಏ.20: ರಾಯಚೂರಿನ ಮಾಣಿಕಪ್ರಭು ದೇವಸ್ಥಾನದ ಹಿಂಭಾಗದ ಬೆಟ್ಟದ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ಪ್ರಕರಣದ ಕುರಿತಂತೆ ರಾಜ್ಯಾದ್ಯಂತ ತೀರ್ವ ಪ್ರತಿಭಟನೆಗಳು ಶುರುವಾಗಿವೆ.

ಈಗಾಗಲೇ ಸದ್ಯ ಸಾಮಾಜಿಕ ಜಾಲತಾಣದಲ್ಲಿ #ಜಸ್ಟಿಸ್ ಪಾರ್ ಮಧು… ಎಂಬ ಯ್ಯಾಶ್ ಟ್ಯಾಗ್ ಮೂಲಕ ಸಿನಿಮಾ ಕಲಾವಿದರು ಸಹ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲೇ ಬೇಕು ಎಂದು ಟ್ವೀಟ್ ಮಾಡುತ್ತಿದ್ದಾರೆ.

ಇಂದು ನಟ-ನಟಿಯರಾದ ಭುವನ್ ಹಾಗೂ ಹರ್ಷಿಕಾ ಪೂಣಚ್ಚರವರು ರಾಯಚೂರಿನ ಮೃತ ಯುವತಿ ಮಧು ಮನೆಗೆ ಆಗಮಿಸಿ, ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. “ರೇಪ್ ಅಂತ ಮರ್ಡರ್ ಅಂತ ಮತ್ತೆ ಶವ ಸುಟ್ಟಿದ್ದಾರೆ ಅಂತ ಈ ಘಟನೆಯಿಂದ ಬಹಳ ನೋವು ಆಗಿದೆ.

ಮಧು ಕೊಲೆಗೆ ಕಾರಣರಾದವರಿಗೆ ತಕ್ಕ ಶಿಕ್ಷೆ ಆಗಬೇಕು. ಜಸ್ಟಿಸ್ ಫಾರ್ ಮಧು ಎಂಬ ಹೋರಾಟ ನಿಲ್ಲಬಾರದು ಈ ಘಟನೆಯಿಂದ ಕೆಲವರ ಕೈವಾಡ ಇದೆ. ಜಸ್ಟಿಸ್ ಫಾರ್ ಮಧು ಎಂಬ ಅಭಿಯಾನ ನಿರಂತರವಾಗಿ ನಡೆಯಲಿ. ಮಧು ಅವರ ಫೋಟೋಗಳನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತಿದೆ. ನಮ್ಮ ಸಮಾಜಕ್ಕೆ ಎಂತ ಕೆಟ್ಟ ಕಾಲ ಬಂದಿದೆ ,ಎಂತ ಕೆಟ್ಟ ದಿಕ್ಕಿನಲ್ಲಿ ಹೋಗುತ್ತಿದೆ ನಮ್ಮ ಸಮಾಜ ಎಂಬುದಕ್ಕೆ ಉದಾಹರಣೆಯಾಗಿದೆ .

ಅತ್ಯಾಚಾರ ಒಂದು ಮಾಮೂಲಿ ಸುದ್ದಿಯಾಗಿಹೋಗಿದೆ, ನಮ್ಮನ್ನು ಆಳುತ್ತಿರುವವರು ಕಳ್ಳರು, ಚಾನೆಲ್ ಮನೋರಂಜನೆ ಶೋ ಕಾರ್ಯಕ್ರಮಗಳನ್ನು ಗೆಲ್ಲುತ್ತಿರುವವರು ಹುಚ್ಚರು, ಡೈಲಾಗ್ ಹೊಡೆವವವರು ಹೀರೋಗಳು , ದೇಶದ ಗಡಿ ಕಾಯುವ ನಮ್ಮ ಯೋಧರನ್ನು ಸೆಕ್ಯುರಿಟಿ ಗಾರ್ಡ್ ರೀತಿ ನೋಡೋ ಕಾಲ ಇದು. ಇದೇ ನಾ ಕಲಿಯುಗ ???

ಟ್ರೋಲ್ ಪೇಜ್ ಗಳನ್ನು ಅನಾವಶ್ಯಕ ಎಂದು ಹೇಳುತ್ತಿದ್ದ ಎಲ್ಲರಿಗೂ ಅವರು ಮಾಡಿದ justice for Madhu ಎಂಬ ಅಭಿಯಾನ ಮುಖಕ್ಕೆ ಹೊಡೆದ ಹಾಗಾಗಿದೆ . ಆನ್ ಲೈನ್ ಪೇಜ್ ಗಳ ಶ್ರಮಕ್ಕೆ ನನ್ನ ತುಂಬು ಹೃದಯದ ನಮನಗಳು. ಮಧುಗೆ ನ್ಯಾಯ ಸಿಗೋವರೆಗೂ ನಾವ್ ಯಾರು ಸುಮ್ಮನಿರಬಾರದು. ನಿಮ್ಮ ಒಂದು ಶೇರ್ ಹಾಗೂ ಕಾಮೆಂಟ್ ಅವರ ಆತ್ಮಕ್ಕೆ ಶಾಂತಿ ಸಿಗುವ ಹಾಗೆ ಮಾಡಬಹುದು. ಶುರುಹಚ್ಚಿಕೊಳ್ಳಿ . #justiceformadhu..” ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

“ಮಧು ಕೊಲೆ ತೀವ್ರ ನೋವು ಉಂಟು ಮಾಡಿದೆ. ಈ ಘಟನೆ ನೋಡಿ ನಮಗೆ ತುಂಬ ಬೇಜಾರಾಗಿದೆ. ಘಟನೆ ದೃಶ್ಯಗಳು ನೋಡಿ ನೋವು ನಾವೂ ರಾಯಚೂರಿಗೆ ಬಂದಿದ್ದೇವೆ. ಮೃತರ ಕುಟುಂಬಕ್ಕೆ ಸ್ವಾಂತನ ಹೇಳಲು ಬಂದಿದ್ದೇವೆ. ಇವತ್ತು ಇಡೀ ದಿನ ನಾವೂ ಮಧು ಕುಟುಂಬಕ್ಕೆ ನ್ಯಾಯ ಒದಗಿಸಲು ನಾವೂ ಹೋರಾಟ ಮಾಡುತ್ತೇವೆ. ಕರ್ನಾಟಕದ ತುಂಬ ಜಸ್ಟಿಸ್ ಫಾರ್ ಮಧು ಹೋರಾಟ ನಡೆಯಬೇಕು. ಹೋರಾಟ ಮಾಡುತ್ತಿರುವರಿಗೆ ಹುರಿದುಂಬಿಸುವ ಸಲುವಾಗಿ ಬಂದಿದ್ದೇವೆ” ಎಂದು ಭುವನ್ ಸಂತಾಪ ಹೊರ ಹಾಕಿದ್ದಾರೆ.

‘ಜಾನಕಿ ರಾಗ’: ಖ್ಯಾತ ಗಾಯಕಿ ಎಸ್ ಜಾನಕಿ ಅವರಿಗೆ ಸಂಗೀತ ನಮನ

#justiceformadhu, #bhuvan, #harshikapoonachcha, #balkaninews

Tags