ಸುದ್ದಿಗಳು

ತೆರೆ ಮೇಲೆ ಒಂದಾಗಿ ನಟಿಸಲಿರುವ ಅತ್ತಿಗೆ – ಮೈದುನಾ

ಚೆನೈ, ಏ.16:

ಕಾಲಿವುಡ್ ನ ಅತ್ತಿಗೆ – ಮೈದುನ ಇದೀಗ ಒಂದೇ ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಯಾರಪ್ಪಾ ಈ ಜೋಡಿ ಎಂದು ಅಚ್ಚರಿಯಾಗುತ್ತಿದೆಯೇ? ಹಾಗಿದ್ದರೆ ಇಲ್ಲಿ ಕೇಳಿ..

ಕಾಲಿವುಡ್ ನ ಖ್ಯಾತ ನಟ ಸೂರ್ಯ ಮತ್ತು ಕಾರ್ತಿ ಸಹೋದರರು ಎಂಬ ವಿಚಾರ ಸಿನಿ ಪ್ರಿಯರಿಗೆಲ್ಲಾ ತಿಳಿದೇ ಇದೆ. ಇದೀಗ ಸೂರ್ಯ ಪತ್ನಿ ಜ್ಯೋತಿಕಾ ಮತ್ತು ಕಾರ್ತಿ ತೆರೆ ಮೇಲೆ ಒಂದಾಗುತ್ತಿದ್ದಾರೆ. ಆದರೆ ಚಿತ್ರದಲ್ಲಿ ಅವರು ಪ್ರೇಮಿಗಳಾಗಿ ಏನು ನಟಿಸುತ್ತಿಲ್ಲ. ಬದಲಿಗೆ ಅಕ್ಕ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಲಯಾಳಂನಲ್ಲಿ ‘ದೃಶ್ಯಂ’ ಸಿನಿಮಾ ನಿರ್ದೇಶನ ಮಾಡಿದ್ದ ಜೀತು ಜೋಸೆಫ್ ಅವರು ಇದೀಗ ಥ್ರಿಲ್ಲರ್ ಎಳೆಯ ಕಥೆಯೊಂದನ್ನು ಆಯ್ದುಕೊಂಡಿದ್ದಾರೆ. ಕಥೆ ಈಗಾಗಲೇ ರೆಡಿಯಾಗುತ್ತಿದ್ದು ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ.

ಜ್ಯೋತಿಕಾ ಮತ್ತು ಕಾರ್ತಿ ಅಕ್ಕ ತಮ್ಮನಾಗಿ ನಟಿಸಲಿರುವ ಈ ಚಿತ್ರಕ್ಕೆ ಸೂರ್ಯ ಅವರೇ ಬಂಡವಾಳ ಹೂಡಲಿದ್ದಾರೆ.

ಜ್ಯೋತಿಕಾ ಮತ್ತು ಕಾರ್ತಿ ಇದೀಗ ಹಲವು ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರ ಪ್ರಾಜೆಕ್ಟ್ ಗಳೆಲ್ಲಾ ಮುಗಿದ ಮೇಲೆ ಜ್ಯೋತಿಕಾ ಕಾರ್ತಿ ಜೀತು ಟೀಂ ಸೇರಿ ಕೊಳ್ಳಲಿದ್ದಾರೆ ಎಂದು ವರದಿಗಳಾಗಿವೆ.

ಯು – ಟರ್ನ್ ಚಿತ್ರದ ರಿಮೇಕ್ !! ಸಮಂತಾಳಿಗೆ ಟಾಂಗ್ ಕೊಟ್ಟ ಶ್ರದ್ಧಾ!!

#balkaninews #jyothika #jyothikamovies #jyothikaandkarthi #karthimovies

Tags