ಸುದ್ದಿಗಳು

ಈ ಹಾಟ್ ನಟಿಯ ಮೊದಲ ಸಿನಿಮಾ 130 ಕೋಟಿ ಗಳಿಸಿತ್ತು..!

ಮುಂಬೈ, ಜ.14: ಸಿನಿಮಾ ಉದ್ಯಮವು ಬಹಳಷ್ಟು ಸ್ಪರ್ಧೆಯನ್ನು ಹೊಂದಿರುವಂತಹ ಕ್ಷೇತ್ರ. ಒಬ್ಬೊಬ್ಬರು ಈ ಕ್ಷೇತ್ರಕ್ಕೆ ಪ್ರವೇಶಿಸಿದ ನಂತರ ಸ್ಪರ್ಧಾತ್ಮಕವಾಗಿಯೇ ತಮ್ಮ ಬೆಳವಣಿಗೆ ನೋಡಬೇಕಾಗುತ್ತದೆ. ಯಾಕೆಂದರೆ ಇಲ್ಲಿ ಸ್ಪರ್ಧೆಯ ಮಧ್ಯೆ ಬದುಕಬೇಕಾಗುತ್ತದೆ. ಗೆದ್ದವರು ಗೆದ್ದರು. ‌ಸೋತವರು ಸೋತರು. ಆದರೆ ಈ ನಟಿಯ ಬದುಕಿನಲ್ಲಿ ವಿಚಿತ್ರ ತಿರುವು ಕಾಣಿಸಿಕೊಂಡಿತು. ಹೌದು, ಈ ಬಾಲಿವುಡ್ ನ ಸುಂದರ ನಟಿ ಈಗ ಸಿನಿಮಾದಲ್ಲಿ ನಟಿಸುತ್ತಿಲ್ಲ. ಆದರೆ ಈ ನಟಿಯ ಮೊದಲ ಚಿತ್ರ ನೂರು ಕೋಟಿ ಕ್ಲಬ್ ದಾಟಿ ದಾಖಲೆ ಸೃಷ್ಟಿಸಿತ್ತು. ಆ ನಟಿಯ ಹೆಸರೇ ಕೈನಾತ್ ಆರೋರಾ.

ಗ್ರ್ಯಾಂಡ್ ಮಾಸ್ತಿ ಖ್ಯಾತಿಯ ಕೈನಾತ್ ಆರೋರಾ

ಈ ನಟಿಯ ವಯಸ್ಸು 32 ವರ್ಷ. ‘ಗ್ರ್ಯಾಂಡ್ ಮಾಸ್ತಿ ‘ ಚಲನಚಿತ್ರದೊಂದಿಗೆ ಇವರು ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿನ ಈಕೆಯ ಅಭಿನಯ ಮತ್ತು ಹಾಟ್ ಅವತಾರಗಳನ್ನು ಸಿನಿ ರಸಿಕರು ಇಷ್ಟಪಟ್ಟಿದ್ದರು. ಈಕೆಯ ಹಾಟ್ ಬಾಡಿ ಫಿಗರನ್ನ ನೋಡಿದವರು ಫಿದಾ ಆಗಿ ಹುಚ್ಚರಾಗಿದ್ದರು. ಅಂದಹಾಗೇ ಈ ನಟಿ ಪಂಜಾಬಿ ಚಲನಚಿತ್ರಗಳಲ್ಲಿ ಮತ್ತು ಹಾಡುಗಳಲ್ಲಿ ಕೂಡಾ ಕೆಲಸ ಮಾಡಿದ್ದಾರೆ.

34 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ‘ಗ್ರ್ಯಾಂಡ್ ಮಸ್ತಿ’ ಚಿತ್ರವು 130 ಕೋಟಿ ರೂಪಾಯಿಗಳ ಸಂಗ್ರಹವನ್ನು ಮಾಡಿತ್ತು. ಈ ಚಲನಚಿತ್ರವು ವಯಸ್ಕರ ಕಾಮಿಡಿ ಆಧಾರಿತವಾಗಿತ್ತು. ಆದರೆ ನಟಿ ಕೈನಾತ್ ಆರೋರಾ ಈ ಚಿತ್ರದ ನಂತರ ಯಾವುದೇ ಸಿನಿಮಾಗಳಲ್ಲಿ ನಟಿಸಲಿಲ್ಲ. ಅದ್ಯಾಕೆ ಅನ್ನುವುದೇ ಹೆಚ್ಚಿನವರ ಪ್ರಶ್ನೆ. ಮುಂದೆ ಹೊಸ ಸಿನಿಮಾದಲ್ಲಿ ನಟಿಸುತ್ತಾರ, ಕಾದು ನೋಡಬೇಕು.

#kainaatarora #kainaataroramovies #bollywood #balkaninews #grandmasti

Tags