ಸುದ್ದಿಗಳು

ಸದ್ದಿಲ್ಲದೇ ಶೂಟಿಂಗ್ ಮುಗಿಸಿದ ದುನಿಯಾ ರಶ್ಮಿಯ “ಕಾರ್ನಿ”

ದುನಿಯಾ ರಶ್ಮಿ ಇದೀಗ ‘ಕಾರ್ನಿ’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಮತ್ತು ಇದುವರೆಗೂ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಬಿಟ್ಟು ಕೊಡದ ಚಿತ್ರತಂಡ ಸದ್ದಿಲ್ಲದೇ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದೆ.

ಸುಮಾರು ವರ್ಷಗಳ ನಂತರ ನಟಿ ದುನಿಯಾ ರಶ್ಮಿ ಚಿತ್ರರಂಗಕ್ಕೆ ಮರಳಿದ್ದು, ಹ್ಯಾಕ್, ಪ್ರೀತಿ ಕಿತಾಬು ಚಿತ್ರಗಳಲ್ಲೂ ನಟಿಸಿದ್ದರು. ಎರಡು ವರ್ಷಗಳ ಹಿಂದೆಯಷ್ಟೇ “ಮುರಾರಿ’ ಚಿತ್ರದಲ್ಲಿ ಶ್ರೀಮುರಳಿ ಜೊತೆಗೆ ಕಾಣಿಸಿಕೊಂಡಿದ್ದೇ ಕೊನೆ. ಅಲ್ಲಿಂದ ಯಾವ ಚಿತ್ರಗಳಲ್ಲೂ ಕಾಣಿಸಿಕೊಂಡಿರಲಿಲ್ಲ. “ನಾಯಕಿಯ ಪಾತ್ರಕ್ಕೆ ಆಫರ್ ಗಳು ಬರುತ್ತಿವೆ. ಆದರೆ ಸ್ಟೋರಿ ಒಂದೇ ತರ ಇರುತ್ತೆ . ಸ್ವಲ್ಪ ಡಿಫರೆಂಟ್ ಆದ ಕಥೆ, ಮತ್ತು ಪಾತ್ರ ಸಿಕ್ಕರೆ ನಟಿಸುತ್ತೀನಿ”ಅಂತ ರಶ್ಮಿ ಅವರು ಕೆಲ ದಿನಗಳ ಹಿಂದೆಯಷ್ಟೇ ತೀರ್ಮಾನ ತೆಗೆದುಕೊಂಡಿದ್ದರು.

ಇದೀಗ ರಶ್ಮಿಯವರು ಕಾರ್ನಿ ಚಿತ್ರದಲ್ಲಿ ನಟಿಸಿದ್ದು, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟ್ರಿ ಕಥೆ ಹೊಂದಿದ್ದು, ವಿನೋದ್ ಕುಮಾರ್ ಎಂಬುವವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ “ಲೈಫ್ ಸೂಪರ್” ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇದೀಗ, ಮತ್ತೊಂದು ಹೊಸ ಸಬ್ಜೆಕ್ಟ್ ನೊಂದಿಗೆ, ಹೊಸ ರೀತಿಯ ಮನರಂಜನೆ ನೀಡಲು ಬರ್ತಿದ್ದಾರೆ.

ಚಿತ್ರದಲ್ಲಿ ದುನಿಯಾ ರಶ್ಮಿ ಗೆ ಜೋಡಿಯಾಗಿ ನಿರಂತ್ ಎಂಬುವವರು ಅಭಿನಯಿಸಿದ್ದು, ಬಹುತೇಕ ಹೊಸ ಪ್ರತಿಭೆಗಳೇ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸೂರ್ಯೋದಯ ಅವರು ಛಾಯಾಗ್ರಹಣ, ಅರಿಂದಮ್ ಗೋಸ್ವಾಮಿ ಸಂಗೀತ ಸಂಯೋಜನೆ ಮಾಡಿದ್ದು, ಗೋವಿಂದರಾಜು ಅವರು ಗೋಕುಲ ಎಂಟರ್ ಪ್ರೈಸಸ್ ಲಾಂಛನದಲ್ಲಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಚಿತ್ರವು ಇನ್ನೇರಡು ತಿಂಗಳಲ್ಲಿ ತೆರೆಗೆ ಬರಲಿದೆ.

 

 

@ sunil javali

Tags

One Comment