ಸುದ್ದಿಗಳು

ಕುತೂಹಲ ಹುಟ್ಟಿಸಿದ ‘ಕಳಂಕ್’ ಸಿನಿಮಾ

ಮುಂಬೈ,ಮಾ.24:  ಬಹುನಿರೀಕ್ಷೆ ಹೊಂದಿರುವ ‘ಕಳಂಕ್’ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಚಿತ್ರಪ್ರೇಮಿಗಳ ಕುತೂಹಲ ಹೆಚ್ಚಿಸಿದೆ. 2.5 ನಿಮಿಷದ ‘ಕಳಂಕ್’ ಟೀಸರ್ ನಲ್ಲಿ ಮಾಧುರಿ ದೀಕ್ಷಿತ್ ಮತ್ತು ಸಂಜಯ್ ದತ್ ಒಂದು ದೃಶ್ಯದಲ್ಲಿ ಹೀಗೆ ಬಂದು ಹಾಗೆ ಹೋಗ್ತಾರೆ. ಆದರೆ ಆ ದೃಶ್ಯವೇ ಟೀಸರ್ನ ಹೈಲೈಟ್ ಗಳಲ್ಲಿ ಒಂದು.

Image result for KalankOfficial Teaser

ಹೌದು, ಸಂಜಯ್ ಮತ್ತು ಮಾಧುರಿ ಮುಖ ತಿರುಗಿಸಿಕೊಂಡು ಬರೋಬ್ಬರಿ 20 ವರ್ಷಗಳಾಗಿತ್ತು. ಈ ಸುದೀರ್ಘ ಅವಧಿಯಲ್ಲಿ ಇವರಿಬ್ಬರೂ ಒಂದೇ ಒಂದು ಸಿನಿಮಾದಲ್ಲಿ ಜೊತೆಯಾಗಿ ನಟಿಸಿರಲಿಲ್ಲ.

ಬರೋಬ್ಬರಿ ಎರಡು ದಶಕಗಳ ನಂತರ ಒಂದೇ ಚಿತ್ರದಲ್ಲಿ ಮಾಧುರಿ ಮತ್ತು ಸಂಜತ್ ದತ್ ಸೆರೆ ಸಿಕ್ಕಿದ್ದು, ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ. ಅಂದ್ಹಾಗೆ, ‘ಕಳಂಕ್’ ಚಿತ್ರದಲ್ಲಿ ಮಾಧುರಿ ಬಹಾರ್ ಬೇಗಂ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಂಜಯ್ ದತ್ ಬಾಲರಾಜ್ ಚೌಧರಿಯಾಗಿ ಅಭಿನಯಿಸಿದ್ದಾರೆ.

ಅದ್ದೂರಿ ಸೆಟ್, ಕಾಸ್ಟೂಮ್, ಬ್ಯಾಗ್ರೌಂಡ್ ಮ್ಯೂಸಿಕ್ ಪ್ರತಿಯೊಂದು ಸಹ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಟೀಸರ್ ಮೂಲಕವೇ ಈ ಪರಿ ಸದ್ದು ಮಾಡುತ್ತಿರುವ ‘ಕಳಂಕ್’ ಮುಂದಿನ ತಿಂಗಳು ಅಂದರೆ, ಏಪ್ರಿಲ್ 17ಕ್ಕೆ ತೆರೆಗೆ ಬರ್ತಿದೆ. ಹಳೆಯ ಸೂಪರ್ ಹಿಟ್ ಜೋಡಿ ಹೊಸದಾಗಿ ಹೇಗಿ ಕಾಣಿಸಿಕೊಂಡಿದೆ ಎನ್ನುವುದು ಸದ್ಯದ ಕುತೂಹಲ.

‘ಕೆ.ಜಿ.ಎಫ್’ ಚಿತ್ರದ ತಂತ್ರಜ್ಞರಿಗೆ ಜೀ ಕನ್ನಡ ವಾಹಿನಿಯಿಂದ ಸಿಕ್ತು ಹೆಮ್ಮೆಯ ಗೌರವ

#kalanka, #teaser, #balkaninews

Tags