ಸುದ್ದಿಗಳು

ಕೈರಾಗೆ ಅವಕಾಶಗಳ ಮಹಾಪೂರ

ವೃತ್ತಿ ಜೀವನದ ಜೊತೆ ಜೊತೆಗೆ ವೈಯಕ್ತಿಕ ಬದುಕು ಕೂಡ ಉತ್ತಮವಾಗಿದೆ

ಮುಂಬೈ,ಸೆ.10: ನಟಿ ಕೈರಾ ಅದ್ವಾನಿ ಸದ್ಯಕ್ಕೆ ಬಾಲಿವುಡ್ ನ ಬ್ಯುಸಿ ನಟಿಯರ ಸಾಲಿನಲ್ಲಿ ನಿಂತಿದ್ದಾರೆ. ಒಂದರ ಹಿಂದೊಂದರಂತೆ ಅವಕಾಶಗಳು ಆಕೆಯನ್ನು ಹುಡುಕಿಕೊಂಡು ಬರುತ್ತಿದ್ದು, ಬಿಗ್ ಸ್ಟಾರ್  ಗಳೊಂದಿಗೆ ತೆರೆ ಹಂಚಿಕೊಳ್ಳುವ ಉತ್ಸಾಹದಲ್ಲಿದ್ದಾರೆ ಕೈರಾ.

ಅಂದಹಾಗೆ ಅಕ್ಷಯ್ ಕುಮಾರ್, ಕರೀನಾ ಕಾಪೂರ್, ದಿಲ್ಜಿತ್ ದೋಸಾನ್ಜ್ ಅವರ ‘ಗುಡ್ ನ್ಯೂಸ್’ ಚಿತ್ರದಲ್ಲಿಕೈರಾ ನಟಿಸುತ್ತಿದ್ದು, ಬಿಗ್ ಸ್ಟಾರ್ ಗಳೊಂದಿಗೆ ನಟಿಸಲು ತಾವು ಈಗಾಗಲೇ ತಯಾರಿಯಲ್ಲಿ ತೊಡಗಿರುವುದಾಗಿ ಕೈರಾ ಹೇಳಿಕೊಂಡಿದ್ದಾರೆ. ಅಂದಹಾಗೆ ‘ಗುಡ್ ನ್ಯೂಸ್’ ಚಿತ್ರ, ಕರಣ್ ಜೋಹರ್ ನಿರ್ಮಾಣದ ಧರ್ಮ ಪ್ರೋಡಕ್ಷನ್ ನಲ್ಲಿ ತೆರೆ ಕಾಣುತ್ತಿದೆ. ಚಿತ್ರಕ್ಕೆ ರಾಜ್ ಮೆಹ್ತಾ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Image result for kiara advani

ನಾನು ಪಂಜಾಬಿ ಹುಡುಗಿ

“ನಾನು ಪಂಜಾಬಿ ಹುಡುಗಿಯಾಗಿ ಚಿತ್ರದಲ್ಲಿಕಾಣಿಸಿಕೊಳ್ಳುತ್ತಿದ್ದು, ಇದಕ್ಕಾಗಿ ಈಗಾಗಲೇ ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ. ಚಿತ್ರ ಹಾಸ್ಯಭರಿತವಾಗಿದ್ದು, ಚಿತ್ರ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಎರಡು ಮಾತಿಲ್ಲ” ಎನ್ನುತ್ತಾರೆ ಕೈರಾ.

26ರ ಹರೆಯದ ಕೈರಾಗೆ ವೃತ್ತಿ ಜೀವನದ ಜೊತೆ ಜೊತೆಗೆ  ವೈಯಕ್ತಿಕ ಬದುಕು ಕೂಡ ಉತ್ತಮವಾಗಿದೆಯಂತೆ. ಇದು ನನ್ನ ಜೀವನದ ಅತ್ಯಂತ ಸುಂದರ ಘಟ್ಟಗಳು ಎಂದು ಸ್ವತಃ ಕೈರಾ ಹೇಳಿಕೊಂಡಿದ್ದಾರೆ.

ನಾನು ಜೀವನವನ್ನು ಎಂಜಾಯ್ ಮಾಡುತ್ತಿದ್ದು, ಅತ್ಯಂತ ಸುಂದರ ಬದುಕನ್ನು ಅನುಭವಿಸುತ್ತಿದ್ದೇನೆ. ನನ್ನ ಸಂತಸಕ್ಕೆ ಪಾರವೇ ಇಲ್ಲದಂತಾಗಿದ್ದು, ಕಠಿಣ ಪರಿಶ್ರಮದಿಂದ ಸಾಧನೆಯ ಮಾಡಬೇಕೆಂದಿದ್ದೇನೆ ಎಂದಿದ್ದಾರೆ ಕೈರಾ.

 

Tags