ಸುದ್ದಿಗಳು

ಖಾಕಿ ತೊಟ್ಟು ಖದರ್ ತೋರಿಸಲು ರೆಡಿಯಾದ ಚಿರು!!

ಬೆಂಗಳೂರು,ಫೆ.11:

ಚಿರಂಜೀವಿ ಸರ್ಜಾ ಅವರ ಚಿತ್ರಕ್ಕೆ  ಚೊಚ್ಚಲ ನಿರ್ದೇಶನ ಮಾಡುವ ಮೂಲಕ ನವೀನ್ ರೆಡ್ಡಿ  ಪೂರ್ಣ ಪ್ರಮಾಣದ ನಿರ್ದೇಶಕರಾಗಲು ರಡಿಯಾಗಿದ್ದಾರೆ… ‘ಖಾಕಿ’ ಟ್ಯಾಗ್ಲೈನ್ನೊಂದಿಗೆ – ವಿದ್ಯಾಧರ್ ಬರೆದ ಪವರ್ ಆಫ್ ಕಾಮನ್ ಮ್ಯಾನ್, ತರುಣ್ ಟಾಕೀಸ್ ಅಡಿಯಲ್ಲಿ ಮಾಡಿದ ಚಲನಚಿತ್ರದಲ್ಲಿ ಕೇಬಲ್ ಆಪರೇಟರ್ ಪಾತ್ರದಲ್ಲಿ ಚಿರಂಜೀವಿ ಮಿಂಚಲಿದ್ದಾರೆ..

Image result for chiru sarja

ನಾಳೆ ‘ಖಾಕಿ’ ಚಿತ್ರದ ಮುಹೂರ್ತ

ಟಿ. ಎಸ್ ನಾಗಾಭರಣ ನಿರ್ದೇಶನದ ಕಡ್ಡಿಪುಡಿ ಚಂದ್ರು ನಿರ್ಮಾಣದದಲ್ಲಿ ಮೂಡಿಬರುತ್ತಿರುವ  ‘ಜುಗಾರಿ ಕ್ರಾಸ್’ ಚಿತ್ರದ ಶೂಟಿಂಗ್ ನಿನ್ನೆ ಆರಂಭಗೊಂಡಿತು. ನಾಳೆ ‘ಖಾಕಿ’ ಚಿತ್ರದ ಮುಹೂರ್ತ ಕೂಡ ನೆರವೇರಲಿದೆ… ರಿತ್ವಿಕ್ ಅವರ ಸಂಗೀತ ಈ  ಚಿತ್ರಕ್ಕಿದ್ದು, ಬಾಲು ಅವರ ಕ್ಯಾಮರಾ ಕೈ ಚಳಕವೂ ಇದೆ.. ಈ ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ.

ಇನ್ನೊಂದೆಡೆ ರಾಜಮಾರ್ಥಾಂಡ ಚಿತ್ರದ ಬಿಡುಗಡೆಗಾಗಿ ಚಿರಂಜೀವಿ ಕಾದು ಕುಳಿತಿದ್ದು,’ ಆ ಕ್ಷಣ,’ ‘ರಣಂ’ ಮತ್ತು ‘ಸಿಂಗ’ ಚಿತ್ರದ ಶೂಟಿಂಗ್ ಭರ ಪೂರದಿಂದ ನಡೆಯುತ್ತಿದೆ.

ಕಾಂಟ್ರೋವರ್ಸಿಯಲ್ಲಿ ಸಿಲುಕಿಹಾಕಿಕೊಂಡ ಸ್ಟೈಲೀಶ್ ಸ್ಟಾರ್

#balkaninews #chirusarja #kaakhimovie

Tags