ಸುದ್ದಿಗಳು

#JusticeForMadhu: ಕೀಚಕರಿಗೆ ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕು ಎಂದ ದರ್ಶನ್

ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುವಿನ ಅನುಮಾನಾಸ್ಪದ ಸಾವಿನ ಪ್ರಕರಣದ ಬಗ್ಗೆ ದರ್ಶನ್ ಟ್ವೀಟ್

ಬೆಂಗಳೂರು.ಏ.20: ರಾಯಚೂರಿನ ಮಾಣಿಕಪ್ರಭು ದೇವಸ್ಥಾನದ ಹಿಂಭಾಗದ ಬೆಟ್ಟದ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ಪ್ರಕರಣದ ಕುರಿತಂತೆ ರಾಜ್ಯಾದ್ಯಂತ ತೀರ್ವ ಪ್ರತಿಭಟನೆಗಳು ಶುರುವಾಗಿವೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ #ಜಸ್ಟಿಸ್ ಪಾರ್ ಮಧು… ಎಂಬ ಯ್ಯಾಶ್ ಟ್ಯಾಗ್ ಮೂಲಕ ಸಿನಿಮಾ ಕಲಾವಿದರು ಸಹ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲೇ ಬೇಕು ಎಂದು ಟ್ವೀಟ್ ಮಾಡುತ್ತಿದ್ದಾರೆ.

ಏಪ್ರಿಲ್ 13 ರಂದು ನಾಪತ್ತೆಯಾಗಿದ್ದ ರಾಯಚೂರಿನ ನವೋದಯ ಇಂಜಿನಿಯರಿಂಗ್ ಕಾಲೇಜಿನ ವಿದಾರ್ಥಿನಿ ಮಧು ಪತ್ತಾರ ಶವವಾಗಿ ಪತ್ತೆಯಾಗಿದ್ದರು. ಕಾಲೇಜಿನಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿ ಶವ ಪತ್ತೆಯಾಗಿದ್ದು, ನೆಲಕ್ಕೆ ತಾಗಿಕೊಂಡಂತೆ ನೇಣು ಬಿಗಿದ್ದಿದ್ದ ಮೃತದೇಹದಲ್ಲಿ ಸುಟ್ಟ ಗುರುತುಗಳೂ ಇವೆ. ಆದರೆ, ಸ್ಥಳದಲ್ಲಿ ಮಧು ಬರೆದಿದ್ದಾಳೆ ಎನ್ನಲಾದ ಡೆತ್ ನೋಟ್ ಕೂಡ ಸಿಕ್ಕಿತ್ತು.

ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸತೀಶ್ ನೀನಾಸಂ, ರಕ್ಷಿತಾ, ಹರ್ಷಿಕಾ ಪೂಣಚ್ಚ, ಸೇರಿದಂತೆ ಅನೇಕರು ಆರೋಪಿಗಳಿಗೆ ಶಿಕ್ಷೆಯಾಗಲೇ ಬೇಕು ಎಂದು ಟ್ವೀಟ್ ಮಾಡಿದ್ದರು. ಇದೀಗ ಡಿ-ಬಾಸ್ ದರ್ಶನ್ ಕೂಡಾ ‘ಮಧುವಿನ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಶಾಮೀಲಾದ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ವಿದ್ಯಾರ್ಥಿನಿ ಸಾವಿಗೆ ನ್ಯಾಯ ದೊರಕಬೇಕು ಎಂದು ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

Image may contain: 1 person, standing

ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುವಿನ ಅನುಮಾನಾಸ್ಪದ ಸಾವಿನ ತನಿಖೆ ಅತೀ ಶೀಘ್ರದಲ್ಲಿ ಸರಿಯಾಗಿ ನಡೆದು ಇಂಥ ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕೆಂದು ಕೋರಿಕೊಳ್ಳುತ್ತಿದ್ದೇನೆ. ಈ ರೇಪ್ & ಮರ್ಡರ್ ಕೃತ್ಯಕ್ಕೆ ಇನ್ನಷ್ಟು ಕಠಿಣವಾದ ಕಾನೂನು ನಮ್ಮ ದೇಶದಲ್ಲಿ ರೂಪುಗೊಳ್ಳಬೇಕು ಎಂದು ಬರೆದು #JusticeForMadhu ಎಂಬ ಫೋಟೋ ಹಾಕಿ ದರ್ಶನ್ ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ ಮಧುಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೋಷಕರು, ಪೊಲೀಸರಿಗೆ ದೂರು ನೀಡಿದ್ದು, ಇದೊಂದು ಕೊಲೆಯೆಂದು ತಿಳಿದುಬಂದಿದೆ. ಇನ್ನೊಂದೆಡೆ ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣದಂತೆ ಮಧು ಅವರನ್ನ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಆಕೆಯ ಸಾವಿಗೆ ನ್ಯಾಯ ಒದಗಿಸಬೇಕು ಅಂತಾ ಇದೀಗ ಸೋಶಿಯಲ್ ಮೀಡಿಯಾದಲ್ಲಿ #justiceformadhu ಅಭಿಯಾನ ನಡೆಯುತ್ತಿದೆ.

‘ಜಾನಕಿ ರಾಗ’: ಖ್ಯಾತ ಗಾಯಕಿ ಎಸ್ ಜಾನಕಿ ಅವರಿಗೆ ಸಂಗೀತ ನಮನ

#justiceformadhu, #darshan, #tweet, #balkaninews #filmnews, #kannadasuddigalu

Tags