ಸುದ್ದಿಗಳು

ಕಾಣೆಯಾದವರನ್ನು ಹುಡುಕುತ್ತಿರುವ ‘Rambo-2’ ನಿರ್ದೇಶಕ

‘ದಿಲ್ ವಾಲಾ’, ‘ಶಕ್ತಿ’, ‘Rambo-2’ ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಅನಿಲ್ ಕುಮಾರ್ ಸದ್ಯ ‘ದಾರಿ ತಪ್ಪಿದ ಮಗ’ ಚಿತ್ರವನ್ನು ಮಾಡುತ್ತಿದ್ದಾರೆ. ಈ ನಡುವೆ ಮತ್ತೊಂದು ಚಿತ್ರದ ಕುರಿತಂತೆ ಮಾತನಾಡಿದ್ದಾರೆ.

ಹೌದು, ಅನಿಲ್ ಕುಮಾರ್ ಇದೀಗ ‘ದಾರಿ ತಪ್ಪಿದ ಮಗ’ ಚಿತ್ರದ ಬಳಿಕ ‘ಕಾಣೆಯಾದವರ ಬಗ್ಗೆ ಪ್ರಕಟಣೆಗಳು’ ಎಂಬ ಹೆಸರಿನ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ರವಿಶಂಕರ್, ತಬಲಾ ನಾಣಿ ಮತ್ತು ರಂಗಾಯಣ ರಘು ಅವರುಗಳು ನಟಿಸುತ್ತಿದ್ದಾರೆ.

ಅಂದ ಹಾಗೆ ಅನಿಲ್ ಕುಮಾರ್ ಕಳೆದ ವರ್ಷ ‘Rambo-2’ ಚಿತ್ರವನ್ನು ಕೊಟ್ಟಿದ್ದರು. ಈ ನಡುವೆ ಯಶ್ ಗಾಗಿ ‘ಮೈ ನೇಮ್ ಈಸ್ ಕಿರಾತಕ’ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಆದರೆ, ಈ ಸಿನಿಮಾ ತಡವಾಗುತ್ತಿರುವುದರಿಂದ ‘ದಾರಿ ತಪ್ಪಿದ ಮಗ’ ಮತ್ತು ‘ಕಾಣೆಯಾದವರ ಬಗ್ಗೆ ಪ್ರಕಟಣೆಗಳು’ ಚಿತ್ರವನ್ನು ಮಾಡುತ್ತಿದ್ದಾರೆ.

ಒಬ್ಬ ಬರಹಗಾರರಾಗಿ ಎಲ್ಲಾ ರೀತಿಯ ಸಿನಿಮಾಗಳನ್ನು ಮಾಡಬೇಕೆಂಬ ಆಸೆ ಹೊಂದಿರುವ ನಿರ್ದೇಶಕ ಅನಿಲ್ ಕುಮಾರ್ ಇದೀಗ 60, 70 ಮತ್ತು ಈ ಹೊತ್ತಿನ ಕಾಲಘಟ್ಟವನ್ನು ಪ್ರತಿನಿಧಿಸುವಂತ ಕಥೆಯನ್ನು ಮಾಡಿಕೊಂಡಿದ್ದಾರೆ.

‘ಇದೊಂದು ವಿಭಿನ್ನ ರೀತಿಯ ಚಿತ್ರವಾಗಿದ್ದು ಇಳಿ ವಯಸ್ಸಿನವರ ಕಥೆಯನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಅದನ್ನು ಕಮರ್ಷಿಯಲ್ ಆಗಿ ಹೇಳುವ ಚಿತ್ರಕಥೆ ಬರೆದುಕೊಂಡಿದ್ದೇನೆ. ಮೂವರು ಕಲಾವಿದರ ಪಾತ್ರಗಳು ನಾನಾ ಘಟನೆಗಳನ್ನು ನೆನಪಿಸುತ್ತಲೇ ಬದುಕನ್ನು ಪ್ರೀತಿಸಲು ಹೇಳುತ್ತೇವೆ’ ಎಂದು ಚಿತ್ರದ ಬಗ್ಗೆ ಅನಿಲ್ ಹೇಳುತ್ತಾರೆ.

ಹಿಟ್ ಆಯ್ತು ‘ರಾಕಿ ಬಾಯ್’ Rap ಸಾಂಗ್..!!!

#kaanayadavarabaggeprakatanegalu #movie #balkaninews #rambo-2, #filmnews,  #ravishankar, #dilwala #daaritappidamaga #mynameiskirataka,

Tags