ಸುದ್ದಿಗಳು

ಪ್ರೇಕ್ಷಕರಿಗೆ ‘ಕಾಗೆ ಬಂಗಾರ’ ಕೊಡಲು ‘ದುನಿಯಾ’ ಸೂರಿ ಸಜ್ಜು..!!!

ಸದ್ಯ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಶೂಟಿಂಗ್ ನಲ್ಲಿ ಬ್ಯೂಸಿ ಇರುವ ನಿರ್ದೇಶಕ ‘ದುನಿಯಾ’ ಸೂರಿ ಇದೀಗ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು, ಅವರೇ ಹೇಳುವಂತೆ, ಅವರ ಕನಸಿನ ‘ಕಾಗೆಬಂಗಾರ’ ಸಿನಿಮಾ ಮುಂದಿನ ವರ್ಷ ಶುರುವಾಗಲಿದೆ.

2015 ರಲ್ಲಿ ತೆರೆ ಕಂಡು ಯಶಸ್ವಿಯಾಗಿದ್ದ ‘ಕೆಂಡಸಂಪಿಗೆ’ ಚಿತ್ರವು ‘ಪಾರ್ಟ್ 2’ ಭಾಗವನ್ನು ಒಳಗೊಂಡಿತ್ತು. ಹೀಗಾಗಿ ಈ ‘ಗಿಣಿ ಮರಿ ಕೇಸಿನ’ ಭಾಗಗಳಾದ ‘ಕಾಗೆ ಬಂಗಾರ’ ಹಾಗೂ ‘ಬ್ಲಾಕ್ ಮ್ಯಾಜಿಕ್’ ಸಿನಿಮಾಗಳನ್ನು ಮಾಡುತ್ತೇನೆ ಎಂದು ಹೇಳಿಕೊಂಡಿದ್ದರು. ಕೆಲವು ಕಾರಣಗಳಿಂದ ಈ ಸಿನಿಮಾ ಇನ್ನೂ ಶುರುವಾಗಿರಲಿಲ್ಲ, ಆದರೆ ಈ ಚಿತ್ರಗಳಿಗೀಗ ಮರುಜೀವ ಬಂದಿದೆ.

ಹೌದು, ಮುಂದಿನ ವರ್ಷ ‘ಕಾಗೆ ಬಂಗಾರ’ ಸಿನಿಮಾ ಶುರುವಾಗಲಿದ್ದು, ಸದ್ಯ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಪ್ರಶಾಂತ್ ಸಿದ್ದಿ ಮುಖ್ಯ ಭೂಮಿಕೆಯಲ್ಲಿ ನಿಭಾಯಿಸಲಿದ್ದಾರೆ.

‘ಜನರು ‘ಕೆಂಡಸಂಪಿಗೆ’ಯನ್ನು ಮೆಚ್ಚಿದ್ದಾರೆ, ‘ಕಾಗೆ ಬಂಗಾರ’ಕ್ಕಾಗಿ ಎದುರು ನೋಡುತ್ತಿದ್ದಾರೆ. ಇದೀಗ ಅದುವೇ ನನ್ನ ಮುಂದಿನ ಯೋಜನೆಯಾಗಿದೆ. ಇದಕ್ಕಾಗಿ ಚಿತ್ರಕಥೆ ಸಿದ್ದವಿದ್ದು ಅಂತಿಮ ಕ್ಷಣದ ತಯಾರಿ ನಡೆಯಬೇಕಿದೆ’ ಎಂದು ಸೂರಿ ಹೇಳಿದ್ದಾರೆ.

ಸಂತ್ರಸ್ತರಿಗೆ ಸಹಾಯ: ನೆಟ್ಟಿಗರಿಂದ ಮೆಚ್ಚುಗೆ ಪಡೆದ ಇನ್ಫೋಸಿಸ್ ಸುಧಾಮೂರ್ತಿ

#kaagebangara #kaagebangara2020 #duniyasuri #duniyasurinextmovie

Tags