ಸುದ್ದಿಗಳು

‘ಅರ್ಜುನ್ ರೆಡ್ಡಿ’ ಹಿಂದಿ ರಿಮೇಕ್ ನ ‘ಕಬೀರ್ ಸಿಂಗ್’ ಮೊದಲ ಹಾಡು ಬಿಡುಗಡೆ

ಮುಂಬೈ, ಮೇ.25:

‘ಅರ್ಜುನ್ ರೆಡ್ಡಿ’ ಸಿನಿಮಾ ಟಾಲಿವುಡ್‌ ನ ದೊಡ್ಡ ಬ್ಲಾಕ್‌ ಬಸ್ಟರ್ ಹಿಟ್ ಕೊಟ್ಟಿದ್ದ ಸಿನಿಮಾ. ಅದರಲ್ಲೂ ಈ ಸಿನಿಮಾ ಬಂದ ನಂತರ ವಿಜಯ್ ದೇವರಕೊಂಡ ಎಂಬ ನಟ ಬೆಳಗಾಗುವುದರೊಳಗೆ ತೆಲುಗು ಸಿನಿಮಾ ಪ್ರೇಕ್ಷಕರ ನೆಚ್ಚಿನ ನಟ ಆಗಿ ಹೋಗಿದ್ದರು. ಸದ್ಯ ಈ ನಟನ ಸಿನಿಮಾ ಬಾಲಿವುಡ್‌ ನಲ್ಲಿ ಕಬೀರ್ ಸಿಂಗ್ ಆಗಿ ರೀಮೇಕ್ ಆಗುತ್ತಿದೆ. ಈ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಯುಟ್ಯೂಬ್‌ ನಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ.

ಭಗ್ನ ಪ್ರೇಮಿಯಾದ ಕಬೀರ್ ಸಿಂಗ್

ಹೌದು, ಶಾಹಿದ್ ಹಾಗೂ ಕೈರಾ ಅಭಿನಯದ ಈ ಸಿನಿಮಾ ಸದ್ಯ ಬಾರೀ ಸದ್ದು ಮಾಡುತ್ತಿರುವ ಸಿನಿಮಾ. ಈಗಾಗಲೇ ಪೋಸ್ಟರ್ ಹಾಗೂ ಟ್ರೇಲರ್ ಮೂಲಕ ಸದ್ದು ಮಾಡಿದ್ದ ಈ ಸಿನಿಮಾ ಟ್ರೇಲರ್‌ ನಲ್ಲಿರುವ  ಅವರ ಲಿಪ್ ಲಾಕ್ ಇರುವ ಹಾಟ್ ಸೀನ್‌ಗಳಿಗೆ ಹಲ್ ಹಚ್ ಮಾಡಿತ್ತು. ಅದಕ್ಕಿಂತ ಹೆಚ್ಚಾಗಿ ಪ್ರೀತಿಯ ಹುಚ್ಚಲ್ಲಿ ಭಗ್ನ ಪ್ರೇಮಿ ಕಬೀರ್ ಆಗಿ ಶಾಹಿದ್ ಅಭಿನಯ ಪ್ರೇಕ್ಷಕರನ್ನು ಫಿದಾ ಮಾಡಿಸಿದೆ. ಸದ್ಯ ಬಿಡುಗಡೆಯಾದ ಹಾಡಿನಲ್ಲೂ ಕೂಡ ಶಾಹಿದ್ ಅವರ ಭಗ್ನ ಪ್ರೀತಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಜೂನ್‌ ನಲ್ಲಿ ಸಿನಿಮಾ ತೆರೆಗೆ

ಇಷ್ಟಪಡುವ ಹುಡುಗಿ ಬಿಟ್ಟು ಹೋದಾಗ ಕೆಲಸದ ಮೇಲೆ ಮನಸ್ಸಿಲ್ಲದೆ ಇಲ್ಲದ ಹುಡುಗಿಯನ್ನು ನೆನೆಯುತ್ತಾ ದಿನ ಪೂರ್ತಿ ಕುಡಿಯುವ ನಾಯಕ ನಟ. ಕೊನೆಗೆ ಶ್ವಾನದ ಎದುರು ತನ್ನ ಪ್ರೀತಿಯ ಬಗ್ಗೆ ಹೇಳುವ ಪರಿಯನ್ನು ಹಾಡಿನಲ್ಲಿ ನಾಯಕ ನಟನ ಪಾತ್ರವನ್ನು ಬಿಚ್ಚಿಡುತ್ತದೆ. ಸದ್ಯ ಬಿಡುಗಡೆಯಾದ ಈ ವಿಡಿಯೋ ಸಾಂಗ್ ಯುಟ್ಯೂಬ್‌ ನಲ್ಲಿ ಸದ್ದು ಮಾಡುತ್ತಿದೆ. ಸಂದೀಪ್ ವಂಗಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಸಾಧಕರ ಸೀಟ್ ಅಲಂಕರಿಸಿದ ನಟ, ನಿರ್ದೇಶಕ ಟಿ ಎಸ್ ನಾಗಾಭರಣ

#balkaninews #bollywood #hindimovies #kabirsinghmovie #shaheedkapoor #kairaadvani

 

Tags