ಸುದ್ದಿಗಳು

ರೆಬೆಲ್ ಸ್ಟಾರ್ ಅಂಬರೀಶ್ ಬಿರುದು ಮಿಸ್ಟೆಕ್ ಮಾಡಿದ ಕಲಾವಿದರ ಸಂಘ

ನಾಮ ಫಲಕದಲ್ಲಾದ ಬದಲಾವಣೆ

ಬೆಂಗಳೂರು.ಮಾ.15: ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ನಾಮಫಲಕದಲ್ಲಿ ಒಂದು ಸಣ್ಣ ಮಿಸ್ಟೇಕ್ ಆಗಿದ್ದು, ಅದನ್ನು ಸರಿಪಡಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ. ಹೌದು, ಆ ನಾಮಫಲಕದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಬಿರುದು ಮಿಸ್ಟೆಕ್ ಮಾಡಲಾಗಿದೆ.

ಕನ್ನಡ ಚಿತ್ರರಂಗದ ಕಲಾವಿದರಿಗೊಂದು ಸಂಘ ಮಾಡಬೇಕೆಂದು ಕನಸು ಹೊತ್ತವರು ಡಾ. ರಾಜ್ ಕುಮಾರ್. ಅದನ್ನು ನನಸು ಮಾಡಲು ರೆಬೆಲ್ ಸ್ಟಾರ್ ಅಂಬರೀಶ್ ರವರು ಬೆಂಗಳೂರಿನಲ್ಲಿರುವ ಚಾಮರಾಜಪೇಟೆಯಲ್ಲಿ ಒಂದು ಕಲಾವಿದರ ಸಂಘ ನಿರ್ಮಾಣ ಮಾಡಿ ಕನಸು ನನಸು ಮಾಡಿದ್ದರು. ಆದರೆ ‘ರೆಬೆಲ್ ಸ್ಟಾರ್ ಅಂಬರೀಶ್ ಹೋಗಿ ‘ರೇಬಲ್ ಸ್ಟಾರ್ ಅಂಬರೀಶ್’ ಎಂದು ತಪ್ಪಾಗಿ ಹೆಸರನ್ನು ನಮೂದಿಸಲಾಗಿದೆ.

ಈ ಬಗ್ಗೆ ಎಲ್ಲಾ ವೆಬ್ ಸೈಟ್ ಗಳಲ್ಲೂ ಬರಹಗಳು ಬರುತ್ತಿದ್ದು, ಆದಷ್ಟು ಬೇಗ ಈ ನಾಮ ಫಲಕದ ಮೇಲಿರುವ ಹೆಸರನ್ನು ಸರಿ ಮಾಡಿ ಎಂದು ನಾವೂ ಸಹ ಈ ಸಂಘದ ಕಛೇರಿಯ ನಿರ್ವಾಹಕರಿಗೆ ಮನವಿ ಮಾಡುತ್ತಿದ್ದೇವೆ.

ರೆಬೆಲ್ ಸ್ಟಾರ್ ಅಂಬರೀಶ್ ರವರು ನಮ್ಮನ್ನೆಲ್ಲಾ ಅಗಲಿದ್ದರೂ ಸಹ ಮಾನಸಿಕವಾಗಿ ಜೊತೆಯಾಗಿದ್ದಾರೆ. ಹೀಗಾಗಿ ಇಂತಹ ತಪ್ಪುಗಳು ಮತ್ತೊಮ್ಮೆ ಮರುಕಳಿಸಬಾರದೆಂದು ವಿನಂತಿಸಿಕೊಳ್ಳುತ್ತೇವೆ.

ಲೋಕಸಭಾ ಚುನಾವಣೆ: ನಿಖಿಲ್ ಗೆ ಮಾತ್ರವಲ್ಲ, ಹರಿಪ್ರಿಯಾ, ಉಪೇಂದ್ರರ ಚಿತ್ರಕ್ಕೂ ಸಮಸ್ಯೆ

#kalavidarasangha, #ambarishname, #balkaninews #filmnews, #kannadasuddigalu

Tags

Related Articles